ಹಾಸನಾಂಬೆ ದರ್ಶನ: ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಕ್ಲಾಸ್
Recommended Video

ಹಾಸನ, ಅಕ್ಟೋಬರ್ 29: ಹಾಸನದ ಐತಿಹಾಸಿಕ ಹಾಸನಾಂಬೆ ದೇವಾಲಯ ನವೆಂಬರ್ 1 ರಿಂದ ಬಾಗಿಲು ತೆರೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ ಮಾಡಲು ಇಂದು ಜಿಲ್ಲಾಧಿಕಾರಿ ರೋಹಿಣಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಜಾತ್ರಾಮಹೋತ್ಸವ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಅವರು, ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಆಗಲಾರದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಪ್ರತಿಯೊಂದು ಇಲಾಖೆಗೂ ಕರ್ತವ್ಯಗಳ ಹಂಚಿಕೆ ಮಾಡಿದ ಜಿಲ್ಲಾಧಿಕಾರಿ ರೋಹಿಣಿ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದ ಮೂಲಕ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಬೇಕು ಎಂದು ಹೇಳಿದರು.

ಬಾಗಿಲು ತೆರೆದಿರುವಷ್ಟು ದಿನವೂ ಹೆಚ್ಚಿನ ಸಮಯ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಭಕ್ತಾಧಿಗಳ ನಿಯಂತ್ರಣ ಹಾಗೂ ಇನ್ನಿತರೆ ಕಾರ್ಯಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳು, ಸ್ಕೌಟ್, ಗೈಡ್ಸ್ ಸದಸ್ಯರನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೆಲಿ ಟೂರಿಸಂ (ಹೆಲಿಕಾಪ್ಟರ್‌ನಲ್ಲಿ ಹಾಸನದ ದರ್ಶನ) ಈ ಬಾರಿಯ ವಿಶೇಷವಾಗಿದ್ದು, ಅದರ ಯಶಸ್ಸಿಗೆ ಶ್ರಮಿಸಬೇಕು. ಸ್ವಚ್ಛತೆಯ ಕಡೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು. ಹಾಸನಾಂಬೆ ದೇವಸ್ಥಾನವು ನವೆಂಬರ್ 1 ರಿಂದ 9 ರವರೆಗೆ ತೆಗೆದಿರುತ್ತದೆ.












Click it and Unblock the Notifications