ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ:ಪಾಲಿಕೆ ಸದಸ್ಯೆ ಇಬ್ಬರು ಮಕ್ಕಳು ಅರೆಸ್ಟ್‌

ಹುಬ್ಬಳ್ಳಿ, ಜುಲೈ 16: ಹುಬ್ಬಳ್ಳಿಯಲ್ಲಿ ಯುವಕನ ಮೇಲೆ ಬೆತ್ತಲೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಡಿಗೇರಿ ಪೊಲೀಸರು ಈಗ ಪಾಲಿಕೆ ಸದಸ್ಯೆಯ ಇಬ್ಬರ ಮಕ್ಕಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಸುಮಾರು ಮೂರು ನಾಲ್ಕು ತಿಂಗಳ ಹಿಂದೆಯೇ ನಡೆದಿರುವ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.

ಯವಕನ ಬೆತ್ತಲೆ ಮತ್ತು ಹಲ್ಲೆ ಪ್ರಕರಣಕ್ಕೆ ಈಗ ಪಾಲಿಕೆ ಸದಸ್ಯೆ ಮಂಜುಳಾ ಜಾಧವ್ ಅವರ ಮತ್ತೋರ್ವ ಪುತ್ರ ಅಭಿಷೇಕ್ ಜಾದವ್‌ ಸೇರಿ, ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ರಾಹುಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೇ ಪೊಲೀಸರು ಗಣೇಶ್ ಜಾದವ್ ನನ್ನು ಬಂಧಿಸಿದ್ದರು. ಗಣೇಶ್ ಜಾದವ್ ಮತ್ತು ಅಭಿಷೇಕ್ ಜಾದವ್ ಪಾಲಿಕೆ ಸದಸ್ಯೆ ಮಂಜುಳಾ ಪುತ್ರರಾಗಿದ್ದಾರೆ.

Assault On Youth Case: Corporator Children Were Arrested

ಅಭಿಷೇಕ್ ಜಾದವ್, ಗಣೇಶ್ ಜಾಧವ್ ರೌಡಿಶೀಟರ್‌ಗಳು ಎನ್ನಲಾಗಿದೆ. ವಿಧಾನಸಭೆ ಚುನಾವಣೆ ವೇಳೆ ಅಭಿಷೇಕ್ ನನ್ನು ಗಡಿಪಾರು ಮಾಡಲಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧ ನಡೆಸಿದ್ದಾರೆ. ಪೊಲೀಸರು ಸಂತ್ರಸ್ತ ಯುವಕನನ್ನು ಮತ್ತೆ ವಿಚಾರಣೆಗೊಳಪಡಿಸಿದ್ದಾರೆ.

ಈ ಹಿಂದೆ ಪ್ರಕರಣದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರಾದ ಸಂತೋಷ ಬಾಬು ಮಾತನಾಡಿದ್ದು, ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಪ್ರಕರಣ ಎರಡು ವಿಡಿಯೋ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ .ಯಾರೇ ಕೃತ್ಯದಲ್ಲಿ ಭಾಗಿಯಾಗಿದ್ದರೂ ಕಾನೂನು ಕ್ರಮಗಳನ್ನು ಜರುಗಿಸುತ್ತೇವೆ.

Assault On Youth Case: Corporator Children Were Arrested

ವಿಡಿಯೋದಲ್ಲಿ ಇರುವ ಯುವಕ ಇನ್ ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಬೈತಿದ್ದ. ಈ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಇದುವೆರಗೂ ಯುವಕ ದೂರು ಕೊಟ್ಟಿಲ್ಲ. ಮೂರು ನಾಲ್ಕು ತಿಂಗಳ ಹಿಂದೆ ನಡೆದ ಘಟನೆ‌ಯಾಗಿದ್ದು, ಆದರೆ ವಿಡಿಯೋ ಈಗ ಬಹಿರಂಗವಾಗಿರುವ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿ ತನಿಖೆ ಮಾಡುತ್ತಿದ್ದೇವೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+