ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮ್ ಆದ್ಮಿ ಪಕ್ಷ ಸಂಘಟನೆ, 'ಮಿಷನ್ - 5000' ಕ್ಕೆ ಚಾಲನೆ

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್. 28 : 'ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡಲು 'ಮಿಷನ್ - 5000' ಕ್ಕೆ ಚಾಲನೆ ನೀಡಲಾಗಿದೆ' ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಮನೀಷ್ ಸಿಸೋಡಿಯಾ, 'ಸ್ಥಳೀಯ ನಗರ ಸಂಸ್ಥೆಗಳ ಸುಮಾರು ಐದು ಸಾವಿರ ವಾರ್ಡ್‌ಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ' ಎಂದರು.

ಮುಂದಿನ ಚುನಾವಣೆಗೆ ಕೊಡಗಿನಲ್ಲಿ ಹಾಲಿ ಶಾಸಕರೇ ಅಭ್ಯರ್ಥಿಗಳು!ಮುಂದಿನ ಚುನಾವಣೆಗೆ ಕೊಡಗಿನಲ್ಲಿ ಹಾಲಿ ಶಾಸಕರೇ ಅಭ್ಯರ್ಥಿಗಳು!

AAP launches mission 5000 in Karnataka

'ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಲು 'ಮಿಷನ್ - 5000' ಕ್ಕೆ ಚಾಲನೆ ನೀಡಲಾಗಿದೆ. ಆದರೆ, 2018ರ ವಿಧಾನಸಭೆ ಚುನಾವಣೆ ಬಗ್ಗೆ ಯಾವುದೇ ಯೋಜನೆಯನ್ನು ರೂಪಿಸಿಲ್ಲ' ಎಂದು ತಿಳಿಸಿದರು.

ಭ್ರಷ್ಟರಿಗೆ ಶ್ರೀರಕ್ಷಾ ಭಾಗ್ಯ! ಇದು ರಾಜ್ಯದ ದೌರ್ಭಾಗ್ಯ!ಭ್ರಷ್ಟರಿಗೆ ಶ್ರೀರಕ್ಷಾ ಭಾಗ್ಯ! ಇದು ರಾಜ್ಯದ ದೌರ್ಭಾಗ್ಯ!

ಕೃಷಿ ನೀತಿ ಜಾರಿಗೊಳಿಸಿ : 'ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳು ಕಳೆದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದದಾರೆ. ಇದು ನಾಚಿಕೆಗಗೇಡಿನ ಸಂಗತಿಯಾಗಿದೆ. ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ರಾಷ್ಟ್ರೀಯ ಕೃತಿ ನೀತಿಯನ್ನು ಜಾರಿಗೊಳಿಸಬೇಕು' ಎಂದು ಸಿಸೋಡಿಯಾ ಒತ್ತಾಯಿಸಿದರು.

English summary
Arvind Kejriwal lead Aam Admi Party announced 'Mission-5000' in Karnataka to srenthan party in state. AAP candidates will contest for local bodies election in 5000 wards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X