ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ : 10 ವರ್ಷದ ರೈಲ್ವೆ ಮೇಲ್ಸೇತುವೆ ಬೇಡಿಕೆ ಈಗ ಈಡೇರಿತು

|
Google Oneindia Kannada News

ಹಾಸನ, ಅಕ್ಟೋಬರ್ 29 : ಹಾಸನ ನಗರದ ಜನರ ಬಹುದಿನದ ಬೇಡಿಕೆಗೆ ಈಗ ಮನ್ನಣೆ ಸಿಕ್ಕಿದೆ. ಎನ್.ಆರ್. ವೃತ್ತದಿಂದ ನೂತನ ಬಸ್ ನಿಲ್ದಾಣದ ತನಕ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ. 10 ವರ್ಷಗಳಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಾಡಲಾಗುತ್ತಿತ್ತು.

ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. '39 ಕೋಟಿ ರೂಪಾಯಿ ಅಂದಾಜು ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ಶೀಘ್ರದಲ್ಲೇ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.

ಅರಸೀಕೆರೆ-ತುಮಕೂರು-ಮೈಸೂರು ಪುಷ್-ಪುಲ್ ರೈಲು ಸಂಚಾರದಲ್ಲಿ ಬದಲಾವಣೆಅರಸೀಕೆರೆ-ತುಮಕೂರು-ಮೈಸೂರು ಪುಷ್-ಪುಲ್ ರೈಲು ಸಂಚಾರದಲ್ಲಿ ಬದಲಾವಣೆ

'ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಳಿಸಲಾಗಿದೆ. ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲು ಕೇಂದ್ರ ರೈಲ್ವೇ ಸಚಿವರನ್ನು ಆಹ್ವಾನಿಸಲಾಗಿದೆ' ಎಂದು ಎಚ್.ಡಿ.ರೇವಣ್ಣ ಮಾಹಿತಿ ನೀಡಿದ್ದಾರೆ.

ಹಾಸನ : 10 ವರ್ಷದ ರೈಲ್ವೇ ಮೇಲ್ಸೇತುವೆ ಯೋಜನೆಗೆ ಮರುಜೀವಹಾಸನ : 10 ವರ್ಷದ ರೈಲ್ವೇ ಮೇಲ್ಸೇತುವೆ ಯೋಜನೆಗೆ ಮರುಜೀವ

ಮೇಲ್ಸೇತುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಹಾಗೂ ಪರಿಹಾರ ವಿತರಣೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೇಲೂರು ಹಳೇಬೀಡಿಗೆ ಸಿಕ್ತು ಕೇಂದ್ರ ಸರ್ಕಾರದ ಕಿರೀಟ! ಬೇಲೂರು ಹಳೇಬೀಡಿಗೆ ಸಿಕ್ತು ಕೇಂದ್ರ ಸರ್ಕಾರದ ಕಿರೀಟ!

ಕಾಮಗಾರಿಗೆ ಅನುಮೋದನೆ

ಕಾಮಗಾರಿಗೆ ಅನುಮೋದನೆ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು, '10 ವರ್ಷಗಳ ಹಿಂದೆಯೇ ಹಾಸನ, ಹೊಳೆ ನರಸಿಪುರ, ಹಂಗರಹಳ್ಳಿ , ಚನ್ನರಾಯಪಟ್ಟಣ ಮಾರ್ಗಗಳ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಇದೀಗ ಹಂತಹಂತವಾಗಿ ಕಾಮಗಾರಿಗಳಿಗೆ ಅನುಮೋದನೆ ಮತ್ತು ಚಾಲನೆ ದೊರೆಯುತ್ತಿದೆ' ಎಂದು ಹೇಳಿದರು.

ಹಾಸನ-ಬೇಲೂರು ರೈಲು ಮಾರ್ಗ

ಹಾಸನ-ಬೇಲೂರು ರೈಲು ಮಾರ್ಗ

'ಹಾಸನ-ಬೇಲೂರು ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು 480 ಕೋಟಿ ರೂಪಾಯಿಗಳ ಕಾಮಗಾರಿ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ. ನಗರದ ನೂತನ ಬಸ್ ನಿಲ್ದಾಣದ ವರಗೆ 4 ಪಥದ ರಸ್ತೆಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಅದನ್ನು ಪರಿವರ್ತಿಸುವಂತೆ ಸೂಚಿಸಲಾಗಿದೆ' ಎಂದು ಎಚ್.ಡಿ.ರೇವಣ್ಣ ಹೇಳಿದರು.

ಜನರಿಗೆ ಅನುಕೂಲ

ಜನರಿಗೆ ಅನುಕೂಲ

'ಶಂಕು ಸ್ಥಾಪನೆಯಾದ ಬಳಿಕ 20 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆಸಲಾಗತ್ತದೆ. ಬಸ್ ನಿಲ್ದಾಣದಿಂದ ಜಿಲ್ಲಾ ಆಸ್ಪತ್ರೆಗೆ ಮೇಲು ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಿ ರೋಗಿಗಳ ಉಚಿತ ಸಾರಿಗೆ ಸೇವೆಗೆ ಕೆಲವು ವಿದ್ಯುತ್ ಚಾಲಿತ ಲಘು ವಾಹನಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಬಸ್ ಮತ್ತು ರೈಲ್ವೆ ನಿಲ್ದಾಣದಿಂದ ನೇರವಾಗಿ ಬಿ.ಎಂ.ರಸ್ತೆ ಮತ್ತು ಜಿಲ್ಲಾ ಆಸ್ಪತ್ರೆಗೆ ಹೋಗಬಹುದು' ಎಂದು ರೇವಣ್ಣ ತಿಳಿಸಿದರು.

200 ಕೋಟಿ ರೂ. ಕಾಮಗಾರಿ

200 ಕೋಟಿ ರೂ. ಕಾಮಗಾರಿ

'ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದಲೂ 200 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಕೈಗೊಳ್ಳಲಾಗುವುದು . ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂ ಸ್ವಾಧೀನ ಹಾಗೂ ಪರಿಹಾರ ವಿತರಣೆ ಪ್ರಕ್ರಿಯೆ ಹಿಂದೆಯೆ ಮುಗಿದಿದೆ ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ರೇವಣ್ಣ ಅವರು ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧ ಯೋಜನೆಗಳು

ಜಿಲ್ಲೆಯ ವಿವಿಧ ಯೋಜನೆಗಳು

'ಜಿಲ್ಲೆಯಾದ್ಯಂತ ಆರೋಗ್ಯ ಚಿಕಿತ್ಸಾ ಸೌಲಭ್ಯಗಳ ಸುಧಾರಣೆಗೆ ತರುಲು ವಿಂತನೆ ಹಾಗೂ ಪ್ರಯತ್ನ ನಡೆದಿದೆ. ಈ ಬಗ್ಗೆ ಚರ್ಚಿಸಲು ಇನ್ನೊಂದು ವಾರದಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕರೊಂದಿಗೆ ಸಭೆ ನಡೆಸಲಾಗುತ್ತದೆ' ಎಂದರು.

'ಜಿಲ್ಲೆಯಲ್ಲಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯ ಹಾಗೂ ನೂತನ ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ನೀಡಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು.

English summary
The work of Railway flyover between NR circle and New bus stand Hassan city, Hassan district will began soon. Tender process for the project completed. Hassan district in-charge and PWD minister H.D.Revanna said that, work will complete in 20 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X