'ಶೇ.24ರಷ್ಟು ಕಾಲೇಜು ಯುವತಿಯರು ವೇಶ್ಯಾವಾಟಿಕೆಯಲ್ಲಿ'

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ. 26 : ದೇಶದ ಶೇ. 24ರಷ್ಟು ಕಾಲೇಜು ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿದ್ದಾರೆ ಎಂದು ರೆಸ್ಕ್ಯೂ ಎನ್.ಜಿಎಂ ಸಂಸ್ಥಾಪಕ ಅಭಿಷೇಕ್ ಕ್ಲೀಫರ್ಡ್ ಕಳವಳ ವ್ಯಕ್ತಪಡಿಸಿದರು.

ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಹೆಚ್ಚಿದೆ. ದೇಶದ ಐದು ಕೋಟಿಗೂ ಹೆಚ್ಚು ಪುರುಷರಿಗೆ ಹೆಣ್ಣಿನ ಕೊರತೆ ಇದೆ.

ಇದೇ ರೀತಿ ಮುಂದುವರಿದರೆ ಮುಂದಿನ ದಿನಮಾನಗಳಲ್ಲಿ 52 ಕೋಟಿ ಪುರುಷರಿಗೆ ಹೆಣ್ಣು ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

24 percentage of this country College girls involving in prostition

ಹೆಣ್ಣು ಮಗು ಜನನದ ಬಗ್ಗೆ ಜನರಲ್ಲಿ ತಾತ್ಸಾರವಾಗುತ್ತಿದೆ. ಹೀಗಾಗಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಶೇ.70 ರಷ್ಟು ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದು ಕಂಡು ಬಂದಿದೆ.

ಸಂಸ್ಥೆಯ ಸದಸ್ಯೆ ವಿಜೇತಾ ಎಂ.ಎ.ಮಾತನಾಡಿ, ಪ್ರತಿ ವರ್ಷ ಒಂದು ಮಿಲಿಯನ್ ಹುಡುಗಿಯರು ಗರ್ಭಪಾತದಿಂದ ಮೃತಪಡುತ್ತಿದ್ದಾರೆ ಎಂದು ಮೂಲಗಳ ಮಾಹಿತಿಯಿದೆ.

ಜೊತೆಗೆ ಮಾನವ ಕಳ್ಳಸಾಗಾಣಿಕೆಯಂತಹ ದುಷ್ಕೃತ್ಯಗಳು ಹೆಚ್ಚುತ್ತಿವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
24 percentage of this country College girls involving in prostition Said Recuve NGM founder Abhishek Klefard in hubballi.
Please Wait while comments are loading...