A for ANAND Film: ಶಸ್ತ್ರಚಿಕಿತ್ಸೆ‌ ಬಳಿಕ ಸೆಟ್ಟೇರಲಿರುವ ಸಿನಿಮಾಗಳ ಅಪ್ಡೇಟ್ ಕೊಟ್ಟ ಶಿವರಾಜ್ ಕುಮಾರ್

ಬೆಂಗಳೂರು, ನವೆಂಬರ್ 25: ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಅವರು ಅನಾರೋಗ್ಯ ಸಮಸ್ಯೆಗೆ ತುತ್ತಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ನುಡವೆ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ದೊಡ್ಡ ಸಕ್ಸಸ್‌ ಕಂಡಿದೆ. ಈ ಹಿನ್ನೆಲೆಯಲ್ಲಿ ನಟ ಶಿವಣ್ಣ ಅವರು ಪತ್ನಿ ಜೊತೆಗೆ ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಶಸ್ತ್ರಚಿಕಿತ್ಸೆ, ಹೊಸ ಸಿನಿಮಾಗಳು, ಸೀಕ್ವೆಲ್‌ಗಳ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಸೋಮವಾರ ಹುಬ್ಬಳ್ಳಿಯ ಅಪ್ಸರಾ ಚಿತ್ರ ಮಂದಿರಕ್ಕೆ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದರು. ಮಫ್ತಿ ಪ್ರೀಕ್ವೆಲ್ ಆಗಿರುವ 'ಬೈರತಿ ರಣಗಲ್' ಚಿತ್ರದ ಭರ್ಜರಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಅವರು ಪ್ರಚಾರಾರ್ಥವಾಗಿ ಥಿಯೇಟರ್ ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅವರು ತಮಗೂ ಹಾಗೂ ಹುಬ್ಬಳ್ಳಿಗೂ ಇರುವ ನಂಟಿನ‌ ಬಗ್ಗೆ ಮೆಲುಕು ಹಾಕಿದ್ದಾರೆ.

Bhairathi Ranagal Shivaraj Kumar s Success Tour in Hubballi Updates on Upcoming New Films

ತೆರೆದ ವಾಹನ ಮೇಲೆ‌ ನಿಂತು ಅಭಿಮಾನಿಗಳಿಗೆ ಕೈ ಬೀಸಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಜನುಮದ‌ಜೋಡಿ, ರಾಜಕುಮಾರ ಸೇರಿದಂತೆ ಹಲವು ಚಿತ್ರಗೀತೆ ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಭೈರತಿ ರಣಗಲ್ ಮೆಚ್ಚಿ ಈ ಸಕ್ಸಸ್‌ಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಾ. ಶಿವರಾಜ್ ಕುಮಾರ್, 'ಬೈರತಿ ರಣಗಲ್' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ,. ಉತ್ತರ ಕರ್ನಾಟಕ‌ ಸೇರಿದಂತೆ ರಾಜ್ಯದಾದ್ಯಂತ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮಫ್ತಿಯಲ್ಲಿ ನನ್ನ ಪಾತ್ರವನ್ನು ‌ಎಲ್ಲರೂ ಇಷ್ಟಪಟ್ಟಿದ್ದರು. ಬೈರತಿ ರಣಗಲ್ ಚಿತ್ರ ಎಲ್ಲರ ಹೃದಯಕ್ಕೆ ಮುಟ್ಟಿದೆ ಎಂದು ತಿಳಿಸಿದರು.

Bhairathi Ranagal Shivaraj Kumar s Success Tour in Hubballi Updates on Upcoming New Films

ಶಿವಣ್ಣರ ಮುಂದಿನ ಸಿನಿಮಾಗಳ ಅಪ್ಡೇಟ್ ಇಲ್ಲಿದೆ

ಆದಷ್ಟು ಶೀಘ್ರವೇ 'ಮಫ್ತಿ' ಸೀಕ್ವೆಲ್ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನೂ ಬಹುತಾರಾಗಣದ '45' ಸಿನಿಮಾ ಚಿತ್ರೀಕರಣ ಎಲ್ಲವು ಪೂರ್ಣಗೊಂಡಿದೆ. ಚಿತ್ರ ಇನ್ನೇನು ರಿಲೀಸ್ ಸಿದ್ಧವಾಗಿದೆ. ಕೌಟುಂಬಿಕ‌ ಕಥೆಗಳಿಗಾಗಿ ಸಾಕಷ್ಟು ಪ್ರಯತ್ನು ನಡೆದಿದೆ. ಮುಂದಿನ‌ ದಿನಗಳಲ್ಲೂ ಕೌಟುಂಬಿಕ‌‌ ಕಥಾಹಂದರ ಚಿತ್ರಗಳು‌ ಮೂಡಿ ಬರಲಿವೆ ಎಂದು ಅವರು ತಮ್ಮ ಫ್ಯಾನ್ಸ್‌ಗೆ ಭರವಸೆ ನೀಡಿದ್ದಾರೆ.

ಅನಾರೋಗ್ಯ ಕಾರಣ ಮುಂದಿನ ವಾರ ವಿದೇಶಕ್ಕೆ ತೆರಳುತ್ತಿದ್ದೇನೆ ಎಂದು ಶಿವರಾಜ್ ಕುಮಾರ್ ಅವರು, ಶಸ್ತ್ರಚಿಕಿತ್ಸೆ‌ ಬಳಿಕ ಹೊಸ ಸಿನಿಮಾಗಳ ಮುಹೂರ್ತದ ಬಗ್ಗೆ ಚರ್ಚೆ ಮಾಡಲಿದ್ದೇನೆ. ಗೀತಾ ಶಿವರಾಜ್ ಕುಮಾರ್ ಬ್ಯಾನರ್ ಅಡಿ‌ಯಲ್ಲಿ A ಫಾರ್ ಆನಂದ್ ಸಿನಿಮಾ (A for ANAND Film) ನಿರ್ಮಾಣಗೊಳ್ಳಲಿದೆ. ಒಟ್ಟಾರೆ 'ಮಫ್ತಿ' ಸೀಕ್ವೆಲ್, ಎ ಫಾರ್ ಆನಂದ್' ಸೇರಿದಂತೆ ಹೊಸ ಸಿನಿಮಾಗಳ ಮಹೂರ್ತ 2025ರ ಜನವರಿ ನಂತರ ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹದಾಯಿ ಹೋರಾಟಕ್ಕೆ ಬೆಂಬಲ ಇದ್ದೇ ಇದೆ

ಮಹದಾಯಿ ನದಿ ನೀರು ಯೋಜನೆ, ಹೋರಾಟ ವಿಚಾರ ಕುರಿತು ಮಾತನಾಡಿದ ಅವರು, ಈ‌ ಭಾಗದಲ್ಲೂ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ‌ ನೀಡುವುದಿಲ್ಲ ಎಂದು ಭಾವಿಸುವುದ ಬೇಡ. ಮಹದಾಯಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಆಗಮಿಸಲಿದ್ದೇವೆ. ಕನ್ನಡ ಚಿತ್ರರಂಗದ ಬಗ್ಗೆ ಈ‌ ಭಾಗದಲ್ಲಿರುವ ಕೊರಗು ನೀಗಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನಾವೆಲ್ಲ‌ ಒಗ್ಗಟ್ಟಾಗಿ ಈ ಭಾಗದಲ್ಲೂ ಹೋರಾಟದಲ್ಲಿ ಭಾಗಿಯಾಗಲಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+