ಸರಕಾರ ಇರುವಷ್ಟು ದಿನ ಕೆಲಸ ಮಾಡ್ತೀವಿ: ಎಚ್ ಡಿ ರೇವಣ್ಣ, ಸ್ವಾತಿ ನಕ್ಷತ್ರ
Recommended Video
ಹಾಸನ, ಜೂನ್ 19: ಮಧ್ಯಂತರ ಚುನಾವಣೆಯ ಬಗ್ಗೆ ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡ್ರು, ಬೆಂಗಳೂರಿನಲ್ಲಿ ಮಂಗಳವಾರ (ಜೂ 18) ಮಾರ್ಮಿಕವಾಗಿ ಹೇಳಿಕೆಯನ್ನು ನೀಡಿದ್ದರು. ಈಗ, ಅವರ ಪುತ್ರ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಸರದಿ.
ನಂದು ಸ್ವಾತಿ ನಕ್ಷತ್ರ, ಇಂತಹ ನಕ್ಷತ್ರದವರ ವಿರುದ್ದ ಯಾರದರೂ ಕೈಹಾಕಿದರೆ ಅದು ಅವರಿಗೇ ರಿವರ್ಸ್ ಆಗುತ್ತದೆ. ಸ್ವಾತಿ ನಕ್ಷತ್ರದವರಿಗೆ ಯಾವುದೇ ಮಾಟಮಂತ್ರ ತಟ್ಟುವುದಿಲ್ಲ ಎಂದು ಲೋಕಸಭಾ ಚುನಾವಣೆಗೆ ಮುನ್ನ ರೇವಣ್ಣ ಹೇಳಿದ್ದು, ವ್ಯಾಪಕ ಟ್ರೋಲ್ ಆಗಿತ್ತು. ಇದು, ಪರೋಕ್ಷವಾಗಿ ವಿರೋಧ ಪಕ್ಷದವರನ್ನು ಉದ್ದೇಶಿಸಿ, ರೇವಣ್ಣ ನೀಡಿದ್ದ ಹೇಳಿಕೆಯಾಗಿತ್ತು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, ಸಮ್ಮಿಶ್ರ ಸರಕಾರ ಪತನಗೊಳ್ಳುತ್ತೆ ಎಂದು ಒಂದು ವರ್ಷದಿಂದ ಯಡಿಯೂರಪ್ಪ ಸಾಹೇಬ್ರು ಹೇಳಿಕೊಂಡು ಬಂದರು, ಆದರೆ ಸರಕಾರ ಬಿತ್ತಾ ಎಂದು ಪ್ರಶ್ನಿಸಿದ್ದಾರೆ.

ನಾವು ನಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಸರಕಾರ ಇರುವಷ್ಟು ದಿನ ನಾವು ನಮ್ಮ ಇಲಾಖೆಯನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.
ನಮ್ಮ ಸರಕಾರದ ಮೇಲೆ ದೇವತಾನುಗ್ರಹ ಇದೆ ಎಂದು ಹಿಂದೆನೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಎಷ್ಟುದಿನ ದೇವರ ಅನುಗ್ರಹ ಇರುತ್ತದೋ, ಅಷ್ಟುದಿನ ಸರಕಾರ ಇರುತ್ತದೆ ಎಂದು ರೇವಣ್ಣ ಹೇಳಿರುವುದಕ್ಕೂ, ದೊಡ್ಡಗೌಡ್ರು ನಿನ್ನೆ ಹೇಳಿರುವುದಕ್ಕೂ ಏನಾದರೂ ಸಂಬಂಧ ಇದೆಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಕಳೆದ ಬಾರಿ ಬಿಜೆಪಿ ಜೊತೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಹಲವು ಜನಪರ ಕೆಲಸವನ್ನು ಮಾಡಿದ್ದೆವು. ಆದರೆ, ಯಾವುದರಿಂದಲೂ ನಮಗೆ ಪ್ರಚಾರ ಸಿಕ್ಕಿರಲಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications