ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಮಹಾಮಸ್ತಕಾಭಿಷೇಕ : ರೋಹಿಣಿಯನ್ನು ಪ್ರಶಂಸಿಸಿದ ವೀರೇಂದ್ರ ಹೆಗ್ಗಡೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಮಹಾಮಸ್ತಕಾಭಿಷೇಕ 2018 : ಡಿ ಸಿ ರೋಹಿಣಿ ಸಿಂಧೂರಿಗೆ ಭೇಷ್ ಎಂದ ಡಾ ವೀರೇಂದ್ರ ಹೆಗ್ಗಡೆ | Oneindia Kannada

    ಹಾಸನ, ಡಿಸೆಂಬರ್ 30: "ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶನಿವಾರ ಪರಿಶೀಲಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ, "ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ತಯಾರಿ ಚೆನ್ನಾಗಿದೆ. ಈ ಬಗ್ಗೆ ತೃಪ್ತಿ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ದೇಶದ 10 'ಸ್ವಚ್ಛ ಐಕಾನಿಕ್' ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರವಣಬೆಳಗೊಳ

    ಉತ್ತಮ ರೀತಿಯಲ್ಲಿ ಸಾಗಿದ್ದು, ಈ ಬಗ್ಗೆ ತೃಪ್ತಿ ಇದೆ. ಮುನಿಗಳು, ಶ್ರಾವಕರು, ಸೇವಾಕರ್ತರು, ಸ್ವಯಂ ಸೇವಕರು, ಪೊಲೀಸರು ಸೇರಿದಂತೆ ಇತರರಿಗೆ ಮಾಡಲಾಗಿರುವ ವಾಸ್ತವ್ಯ ವ್ಯವಸ್ಥೆ ಉತ್ತಮ ರೀತಿಯಲ್ಲಿ ಇದೆ.

    ಶ್ರೀಕ್ಷೇತ್ರ ಹಾಗೂ ತಾತ್ಕಲಿಕ ಉಪನಗರಗಳಲ್ಲಿ ಕೆಲಸಗಳು ಭರದಿಂದ ಸಾಗಿವೆ. ಇನ್ನೂ ಕೆಲವು ಕೆಲಸಗಳು ಆಗಬೇಕಿವೆ. ಪೂರ್ವತಯಾರಿ ದೃಷ್ಟಿಯಲ್ಲಿ ನೋಡುವುದಾರೆ ಈವರೆಗೂ ಆಗಿರುವ ಕೆಲಸಗಳು ತೃಪ್ತಿ ತಂದಿದೆ. ಹಾಗಾಗಿ, ನಮ್ಮ ಉತ್ಸಾಹ, ಆತ್ಮವಿಶ್ವಾಸ ಹೆಚ್ಚಿದೆ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.

    ಮಸ್ತಕಾಭಿಷೇಕಕ್ಕೆ 500ಕ್ಕೂ ಹೆಚ್ಚು ಸಾಧುಗಳ ಆಗಮನ

    ಮಸ್ತಕಾಭಿಷೇಕಕ್ಕೆ 500ಕ್ಕೂ ಹೆಚ್ಚು ಸಾಧುಗಳ ಆಗಮನ

    ಮಹಾ ಮಸ್ತಕಾಭಿಷೇಕಕ್ಕೆ 500ಕ್ಕೂ ಹೆಚ್ಚು ಸಾಧುಗಳು ಬರುತ್ತಿದ್ದಾರೆ. ದಿಗಂಬರ ಮುನಿಗಳು, ಸಾಧ್ವಿಗಳು, ಶ್ರಾವಕರು, ಶ್ರದ್ಧಾಕರ್ತರು, ಭಕ್ತರು ದೇಶ-ವಿದೇಶಗಳಿಂದ ಬರುತ್ತಿದ್ದಾರೆ. ಯಾತ್ರಿಕರನ್ನು ಸ್ವಾಗತಿಸಲು ಕರ್ನಾಟಕ ತುದಿಗಾಲಲ್ಲಿ ನಿಂತಿದೆ ಎಂದು ವೀರೇಂದ್ರ ಹೆಗ್ಡೆ ಅವರು ಹೇಳಿದರು.

    ಉಪ ನಗರಗಳಿಗೆ ಭೇಟಿ ನೀಡಿದ ವೀರೇಂದ್ರ ಹೆಗ್ಡೆ

    ಉಪ ನಗರಗಳಿಗೆ ಭೇಟಿ ನೀಡಿದ ವೀರೇಂದ್ರ ಹೆಗ್ಡೆ

    ಇದಕ್ಕೂ ಮುನ್ನ ವೀರೇಂದ್ರ ಹೆಗ್ಗಡೆ ಅವರು, ತಾತ್ಕಲಿಕವಾಗಿ ನಿರ್ಮಿಸಿರುವ ತ್ಯಾಗಿ ನಗರ, ಪಂಚಕಲ್ಯಾಣಿ ನಗರ, ಮಾತಾಜಿ ನಗರ, ಕಳಸ ನಗರ, ಜನಪ್ರತಿನಿಧಿ ನಗರ, ಪೊಲೀಸ್ ನಗರ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಗಮನಿಸಿದರು.

    ಮಸ್ತಕಾಭಿಷೇಕದ ಉದ್ಘಾಟನೆಗೆ ರಾಷ್ಟ್ರಪತಿ

    ಮಸ್ತಕಾಭಿಷೇಕದ ಉದ್ಘಾಟನೆಗೆ ರಾಷ್ಟ್ರಪತಿ

    ಈವರೆಗೂ ಶೇ. 70ರಷ್ಟು ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿವೆ. ಉಳಿದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಗಲಿರುಳು ಶ್ರಮಿಸಲಾಗುತ್ತಿದ್ದು, ರಾಷ್ಟ್ರಪತಿ ಅವರು 2018ರ ಫೆ. 7ರಂದು ಮಸ್ತಕಾಭಿಷೇಕದ ಉದ್ಘಾಟನೆಗೆ ಆಗಮಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

    ಪರಿಶೀಲನೆ ವೇಳೆ ಇತರೆ ಅಧಿಕಾರಿಗಳು ಹಾಜರ್

    ಪರಿಶೀಲನೆ ವೇಳೆ ಇತರೆ ಅಧಿಕಾರಿಗಳು ಹಾಜರ್

    ಸಿದ್ಧತೆ ಪರಿಶೀಲನೆ ವೇಳೆ ಮಹಾ ಮಸ್ತಕಾಭಿಷೇಕದ ಸಹ ಅಧ್ಯಕ್ಷರೂ ಆದ ಶಾಸಕ ಅಭಂಚಂದ್ರ ಜೈನ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್. ವರಪ್ರಸಾದ್ ರೆಡ್ಡಿ, ರಾಷ್ಟ್ರೀಯ ಮಟ್ಟದ ದಿಗಂಬರ ಜೈನ್ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಜಿತೇಂದ್ರ ಕುಮಾರ್ ಹಾಜರಿದ್ದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Dharmasthala temple Dharmadhikari Dr Veerendra Hegde appreciated to Hassan Deputy Commissioner Rohini Sindhuri after examined the Mahamastakabhisheka preparation work in Shravanabelagola.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more