ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ?: ಪ್ರೀತಿಸಿ ಮದುವೆಯಾಗಿದ್ದ ಆಕಾಶ್‌ನ ಶವ ಪತ್ತೆ, ಸ್ನೇಹಿತರ ಮೇಲೆ ಶಂಕೆ
ಹುಬ್ಬಳ್ಳಿ, ಜೂನ್ 23: ಗಂಡು ಮೆಟ್ಟಿದ ನಾಡು ಎಂದೇ ಖ್ಯಾತವಾದ ವಾಣಿಜ್ಯ ನಗರಿ ಹುಬ್ಬಳ್ಳಿ ಇದೀಗ ಮೇಲಿಂದ ಮೇಲೆ ಕೊಲೆ ವಿಚಾರವಾಗಿ ಮುನ್ನೆಲೆಗೆ ಬರುತ್ತಿದೆ. ಇದೀಗ ನಗರದಲ್ಲಿ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರು ಪುತ್ರನನ್ನು ಕೊಲೆ ಮಾಡಲಾಗಿದೆ
ಶೇಖರಯ್ಯ ಮಠಪತಿ ಅವರ ಪುತ್ರ ಆಕಾಶ್ ಮಠಪತಿ (25) ಈತನ ಮೃತದೇಹವು ಇಲ್ಲಿಯ ಲೋಹಿಯಾ ನಗರದಲ್ಲಿ ಬಯಲು ಪ್ರದೇಶದಲ್ಲಿ ಶನಿವಾರ ಸಂಜೆ ಪತ್ತೆ ಆಗಿದೆ. ಆದರೆ, ಇದು ಕೊಲೆಯೋ ಅಥವಾ ಮದ್ಯದ ಅಮಲಿನಲ್ಲಿ ಬಿದ್ದು ಮೃತಪಟ್ಟಿದ್ದಾನೋ ಎಂಬುದು ದೃಢಪಡಬೇಕಿದೆ.

ಆಕಾಶ್‌ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ದೂರವಾಣಿ ಮೂಲಕ ಮಾಹಿತಿ ಪಡೆದು ಆತನ ತಾಯಿ ಕಣ್ಣಿರಿಟ್ಟು ಗೋಳಾಡುತ್ತಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ, ಡಿಸಿಪಿ ಕುಶಲ್ ಚೌಕ್ಸಿ, ಪೊಲೀಸ್ ಇನ್ಸ್‌ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
6 ಸ್ನೇಹಿತರ ಮೇಲೆ ಶಂಕೆ, 12 ಮಂದಿ ವಿರುದ್ಧ ದೂರು
ಆಕಾಶ ತಂದೆ ಶೇಖರಯ್ಯ ಮಠಪತಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮದ್ಯ ಕುಡಿಸಿ ಮಗ ಆಕಾಶ್ ನನ್ನು ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅವರು ಒಟ್ಟು 12 ಮಂದಿ ವಿರುದ್ಧ ದೂರು ನೀಡಿದ್ದಾರೆ. ಈ ಪೈಕಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಂಜೆ ವೇಳೆ ಮದ್ಯ ಪಾರ್ಟಿ ಈ ಭಾಗದಲ್ಲಿ ಜೋರಾಗಿ ನಡೆಯುತ್ತಿರುತ್ತದೆ. ಗುಂಪು ಸೇರಿರುವವರೇ ಆಕಾಶನನ್ನು ಹತ್ಯೆ ಮಾಡಿರಬಹುದು ಎಂದು ಕುಟುಂಬದವರು ದೂರಿದ್ದಾರೆ. ಅಲ್ಲದೇ ಮತ ಆಕಾಶ್ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ, ಮುರುಡೇಶ್ವರದಲ್ಲಿ ವಾಸಿಸುತ್ತಿದ್ದಾರೆ.
ಪತ್ನಿ ಮನೆಯವರ ಸಾಲದಿಂದ ಕಿರಿಕಿರಿ ಅನುಭವಿಸುತ್ತಿದ್ದ
ಆತನ ಹೆಂಡತಿ ಮನೆಯವರು ಹೆಚ್ಚು ಸಾಲ ಮಾಡಿಕೊಂಡಿದ್ದರು. ಅದರ ವಿಚಾರವಾಗಿ ಮಗ ಆಕಾಶ್ ನಲುಗಿ ಹೋಗಿದ್ದಾರೆ. ಈತನಿಗೆ ಹೆಂಡತಿ ಮನೆಯವರು ಕಿರಿಕಿರಿ ನೀಡಿದ್ದಾರೆ. ಪ್ರೀತಿ ವಿಷಯಕ್ಕೂ ಹತ್ಯೆ ನಡೆದಿರಬಹುದು ಆಕಾಶ್ ತಂದೆ ಆರೋಪ ಮಾಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆಕಾಶ್ ನನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ತಲೆಗೆ ಮಾತ್ರವೇ ಗಂಭೀರ ಗಾಯವಾಗಿರುವುದು ಪತ್ತೆಯಾಗಿದೆ. ಇಂದು ಕಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕವೇ ಈ ಸಾವು ಕೊಲೆಯೇ?, ಸಹಜ ಸಾವೇ ಎಂಬುದು ತಿಳಿದು ಬರಲಿದೆ.
ಇವರೇ ಆಕಾಶ್ ಸ್ನೇಹಿತರು
ಸದ್ಯ ಹುಬ್ಬಳ್ಳಿ ಪೊಲೀಸರು ಚಂದ್ರಶೇಖರಯ್ಯ ಮಠಪತಿ ಅವರು ಪ್ರೀತಿಸಿ ಮದುವೆ ಆಗಿದ್ದ ಕಾರಣಕ್ಕೂ ಕೊಲೆ ನಡೆದಿರಬಹುದು ಎಂದು ಆರೋಪಿಸಿದ್ದಾರೆ. ಜೊತೆಗೆ ಅವರು ಭರತ್ ನಾಯಕ, ಅರ್ಜುನ್ ಮಾಳಗಿ, ಸಂಜು ಕೊಪ್ಪದ, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ, ಮಹೇಶ್, ಕಾರ್ತಿಕ, ಕಾವ್ಯ, ಶ್ರೀದೇವಿ, ಮೋಹನ ನಾಯಕ ವಿರುದ್ಧ ದೂರು ದಾಖಲಿಸಿದ್ದಾರೆ.
ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ ರಾಹುಲ್, ಅರ್ಜುನ್, ಸಂಜು ಹಾಗೂ ವಿನಾಯಕ ಎಂಬುವವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಹು-ಧಾ ಪೊಲೀಸ್ ಆಯುಕ್ತರು ಹೇಳಿದ್ದೇನು?
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು,
ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗಾಯ ಆಗಿರುವುದು ಗೊತ್ತಾಗಿದೆ. ಮೃತ ಆಕಾಶ್ ತಂದೆ ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಆಕಾಶ್ ತಲೆ ಬಿಟ್ಟು ಬೇರೆ ಕಡೆ ಗಾಯಗಳು ಆಗಿಲ್ಲ. ತಂದೆ ಶೇಖರಯ್ಯ ಮಠಪತಿ ಅವನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರು ಜನ ಸ್ನೇಹಿತರ ಮೇಲೆ ಆರೋಪ ಮಾಡಿದ್ದಾರೆ. ನಾವು ಅವರು ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ.
ಅವರ ತಂದೆ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.ಅವರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications