ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿರುದ್ಧ ಪೌರ ಕಾರ್ವಿುಕರ ಪ್ರತಿಭಟನೆ: ಸಿಎಂಗೆ ರಕ್ತದಲ್ಲಿ ಪತ್ರ
ಹುಬ್ಬಳ್ಳಿ, ಅಕ್ಟೋಬರ್ 03: ಧಾರವಾಡ ಮಹಾನಗರ ಪಾಲಿಕೆಯು ಕಾನೂನುಬಾಹಿರವಾಗಿ ಮುಂದುವರಿಸಿರುವ ಸ್ವಚ್ಛತೆ ಹೊರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ, ಗುತ್ತಿಗೆ ಪೌರ ಕಾರ್ವಿುಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಅನಿರ್ದಿಷ್ಟ ಅವಧಿಯ ಪ್ರತಿಭಟನೆಯನ್ನುಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರಕ ಸಂಘದ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ವಿುಕರು ಪ್ರತಿಭಟನೆ ನಿರತರಾಗಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಾನವರಿಗೆ ಪತ್ರ ಬರೆಯುವ ಮೂಲಕ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ರಾಜ್ಯ ಸರ್ಕಾರ 2017ರಲ್ಲಿಯೇ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ, ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಸಲು ಆದೇಶ ಹೊರಡಿಸಿತ್ತು. ಆದರೆ, ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದು ಜಾರಿಗೆ ಬಂದಿಲ್ಲ. ಪಾಲಿಕೆಯ 799 ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಖಾಲಿ ಉಳಿದಿರುವ 340 ಪೌರ ಕಾರ್ವಿುಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕಾನೂನುಬಾಹಿರವಾಗಿ ಮುಂದುವರಿಸಿರುವ ಸ್ವಚ್ಛತೆ ಹೊರ ಗುತ್ತಿಗೆ ರದ್ದುಪಡಿಸಯವುದು ಹಾಗೂ ಇತರ ಬೇಡಿಕೆಗಳನ್ನು ಪೂರೈಸಲು ಆಗ್ರಹಿಸಿ ಅಯೋರಾತ್ರಿಯಿಂದ ಮುಂದುವರಿಸಿದ್ದಾರೆ. ಸುಮಾರು 300 ಕಾರ್ಮಿಕರು ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಧಾರವಾಡ ಜಿಲ್ಲಾ ಎಸ್ಸಿ ಎಸ್ಟಿ ಪೌರ ಕಾರ್ವಿುಕರ ಮತ್ತು ನೌಕರಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಗುತ್ತಿಗೆ ಪೌರ ಧರಣೆ ನಡೆಸುತಿದ್ದು, ರಾಜ್ಯ ಸರ್ಕಾರ 2017ರಲ್ಲಿಯೇ ಗುತ್ತಿಗೆ ಪದ್ಧತಿಯನ್ನು ರದ್ದು ಪಡಿಸಿ, ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಸಲು ಆದೇಶ ಹೊರಡಿಸಿತ್ತು. ಆದರೆ, ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದು ಜಾರಿಗೆ ಬಂದಿಲ್ಲ. ಪಾಲಿಕೆಯ 799 ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಖಾಲಿ ಉಳಿದಿರುವ 340 ಪೌರ ಕಾರ್ವಿುಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವಂತೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಬೇಕೆಂದು ವಿಜಯ ಗುಟ್ರಾಳ ಆಗ್ರಹಿಸಿದರು.












Click it and Unblock the Notifications