ಹಾಸನ ನಗರಸಭೆಗೆ 25 ಹಳ್ಳಿ ಸೇರಿಸಲು ಸರ್ಕಾರದ ಒಪ್ಪಿಗೆ

ಹಾಸನ, ಅಕ್ಟೋಬರ್ 01: ಹಾಸನ ನಗರಸಭೆ ವ್ಯಾಪ್ತಿಗೆ ಹೊಸದಾಗಿ 25 ಹಳ್ಳಿಗಳನ್ನು ಸೇರಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ನಗರ ಸಭೆಯ ವ್ಯಾಪ್ತಿಯ ಜನಸಂಖ್ಯೆ 2.26 ಲಕ್ಷಕ್ಕೆ ಏರಿಕೆಯಾಗಲಿದೆ.

ಪೌರಾಡಳಿತ ಸಚಿವ ನಾರಾಯಣ ಗೌಡ ಸಚಿವ ಸಂಪುಟ ಸಭೆಯಲ್ಲಿ ನಗರಸಭೆ ವ್ಯಾಪ್ತಿಗೆ 25 ಹೊಸ ಹಳ್ಳಿಗಳನ್ನು ಸೇರಿಸಲು ಅನುಮೋದನೆ ಪಡೆದುಕೊಂಡಿದ್ದಾರೆ. ಪ್ರಸ್ತುತ ನಗರ ಸಭೆ ವ್ಯಾಪ್ತಿಯ ಜನಸಂಖ್ಯೆ 1.56 ಲಕ್ಷ ಇದೆ.

1995ರಲ್ಲಿ ಹಾಸನ ನಗರಸಭೆಯನ್ನು ಘೋಷಣೆ ಮಾಡಲಾಗಿತ್ತು. ಹೊಸ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಬೇಕು ಎಂಬ ಕೂಗು ಹಲವು ದಿನಗಳಿಂದ ಇತ್ತು. ಸಚಿವರು ಪ್ರಯತ್ನಕ್ಕೆ ಸಂಪುಟ ಈಗ ಅನುಮೋದನೆ ನೀಡಿದೆ.

Karnataka Govt Approved To Add 25 Villages To Hassan CMC

ಹೊಸ ಹಳ್ಳಿಗಳ ಪಟ್ಟಿ: ಹೊಸದಾಗಿ ನಗರಸಭೆ ವ್ಯಾಪ್ತಿಗೆ ಸತ್ಯಮಂಗಲ, ಹರಳಹಳ್ಳಿ, ದೊಡ್ಡ ಹೊನ್ನೇನಹಳ್ಳಿ, ಯಡಿಯೂರು, ಚಿಕ್ಕಹೊನ್ನೇನಹಳ್ಳಿ, ತಮ್ಲಾಪುರ, ಚಿಕ್ಕಕೊಂಡಗುಳ, ಮಾವಿನಹಳ್ಳಿ, ಬಿ. ಕಾಟೀಹಳ್ಳಿ, ಬಿ. ಕಾಟೀಹಳ್ಳಿ ಕೊಪ್ಪಲು, ಸಂಕೇನಹಳ್ಳಿ, ಎಸ್. ಎಂ. ಕೃಷ್ಣಾ ನಗರ, ಬೂವನಹಳ್ಳಿ, ಬಿ. ಟಿ.ಕೊಪ್ಪಲು ಸೇರಲಿವೆ.

ಗವೇನಹಳ್ಳಿ, ಗುಡ್ಡೇನಹಳ್ಳಿ, ಗುಡ್ಡೇನಹಳ್ಳಿ ಕೊಪ್ಪಲು, ಮಣಚನಹಳ್ಳಿ, ಯರೇಹಳ್ಳಿ, ವಿಜಯನಗರ ಬಡಾವಣೆ, ದೊಡ್ಡಮಂಡಿಗನಹಳ್ಳಿ, ದೇವರಾಯ ಪಟ್ಟಣ, ಬಿಟ್ಟಗೌಡನಹಳ್ಳಿ, ಸಂಕಲಾಪುರ, ನಾಗತವಳ್ಳಿ ಸೇರ್ಪಡೆಯಾಗಲಿದೆ.

ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡಿದರೂ ನಗರಸಭೆಗೆ ನಿಗದಿಪಡಿಸಿರುವ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 4 (ಎ) ಅಡಿ ಹೊಸ ಹಳ್ಳಿಗಳನ್ನು ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+