Get Updates
Get notified of breaking news, exclusive insights, and must-see stories!

ಬೇಲೂರು ಜಾತ್ರೆಯಲ್ಲಿ ಕುರಾನ್ ಪಠಣೆ; ಏನಿದು ವಿವಾದ?

ಹಾಸನ, ಏಪ್ರಿಲ್ 12; ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವಗಳಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವನ್ನು ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲಾಗಿದೆ ಎಂದು ಬೇಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಲತಾ ಹೇಳಿದ್ದಾರೆ.

ಮಂಗಳವಾರ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಅದು ನಡೆದುಕೊಂಡು ಬಂದಿದೆ" ಎಂದರು.

"ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿದೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ. ಅವರ ನಿರ್ದೇಶನದಂತೆ ನಾವು ನಡೆಯಲಿದ್ದೇವೆ" ಎಂದು ಸ್ಪಷ್ಟಪಡಿಸಿದರು.

beluru

"ರಥದ ಪಕ್ಕ ನಿಂತು ಕುರಾನ್ ಪಠಣ ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದೊಂದು ಪ್ರತೀತಿಯಿದೆ. 32 ಪುಟಗಳಿರುವ ಕೈಪಿಡಿಯಲ್ಲಿ ಇದು ಉಲ್ಲೇಖವಾಗಿದೆ. ಇಂದು ಈ ಬಗ್ಗೆ ನಿರ್ದೇಶನ ಬರುವ ನಿರೀಕ್ಷೆಯಿದ್ದು, ನಂತರ ಅದರಂತೆ ನಡೆಯುತ್ತೇವೆ" ಎಂದು ವಿದ್ಯಾಲತಾ ಮಾಹಿತಿ ನೀಡಿದರು.

ಮುಸ್ಲಿಂ ವ್ಯಾಪಾರಿಗಳ ಅಂಗಡಿ; ಬುಧವಾರದಿಂದ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಬಳಿ 100ಕ್ಕೂ ಹೆಚ್ಚು ಮಳಿಗೆ ಹಾಕಲಾಗಿದೆ. ಆದರೆ ಸುಮಾರು 15 ಜನ ಮುಸ್ಲಿಮರೂ ಕೂಡ ಅಂಗಡಿ ಹಾಕಿದ್ದಾರೆ. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಚರ್ಚೆ ಕೇಳಿಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆಯವರು ಜಿಲ್ಲಾಧಿಕಾರಿ, ತಹಶೀಲ್ದಾರ್, ದೇವಾಲಯದ ಸಿಇಓಗೆ ಮನವಿ ಸಲ್ಲಿಸಿದ್ದರು.

ಜಾತ್ರೆಯ ಸಂದರ್ಭದಲ್ಲಿ ಮಳಿಗೆ ಹಾಕುವ ವಿಚಾರವಾಗಿ ಸಿದ್ದೇಶ್ ಎಂಬವರು ಟೆಂಡರ್ ಪಡೆದಿದ್ದಾರೆ. ಟೆಂಡರ್ ಪುರಸಭೆ ವ್ಯಾಪ್ತಿಗೆ ಸೇರಿದ್ದು, ದೇವಾಲಯದ ಆಡಳಿತ ಮಂಡಳಿಗೂ ಇದಕ್ಕೂ ಸಂಬಂಧವಿಲ್ಲ. ಈ ಬಾರಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ನೂರು ಮಳಿಗೆ ಇಡಲಾಗಿದ್ದು, ಅದರಲ್ಲಿ 15 ಮುಸ್ಲಿಂ ಕುಟುಂಬಗಳೂ ಕೂಡ ಸೇರಿವೆ ಎಂದು ಟೆಂಡರ್ ಪಡೆದವರು ತಿಳಿಸಿದ್ದಾರೆ. ಪ್ರತಿ ವರ್ಷ ಸಾಕಷ್ಟು ಮುಸ್ಲಿಂ ವ್ಯಾಪಾರಿಗಳು ಆವರಣದಲ್ಲಿ ಅಂಗಡಿಗಳನ್ನು ಹಾಕುತ್ತಿದ್ದರು. ಈ ಭಾರೀ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಮುಸ್ಲಿಂ ವ್ಯಾಪಾರಿಗಳು ಅಂಗಡಿ ಹಾಕಿದ್ದಾರೆ.

ಹಲವಾರು ಭಕ್ತರು ಆಗಮಿಸುವ ನಿರೀಕ್ಷೆ; ದೇವಾಲಯದಲ್ಲಿ ಈಗಾಗಲೇ ಪಾಂಚರಾತ್ರಾ ನಿಮಿತ್ತ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿವೆ. ಬುಧವಾರ ಬೆಳಗ್ಗೆ ನಡೆಯಲಿರುವ ಗಳಿಗೆ ತೇರು (ಚಿಕ್ಕತೇರು) ರಥೋತ್ಸವ ನಡೆಯುತ್ತದೆ. ದೇವರಿಗೆ ಸಂಪೂರ್ಣ ಅಲಂಕಾರ, ಮಹಾಮಂಗಳಾರತಿ ನಡೆಯಲಿದ್ದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

vidyalatha

ಶ್ರೀ ಚನ್ನಕೇಶವಸ್ವಾಮಿ ತೇರು (ಚಿಕ್ಕತೇರು) ವೇಳೆ ಕುರಾನ್ ಪಠಣ ವಿಚಾರವಾಗಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಮಾಡಿದ್ದು ಹಿಂದಿನಿಂದ ನಡೆದುಕೊಂಡು ಬಂದ ರೂಢಿ ಸಂಪ್ರದಾಯದಂತೆ ನಡೆಸಲು ಆದೇಶ ಮಾಡಿದ್ದಾರೆ.

ಕುರಾನ್ ಪಠಣ ಮಾಡಬೇಕು ಬೇಡವೋ ಎಂಬ ಗೊಂದಲಕ್ಕೆ ಧಾರ್ಮಿಕ ದತ್ತಿ ಇಲಾಖೆ ತೆರೆ ಎಳೆದಿದೆ. ಹಿಂದಿನಿಂದಲೂ ಗಳಿಗೆ ತೇರಿಗು ಮುನ್ನ ಕುರಾನ್ ಪಠಣ ಮಾಡುವ ಖಾಜ ಸಾಹೇಬರು, ನಂತರ ರಥೋತ್ಸವ ನಡೆಯಲಿದ್ದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಪಾಲಿಸುವಂತೆ ಧಾರ್ಮಿಕ ದತ್ತ ಇಲಾಖೆ ಆದೇಶ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+