ಒಲಿಂಪಿಕ್ಸ್ ಚಿನ್ನ ವಿಜೇತೆ ಹುಬ್ಬಳ್ಳಿಯ ಸಹನಾರನ್ನು ಸನ್ಮಾನಿಸಿದ ಸಿದ್ದರಾಮಯ್ಯ
ಹುಬ್ಬಳ್ಳಿ, ಜುಲೈ 05 : ಮಲೇಷಿಯಾದಲ್ಲಿ ನಡೆದ ಸ್ಟೂಡೆಂಟ್ಸ್ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕ ಜಯಿಸಿದ ಹುಬ್ಬಳ್ಳಿಯ ಸಹನಾ ಕುಲಕರ್ಣಿ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನಿಸಿದರು.
ಮಲೇಷ್ಯಾದಲ್ಲಿ ಜೂನ್ 29ರಿಂದ ಜುಲೈ 1ರ ವರಗೆ ನಡೆದ 3ನೇ ಅಂತಾರಾಷ್ಟ್ರೀಯ ಸ್ಟುಡೆಂಟ್ಸ್ ಒಲಿಂಪಿಕ್ಸ್ ಗೇಮ್ಸ್ ನ ಟೇಬಲ್ ಟೆನಿಸ್ ನಲ್ಲಿ ಹುಬ್ಬಳ್ಳಿಯ ಸಹನಾ ಕುಲಕರ್ಣಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಹುಬ್ಬಳ್ಳಿಯ ಕೆಎಲ್ ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಸಹನಾ, ಫೈನಲ್ ನಲ್ಲಿ ಮಲೇಷ್ಯಾ ಆಟಗಾರ್ತಿಯನ್ನು 11-8 ಪಾಯಿಂಟ್ಸ್ ಗಳ ಅಂತರದಿಂದ ಮಣಿಸಿ ಚಿನ್ನದ ಪದಕವನ್ನು ಮುಗಿಡಿಗೇರಿಸಿಕೊಂಡಿದ್ದರು.
ಫೈನಲ್ ಪಂದ್ಯದ 5 ಸೆಟ್‌ಗಳಲ್ಲಿ 3-2 ಅಂತರದಿಂದ ಜಯ ಸಾಧಿಸಿರುವ ಸಹನಾ ಮೊದಲ ಭಾರತದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.












Click it and Unblock the Notifications