• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಟ್ ಫಂಡ್, ನೂರಾರು ಜನರಿಗೆ ಸಾವಿರಾರು ಕೋಟಿ ದೋಖಾ

By Sachhidananda Acharya
|

ಕಲಘಟಗಿ, ಏಪ್ರಿಲ್ 17: ಭಾನುವಾರ ನೂರಾರು ಜನರು ಸಚಿವ ಸಂತೋಷ್ ಲಾಡ್ ಮನೆ ಮುಂದೆ ನೆರೆದಿದ್ದರು. ಇವರೆಲ್ಲಾ ಇಲ್ಲಿನ ಹರ್ಷ ಎಂಟರ್ ಪ್ರೈಸಸ್ ಕಂಪೆನಿಯಲ್ಲಿ ವಂಚನೆಗೆ ಒಳಗಾದವರು.

ಕಲಘಟಗಿಯ ಹರ್ಷ ಎಂಟರ್ ಪ್ರೈಸಸ್ ಕಂಪೆನಿಯಲ್ಲಿ ಸಾವಿರಾರು ಜನ ಹಣ ಹೂಡಿದ್ದರು. ಆದರೆ ಏಕಾಏಕಿ ಕಂಪೆನಿ ಜಾಗ ಖಾಲಿ ಮಾಡಿಕೊಂಡು ಹೋಗೇ ಬಿಟ್ಟಿತು. ಇದರಿಂದ ಜನರೀಗ ತಮ್ಮ ಹಣ ಕಳೆದುಕೊಂಡು ನಡು ರಸ್ತೆಯಲ್ಲಿ ನಿಲ್ಲುವಂತಾಗಿದೆ.

ಇಲ್ಲಿ ಹಣ ಹೂಡಿದ ಹೆಚ್ಚಿನವರು ಜಮೀನಿನ ಮೇಲೆ ಸಾಲ ಮಾಡಿ, ಸ್ತ್ರೀಶಕ್ತಿ ಸಂಘಗಳಿಂದ ಸಾಲ ತೆಗೆದು, ಎಮ್ಮೆ ಕರುಗಳನ್ನು ಮಾರಿ ಹಣ ಹೂಡಿದ್ದರು. ಹೀಗೆ ಹಣ ಹೂಡಿ ಅವರೆಲ್ಲಾ ಉತ್ತಮ ಬದುಕಿನ ಕನಸು ಕಾಣುತ್ತಿದ್ದರು.[ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಟಿವಿ ಕದ್ದೋನು ಮಾರ್ಕೆಟಿಂಗ್ ಮ್ಯಾನೇಜರ್!]

ಮನೆ ಕಟ್ಟುವ, ಮಗಳ ಮದುವೆ ಮಾಡುವ, ಮಕ್ಕಳ ವಿದ್ಯಾಭ್ಯಾಸ ಕೊಡಿಸುವ ಕನಸು ಹೆಚ್ಚಿನವರದಾಗಿತ್ತು. ಆದರೆ ಈಗ ಅವರೆಲ್ಲಾ ತಮ್ಮ ಹಣ ಕಳೆದುಕೊಂಡ ಪರಿತಪಿಸುವಂತಾಗಿದೆ.

ಈ ಹಿನ್ನಲೆಯಲ್ಲಿ ತಮ್ಮ ಅಳಲು ತೋಡಿಕೊಳ್ಳಲು ಮೋಸ ಹೋದವರು ಸಚಿವ ಸಂತೋಷ್ ಲಾಡ್ ಮನೆ ಮುಂದೆ ಭಾನುವಾರ ನೆರೆದಿದ್ದರು. ಮೋಸ ಹೋದವರ ಅಳಲು ನೋಡಲಾಗದೆ ಮುಖ್ಯಮಂತ್ರಿಗೆ ಈ ಕುರಿತು ಹೇಳಿ ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಸಂತೊಷ್ ಲಾಡ್ ಭರವಸೆ ನೀಡಿದ್ದಾರೆ.

ಜತೆಗೆ ಲಾಡ್ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಈ ವೇಳೆ ಸಂತ್ರಸ್ತರು ತಮ್ಮ ವಿಳಾಸ, ತಾವು ಹೂಡಿಕೆ ಮಾಡಿದ ಹಣದ ಮಾಹಿತಿಗಳನ್ನು ಪೊಲೀಸರಿಗೆ ನೀಡಿದರು.

4 ಜನರ ಬಂಧನ

ಹಣ ವಂಚಿಸಿದ ಆರೋಪ ಎದುರಿಸುತ್ತಿರುವ ಹರ್ಷ ಎಂಟರ್ ಪ್ರೈಸಸ್ ಮಾಲೀಕರ ಜತೆ ಕೆಲಸ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಧಾರವಾಡ ಪೊಲೀಸರು ತಿಳಿಸಿದ್ದಾರೆ.

ಆದರೆ ಕಂಪೆನಿಯ ಮಾಲಿಕರಾದ ಹರ್ಷ ಖಾಸನೀಸ ಅಲಿಯಾಸ್‌ ಸತ್ಯಬೋಧ, ಸಂಜೀವ ಖಾಸನೀಸ ಮತ್ತು ಶ್ರೀಕಾಂತ ಮಾತ್ರ ನಾಪತ್ತೆಯಾಗಿದ್ದಾರೆ. ಇವರು ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷ ಒಡ್ಡಿ ಸಾರ್ವಜನಿ ಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದಾರೆ.[ಉತ್ತರ ಕರ್ನಾಟಕದಲ್ಲಿ ನವಜಾತ ಶಿಶುಗಳಿಗೆ ಉಷ್ಣಾಂಶದ ಬಿಸಿ]

ಸಾವಿರಾರು ಕೋಟಿ ಹಗರಣ

ಹರ್ಷ ಎಂಟರ್ ಪ್ರೈಸಸ್ ಒಟ್ಟು ಸಾವಿರಾರು ಕೋಟಿ ರೂಪಾಯಿ ಹಣ ವಂಚಿಸಿದೆ ಎನ್ನಲಾಗುತ್ತಿದೆ. ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಹಳಿಯಾಳ, ಮುಂಡಗೋಡ ಸೇರಿದಂತೆ ರಾಜ್ಯದಾದ್ಯಂತ ಹಲವು ಪ್ರದೇಶಗಳ ಜನರು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇಲ್ಲಿವರೆಗೆ 34 ಮಂದಿ ದೂರು ನೀಡಿದ್ದಾರೆ. ಇವರು ತಾವು 1.26 ಕೋಟಿ ಹಣ ತೊಡಗಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಹಲವಾರು ಜನ ಠಾಣೆಗೆ ಬಂದು ಹೋಗುತ್ತಿದ್ದಾರೆ. ಆದರೆ, ಬಹುತೇಕರು ದೂರು ನೀಡಲು ಮುಂದಾಗುತ್ತಿಲ್ಲ. ಎಂದು ಧಾರವಾಡ ಜಿಲ್ಲಾ ಎಸ್ಪಿ ಧರ್ಮೇಂದ್ರಕುಮಾರ ಮೀನಾ ಮಾಹಿತಿ ನೀಡಿದ್ದಾರೆ.

ಆರೋಪಿ ಸಹೋದರರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಆದರೆ ವಿದೇಶಕ್ಕೆ ಹೋಗದಂತೆ ಜಾಗ್ರತೆ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Sathybodh Khasnis and his two brothers cheated more than 1600 crores to investors and is now absconding. Kalaghatagi and North Karnataka people invested heavily in this firm as they offering 7% interest per month for every investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X