Bhavani Revanna VS Preetham Gowda: ಸ್ವರೂಪ್‌ ನನ್ನ ಮಗ ಎಂದಿದ್ದ ಭವಾನಿ ಮಾತಿಗೆ ಪ್ರೀತಂ ಗೌಡ ಪ್ರತಿಕ್ರಿಯೆ ಹೀಗಿತ್ತು

ಹಾಸನ, ಏಪ್ರಿಲ್‌, 27: ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ‌ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದು, ಅವರ ಪ್ರೀತಿ ಸ್ವರೂಪ್ ಮೇಲಿದೆ, ಅದು ಎಲ್ಲಾರಿಗೂ ಗೊತ್ತಾಗಿದೆ. ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರುವುದು ಉತ್ತಮವಾದ ಬೆಳವಣಿಗೆ ಎಂದು ವ್ಯಂಗ್ಯವಾಡಿದರು.

ಅವರ ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ 2024ಕ್ಕೆ ಅವರ ಮಗ ಎಂಪಿ ಅಭ್ಯರ್ಥಿ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಅವರು ಚುನಾವಣೆ ಮಾಡುತ್ತಾ ಇರುವುದು 2023ರ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿ ಅಂತಾ ಅಲ್ಲ. 2024ಕ್ಕೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಮಾಡೋದಕ್ಕೆ ಎಂದು ದೂರಿದರು.

Preetham J Gowda reaction to Bhavani Revanna Saying Swaroop is my son

ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಚುನಾವಣೆ ಮಾಡುತ್ತಿದ್ದಾರೆ. ಈಗ ಏನು ಮಾಡಿದರೂ ಜನಸಾಮಾನ್ಯರಿಗೆ ಅರ್ಥ ಆಗುತ್ತದೆ. ಮತ್ತೊಂದೆಡೆ ಬಿಟ್ಟೊಹೋಗಿದ್ದ ದತ್ತಣ್ಣನನ್ನ ವಾಪಸ್‌ ಎಲ್ಲರೂ ಹೋಗಿ ಕರೆದುಕೊಂಡು ಬಂದಿದ್ದು ಯಾಕೆ? ಎಂದು ಪ್ರಶ್ನಿಸಿದರು. ಹಾಗೆಯೆ ಹಾಸನದಲ್ಲಿ ಯಾರು ಅಭ್ಯರ್ಥಿ ಎಂದು ಕೇಳಿದರೆ ಅವರು ಹೆಸರು ಗೊತ್ತಿಲ್ಲ ಅಂತಾ ಹೇಳಿದ್ದರು. ಈಗ ನನ್ನ ಮಗ ಅಂತಾ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

2024ರದ್ದು ಜ್ಞಾಪಕ ಆಗುತ್ತಿದೆ, 2023ರದ್ದು ಫಲಿತಾಂಶ ಮುಗಿದು ಹೋಗಿದೆ. 2024ಕ್ಕೆ ಉಳಿದುಕೊಳ್ಳಬೇಕು ಅಂದರೆ ಏನಾದರೂ ತಂತ್ರ ಮಾಡಬೇಕೆಂದು ಮಗ, ಅಮ್ಮ, ತಂದೆ, ತಾಯಿ ಈ ಎಲ್ಲಾ ಪದಗಳನ್ನು ಜ್ಞಾಪಕ ಮಾಡಿಕೊಳ್ಳುತ್ತಾ ಇದ್ದಾರೆ ಎಂದರು.

ಒಟ್ಟಿನಲ್ಲಿ ಅವರು ಅದೇ ರೀತಿ ಇದ್ದು ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಿ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಲೇಬೇಕು. ವಿರೋಧ ಪಕ್ಷ ಇರಲಿಲ್ಲ ಅಂದರೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರ ಪಕ್ಷದ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+