ಹಾಸನದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಯುವಕ ಸಾವು
ಹಾಸನ, ಜನವರಿ 10: ಗುಂಡಿನ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದಲ್ಲಿ ನಡೆದಿದೆ. ನವೀನ್(39) ಮೃತ ಯುವಕ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ಮೃತ ನವೀನ್ ಹಾಗೂ ಆತನ ಸ್ನೇಹಿತರಾದ ದಯಾನಂದ, ಪದ್ಮನಾಭ್, ರಾಜಾಚಾರಿ ತಂಬಲಗೇರಿ ಗ್ರಾಮದಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಅಪರಿಚಿತರ ತಂಡ ಗುಂಡಿನ ದಾಳಿ ನಡೆಸಿದ್ದು, ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ದಯಾನಂದ್ ,ಪದ್ಮನಾಭಗೆ ಗಂಭೀರ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ದಯಾನಂದ್ ಹಾಗೂ ಪದ್ಮನಾಭನನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಿಜೆಪಿ ಸಂಘಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದ ನವೀನ್ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಟೆಗೆ ತೆರಳಿದ್ದವರು ಸಿಡಿಸಿದ ಗುಂಡಿನ ದಾಳಿಯೋ ಅಥವಾ ನವೀನ್ ಹತ್ಯೆ ಮಾಡಲೆಂದು ನಡೆಸಿದ ಗುಂಡಿನ ದಾಳಿಯೋ ಎನ್ನುವುದರ ಬಗ್ಗೆ ತನಿಖೆ ಚುರುಕುಗೊಂಡಿಗೆ.
ಘಟನಾ ಸ್ಥಳದಲ್ಲಿವಿಧಿ ವಿಜ್ಞಾನ ಪ್ರಯೋಗಲಯದ ತಜ್ಞರಿಂದ ಪರಿಶೀಲನೆಗಾಗಿ ತಯಾರಿ ನಡೆಯುತ್ತಿದ್ದು, ರಾತ್ರಿಯಿಂದಲೂ ಎಫ್.ಎಸ್.ಎಲ್ ತಂಡದ ಆಗಮನಕ್ಕಾಗಿ ಮೃತದೇಹ ಇದ್ದ ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಕಾಯುತ್ತಿದ್ದಾರೆ. ಸದ್ಯ ನವೀನ್ ಸಾವಿನ ಬಗ್ಗೆ ಅನೇಕ ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications