ನೆರೆ ಪೀಡಿತ, ಭೂ ಕುಸಿತ ಪ್ರದೇಶಗಳಿಗೆ ಎಚ್ ಡಿ ರೇವಣ್ಣ ಭೇಟಿ

ಹಾಸನ ಆಗಸ್ಟ್ 23: ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ. ರೇವಣ್ಣ ಅವರು ಸಕಲೇಶಪುರ ತಾಲ್ಲೂಕಿನ ನೆರೆ ಪೀಡಿತ ಹಾಗೂ ಬಿಸಲೆ ಬಳಿ ಭೂಕುಸಿತಗೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ನಂತರ ನಿರಾಶ್ರಿತ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಬಿಸಲೆ, ಮಾಗೇರಿ, ವಣಗೂರು, ಹಿಜ್ಜನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಈಗಾಗಲೇ ನೆರೆ ಪೀಡಿತ ಪ್ರದೇಶಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಯಾರು ಕೂಡ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.

ಮಳೆಯಿಂದಾಗಿರುವ ಹಾನಿಯನ್ನು ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಸೇರಿ ಒಂದು ಜಂಟಿ ವರದಿಯನ್ನು ನೀಡಬೇಕು. ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಮನವಿ ಮಾಡಲಾಗುವುದು ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವು ನೆರವು ನೀಡಲು ಮುಂದೆ ಬರಬೇಕು ಎಂದರು.

ಸಂತ್ರಸ್ತರಿಗೆ ಸಾರ್ವಜನಿಕರು ಸ್ಪಂದಿಸಿ ಸಹಾಯ ಮಾಡುತ್ತಿದ್ದಾರೆ ಅವರೆಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು. ಸಕಲೇಶಪುರ ತಾಲ್ಲೂಕುನಲ್ಲಿ 100 ಕೋಟಿ ಅರ್ಥಿಕ ನಷ್ಟ ಸಂಭವಿಸಿದೆ. ರಸ್ತೆಗಳು ಬಾರಿ ಪ್ರಮಾಣದಲ್ಲಿ ಹಾನಿಗೀಡಾಗಿದೆ ಅದನ್ನು ಸರಿಪಡಿಸಲು ಕಾಲಾವಕಾಶಬೇಕು.

ಒಟ್ಟು 6 ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಹಾನಿ ಉಂಟಾಗಿದೆ

ಒಟ್ಟು 6 ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಹಾನಿ ಉಂಟಾಗಿದೆ

ಶಿರಾಡಿಘಾಟ್ ರಸ್ತೆಯು ಬಾರಿ ಕುಸಿತದಿಂದ ಸಾಕಷ್ಟು ಹಾನಿಯಾಗಿದೆ. ಬಿಸಿಲೆ ಹಾಗೂ ಶಿರಾಡಿ ಘಾಟ್ ರಸ್ತೆಗಳ ಸಂಪೂರ್ಣ ದುರಸ್ತಿಗೆ 6 ತಿಂಗಳ ಕಾಲಾವಕಾಶ ಬೇಕಾಗಬಹುದು.

ಸದ್ಯಕ್ಕೆ ಲಘು ವಾಹನಗಳ ಸಂಚಾರಕ್ಕೆ ಸಾಧ್ಯವಾಗುವಂತೆ ರಸ್ತೆ ಸರಿ ಪಡಿಸಿ ನಂತರ ಶಾಶ್ವತ ದುರಸ್ತಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಕೊಡಗು, ಉಡುಪಿ, ಮೈಸೂರು, ಮಂಗಳೂರು, ಚಿಕ್ಕಮಗಳೂರು ಹಾಸನ ಹಾಸನ ಜಿಲ್ಲೆ ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಹಾನಿ ಉಂಟಾಗಿದೆ ಎಂದರು.

ಅಪಾಯಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ

ಅಪಾಯಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ

ನಿರಾಶ್ರಿತರ ಕೇಂದ್ರದಲ್ಲಿ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತದೆ ಇಲ್ಲಿಂದ ಜನರು ತೆರಳಿದ ನಂತರದಲ್ಲಿ ಸಂತ್ರಸ್ತರಿಗೆ 30 ದಿನದವರೆಗೆ ಆಹಾರ ಪದಾರ್ಥಗಳನ್ನು ನೀಡಲಾಗುವುದು.

ಸತತವಾಗಿ ಸುರಿದ ಮಹಾ ಮಳೆಯಿಂದಾಗಿ ಮಲೆನಾಡಿನಲ್ಲಿ ಹಾನಿಗೀಡಾಗಿರುವ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ ಅವರು ಸೂಚಿಸಿದರು.

ಮಹಾ ಮಳೆಯಿಂದಾಗಿ ಮಲೆನಾಡಿನಲ್ಲಿ ಹಾನಿ

ಮಹಾ ಮಳೆಯಿಂದಾಗಿ ಮಲೆನಾಡಿನಲ್ಲಿ ಹಾನಿ

ಮಹಾ ಮಳೆಯಿಂದಾಗಿ ಮಲೆನಾಡಿನಲ್ಲಿ ಹಾನಿಗೀಡಾಗಿರುವ ಸಕಲೇಶಪುರ ತಾಲ್ಲೂಕಿನ ಉಚ್ಚಂಗಿ, ಹಿಜ್ಜನಹಳ್ಳಿ, ಮಾಗೇರಿ, ಬಿಸಲೆ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ವೀಕ್ಷಣೆ ಮಾಡಿದ ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಎಚ್.ಡಿ. ದೇವೇಗೌಡ ಅವರು ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಾನಿಯ ಗಂಭೀರತೆಗೆ ಕಳವಳ ವ್ಯಕ್ತಪಡಿಸಿದರು

ಹಾನಿಯ ಗಂಭೀರತೆಗೆ ಕಳವಳ ವ್ಯಕ್ತಪಡಿಸಿದರು

ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಭೇಟಿ ನೀಡಿದ ದೇವೇಗೌಡರು ಹಾನಿಯ ಗಂಭೀರತೆಗೆ ಕಳವಳ ವ್ಯಕ್ತಪಡಿಸಿದರು. ಗುಡ್ಡಗಳು ಕುಸಿದಿದ್ದು, ರಸ್ತೆಗಳು ಹಾನಿಗೀಡಾಗಿವೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ತಿಪಾಸ್ತಿಗಳು ನಷ್ಟವಾಗಿವೆ. ಈ ಹಿನ್ನಲೆಯಲ್ಲಿ ಜನರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿದೆ ಪ್ರಧಾನಮಂತ್ರಿ ಅವರೊಂದಿಗೆ ಮಾತನಾಡಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+