ಬಿ.ಎಸ್‌.ಯಡಿಯೂರಪ್ಪನವರ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ: ಅರವಿಂದ್ ಬೆಲ್ಲದ್

ಹುಬ್ಬಳ್ಳಿ, ಮಾರ್ಚ್‌, 28: ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ, ಇದೊಂದು ರಾಜಕೀಯ ಪ್ರೇರಿತ ಘಟನೆಯಾಗಿದೆ. ಲಂಬಾಣಿ ಮತ್ತು ಬೋವಿ ಜನಾಂಗ 3% ಮಿಸಲಾತಿಗೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ನಮ್ಮ ಸರ್ಕಾರ ಜಾಣ ನಡೆ ಇಟ್ಟಿದ್ದು, ಜನರ ಅಪೇಕ್ಷಯಂತೆ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿದ್ದೇವೆ ಎಂದು ಶಾಸಕ ಅರವಿಂದ ಬೆಲ್ಲದ್‌ ಹುಬ್ಬಳ್ಳಿಯಲ್ಲಿ ಹೇಳಿದರು.

ಈ ದಾಳಿ ರಾಜಕೀಯ ಪ್ರೇರಿತ

ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೊರವ ಮತ್ತು ಭೋವಿ ಸಮಾಜಕ್ಕೆ 4.5% ಮಿಸಲಾತಿ ಸಿಕ್ಕಿದೆ. ಯಡಿಯೂರಪ್ಪನವರ ಮನೆಯ ಮೇಲೆ ದಾಳಿ ಅಲ್ಲಿಯ ಲೋಕಲ್ ಪಾಲಿಟಿಕ್ಸ್ ಪ್ರೇರಿತವಾಗಿದೆ ಎಂದರು.

Arvind Bellad reaction about attack on BS Yediyurappa house

ಇನ್ನು ಪಂಚಮಸಾಲಿ 2 ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸಮಾಜದ ಅಪೇಕ್ಷೆಗೆ ಬಿಜೆಪಿ ಸ್ಪಂದನೆ ನೀಡಿದೆ. ನಮ್ಮ ನೈಜ ಹೋರಾಟಕ್ಕೆ ಜಯ ಸಿಕ್ಕಿದೆ. ಬಸವರಾಜ ಬೊಮ್ಮಯಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಕಾಂಗ್ರೆಸ್‌ಗೆ ಸಿಡಿಲು ಬಡಿದದಂತೆ ಆಗಿದೆ ಎಂದು ವಾದ್ಗಾಳಿ ನಡೆಸಿದರು.

ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಟಿಕೆಟ್ ಬಗ್ಗೆ ಪಕ್ಷ ತಿರ್ಮಾನ ಮಾಡುತ್ತದೆ. ನನ್ನ ಕ್ಷೇತ್ರದ ಜನ ಅಭಿವೃದ್ಧಿ ನೋಡುತ್ತಾರೆ. ಕಳೆದ ಚುನಾವಣೆಗಿಂತ 20 ಸಾವಿರಕ್ಕೂ ಅಧಿಕ ಮತಗಳು ಬರುವ ವಿಶ್ವಾಸವಿದೆ ಎಂದರು.

ಕರ್ನಾಟಕದಲ್ಲಿ ಬಹಳಷ್ಟು ಜನರು ಜೇನುಗೂಡಿಗೆ ಕೈಹಾಕಬೇಡಿ ಎಂದು ಹೇಳಿದ್ದರು. ಆದರೆ ನಾವು ತುಳಿತಕ್ಕೆ ಒಳಗಾಗಿರುವ ಜನರಿಗೆ ಜೇನುತುಪ್ಪ ದೊರೆಯಲಿ ಎಂದು ಒಳಮೀಸಲಾತಿಯ ನಿರ್ಧಾರ ಮಾಡಿದೆವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ತಿಳಿಸಿದ್ದರು.

Arvind Bellad reaction about attack on BS Yediyurappa house

ಕಾರ್ಯಕ್ರಮವೊಂದಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ತುಳಿತಕ್ಕೊಳಗಾದ, ಹಿಂದುಳಿದ ವರ್ಗಗಳನ್ನು ಜೇನುಗೋಡಿಗೆ ಹೋಲಿಕೆ ಮಾಡಿದ್ದಾರೆ. ಅವರಿಗೆ ಮೀಸಲಾತಿ ಕಲ್ಪಿಸುವುದು ಸುಲಭದ ಕೆಲಸವಲ್ಲ ಎಂಬ ರೀತಿಯಲ್ಲಿ ಜನಾಂಗಗಳಿಗೆ ನ್ಯಾಯ ದೊರಕಿಸುವವರೆಗೂ ವಿಶ್ರಮಿಸುವುದಿಲ್ಲ. ಅವರಿಗೆ ಜೇನು ತುಪ್ಪ ಸಿಗಲಿ ಎಂಬ ಉದ್ದೇಶದಿಂದಲೇ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಮಾರ್ಮಿಕವಾಗಿ ಹೇಳಿದ್ದರು.

ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಬೇಡಿಕೆ ಸುಮಾರು 30 ವರ್ಷಗಳಿಂದಲೂ ಇದೆ. ಕಾಂಗ್ರೆಸ್ ಅವರಿಗೆ ಆಶ್ವಾಸನೆಗಳನ್ನು ನೀಡಿ ಮೂಗಿಗೆ ತುಪ್ಪ ಹಚ್ಚಿ ಕೊನೆಗೆ ಗಳಿಗೆಯಲ್ಲಿ ಕೈಕೊಟ್ಟಿತು. ಬಿಜೆಪಿಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು, ಅದರೂ ಬದ್ಧತೆಯ ನಮ್ಮ ಸರ್ಕಾರ ವರದಿ ತರಿಸಿ, ಅಧ್ಯಯನ ಮಾಡಿ, ಸಂಪುಟ ಉಪ ಸಮಿತಿ ರಚಿಸಿ, ಕಾನೂನಿನ ಪ್ರಕಾರ ವ್ಯವಸ್ಥಿತವಾಗಿ ಅನುಕೂಲ ಕಲ್ಪಿಸಲಾಗಿದೆ ಎಂದಿದ್ದರು.

ಕಾಂಗ್ರೆಸ್ ನಾಯಕರಿಗೆ ತಾವು ಮಾಡದೆ ಇರುವುದನ್ನು ಬಿಜೆಪಿ ಮಾಡಿದೆ ಎಂಬ ಕಾರಣಕ್ಕೆ ಅವರ ಹತಾಶ ಮನೋಭಾವ ಉಂಟಾಗಿದೆ. ಹತಾಶೆಯಿಂದಲೇ ಅವರು ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ಕಿಮ್ಮತ್ತಿಲ್ಲ. ಅವರು ಸದಾ ಎಸ್‌ಸಿ, ಎಸ್‌ಟಿ ಅವರನ್ನು ಯಾಮಾರಿಸಿಕೊಂಡೇ ಬಂದಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಅದು ಎಂದು ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್‌ನವರು ಸಹಾನುಭೂತಿ ತೋರಿಸುವ ಮೂಲಕ ಮತ ಪಡೆಯಬಹುದು ಎಂದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಸಾಮಾಜಿಕ, ಅಭಿವೃದ್ಧಿ, ಸಂಘ-ಸಂಸ್ಥೆಗಳ ಬೇಡಿಕೆ ವಿಚಾರದಲ್ಲಿ ಆಗಲಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಮಾಡಿದೆ. ಈ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ನಿರ್ಣಾಯಕ ತೀರ್ಮಾನ ಮಾಡುವ ಸರ್ಕಾರ ಇದೆ ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+