ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ನಟಿ ಕಾಜೋಲ್, ನೋಡಲು ಜನವೋ ಜನ

Posted By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವಂಬರ್ 30: ಬಾಲಿವುಡ್ ನಟಿ ಕಾಜೋಲ್ ಹಾಗೂ ಅವರ ಕುಟುಂಬ ಸದಸ್ಯರು ಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠಕ್ಕೆ ಗುರುವಾರ ಭೇಟಿ ನೀಡಿ ಸಿದ್ಧಾರೂಢ ಸ್ವಾಮಿ ಗದ್ದುಗೆಯ ದರ್ಶನ ಪಡೆದರು.

ತಾಯಿ ತನುಜಾ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನಟಿ ಕಾಜೋಲ್ ಸಿದ್ದಾರೂಢ ಶ್ರೀಗಳ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿಸಿದರು. ಬಳಿಕ ಕಾಜೋಲ್ ಧ್ಯಾನ ಮಾಡಿದರು.

ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಕಾಜೋಲ್ ಕುಟುಂಬ ಸದಸ್ಯರು ಆಗಮಿಸಿದ್ದರು. ಬಾಲ್ಯದಿಂದಲೂ ಕಾಜೋಲ್ ಕುಟುಂಬ ಸಿದ್ಧಾರೂಢ ಸ್ವಾಮೀಜಿಯ ಭಕ್ತರಾಗಿದ್ದಾರೆ.

Bollywood Actress Kajol Family Visit Hubblli Siddaroodha Mutt, Offered Special Pooja

ಅಷ್ಟೇ ಅಲ್ಲದೇ ಕಾಜೋಲ್ ಅವರ ತಾಯಿ ತನುಜಾ ಮುಖರ್ಜಿ ಕೂಡ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಭಕ್ತೆ. ಹೀಗಾಗಿ ಪ್ರತಿ ವರ್ಷವೂ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ .

ಆದರೆ, ಈ ವರ್ಷ ಕುಟುಂಬ ಸಮೇತರಾಗಿ ಬೇಟಿ ನೀಡಿದ್ದು ವಿಶೇಷ . ಇನ್ನು ಬಾಲಿವುಡ್ ಮೋಹಕ ತಾರೆಯನ್ನು ನೋಡಲು ಜನ ನಾ ಮುಂದು ತಾ ಮುಂದು ಅಂತ ಮುಗಿಬಿದ್ದರು.

ಜನರ ಗದ್ದಲದ ನಡುವೆಯೇ ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ಮುಂದೆ ಕುಳಿತು 15 ನಿಮಿಷಗಳ ಕಾಲ ದ್ಯಾನ ಮಾಡಿದರು.ಬಳಿಕ ಕುಟುಂಬದೊಂದಿಗೆ ಅಭಿಮಾನಿಗಳತ್ತ ಕೈ ಮಾಡಿ ವಿಮಾನ ಏರಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood Actress Kajol and Family Visit Hubblli Siddaroodha Mutt and Offered Special Pooja on November 30.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ