Pen Drive Case: ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಮೇ 30ಕ್ಕೆ ಹಾಸನ ಚಲೋ ಹೋರಾಟ!
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30ಕ್ಕೆ ಹಾಸನ ಚಲೋ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಈ ಹೋರಾಟ ನಡೆಯಲಿದೆ.
ಮಹಿಳೆಯರ ಘನತೆ ಉಳಿಸಿ ಹಾಸನ ಗೌರವ ಕಾಪಾಡಿ ಎಂಬ ಸ್ಲೋಗನ್‌ನ್ನೊಂದಿಗೆ ಬೃಹತ್ ಹೋರಾಟ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ಗಳನ್ನೂ ಬಿಡುಗಡೆ ಮಾಡಲಾಗಿದೆ. ಸಂಘಟನೆಯ ಮುಖಂಡ ದರ್ಮೇಶ್ ಇಂದು ಹಾಸನ ಚಲೋ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಮೇ 30ಕ್ಕೆ ಬೃಹತ್ ಹೋರಾಟ ನಡೆಯಲಿದೆ. ಇದರಲ್ಲಿ ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ಸೇರಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ ಎಂದರು.

ಅಲ್ಲದೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ವೀಡಿಯೋ ಹಂಚಿಕೆಯ ಷಡ್ಯಂತ್ರ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಈ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು. ಪೆನ್‌ಡ್ರೈವ್ ವಿಚಾರ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲೂ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಿಂದ ಹಾಸನದ ಗೌರವ ಹಾಳಾಗಿದೆ. ಇದನ್ನು ಉಳಿಸಲು ನಮ್ಮ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.
ಅಲ್ಲದೆ ಈ ಹೋರಾಟದಲ್ಲಿ ಅಂಗನವಾಡಿ, ಬಿಡಿಯೂಟ, ಆಶಾ ಕಾರ್ಯಕರ್ತೆಯರು ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೆ ಕೆಲವರು ಈ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ದರ್ಮೇಶ್ ಕಿಡಿ ಕಾರಿದರು.
ಹೆಚ್‌ಡಿ ಕುಮಾರಸ್ವಾಮಿ ಅವರು ಇದು ಸರ್ಕಾರಿ ಪ್ರಯೋಜಿತ ಹೋರಾಟ ಎಂದು ಹೇಳಿದ್ದಾರೆ. ಇದು ಬೇಜವಬ್ದಾರಿ ಹೇಳಿಕೆ. ಅವರು ಹಾಗಿದ್ದರೆ ಮಹಿಳೆಯರ ಪರವಾಗಿ ಇಲ್ಲವೇ? ಇಷ್ಟೊಂದು ಹಗರಣ ಆಗಿರುವಾಗ ಅವರು ಈ ಹೇಳಿಕೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ದರ್ಮೇಶ್ ಅವರು ಆಕ್ರೋಶಗೊಂಡರು.

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು, ಈ ವಿಡಿಯೋಗಳಲ್ಲಿ ಪ್ರಜ್ವಲ್ ಅವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರನ್ನು ಬಂಧಿಸಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಸರ್ಕಾರ ಎಸ್‌ಐಟಿ ತಮಡವನ್ನು ರಚನೆ ಮಾಡಿದೆ.
ಆದರೆ ಪನ್‌ಡ್ರೈವ್ ವಿಚಾರ ಹೊರಬೀಳುತ್ತಿದ್ದಂತೆ ಅಂದರೆ ಹಾಸನ ಲೋಕಸಭಾ ಚುನಾವಣೆಗೆ ಮತದಾನ ಪೂರ್ಣಗೊಂಡಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಪ್ರಜ್ವಲ್ ಅವರ ವಿರುದ್ಧ ದೂರು ನೀಡಿದ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೀಗ ಅವರು ಹೊರಬಂದಿದ್ದಾರೆ.
ಆದರೆ ಪ್ರಕರಣದ ಮುಖ್ಯ ಆರೋಪ ಪ್ರಜ್ವಲ್ ಜರ್ಮನ್‌ಗೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ. ಪ್ರಜ್ವಲ್‌ಗೆ ನೋಟೀಸ್ ಜಾರಿ ಮಾಡಿದರೂ ಅವರು ವಾಪಾಸ್ಸಾಗದ ಕಾರಣ ಅವರ ಮೇಲಿರುವ ಅನುಮಾನ ಹೆಚ್ಚಾಗಿದೆ. ಹೀಗಾಗಿ ಅವರನ್ನು ತಕ್ಷಣ ಕರೆಸಬೇಕು ವಿಚಾರಣೆ ನಡೆಸಬೇಕು ಎನ್ನುವ ಒತ್ತಡಗಳು ಹೆಚ್ಚಾಗಿವೆ.
ಮತ್ತೊಂದೆಡೆ ಹಾಸನ ಲೋಕಸಬಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದರೆ ವಿದೇಶದಿಂದ ವಾಪಸ್ ಆಗುತ್ತಾರೆನ್ನುವ ಮಾತುಗಳು ಕೇಳಿ ಬಂದಿವೆ. ಇಲ್ಲದಿದ್ದರೆ ಅವರು ತಡವಾಗಬಹುದು ಎನ್ನುವ ಗುಮಾನಿಗಳೂ ಹಬ್ಬಿ. ಒಟ್ಟಿನಲ್ಲಿ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು ಎಸ್‌ಐಟಿ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಕರೆಸುವ ಸಾಧ್ಯತೆಗಳು ಇವೆ.












Click it and Unblock the Notifications