ಹಾಸನದಲ್ಲಿ ಸೆಪ್ಟೆಂಬರ್ 27 ರಂದು ಉದ್ಯೋಗ ಮೇಳ
ಹಾಸನ, ಸೆಪ್ಟೆಂಬರ್ 25: ಬೆಂಗಳೂರು, ಮೈಸೂರು ಮತ್ತು ಹಾಸನದ ಹೆಸರಾಂತ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಎಸ್.ಎಸ್.ಎಲ್.ಸಿ ಪಾಸು/ಫೇಲು, ಪಿ.ಯು.ಸಿ, ಪದವಿ, ಐ.ಟಿ.ಐ, ಡಿಪ್ಲೂಮೋ, ಇಂಜಿನಿಯರಿಂಗ್ ಮತ್ತು ಎಂ.ಬಿ.ಎ.ನಲ್ಲಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದೆ.

ಆಸಕ್ತ ನಿರುದ್ಯೋಗಿ ಯುವಕ/ ಯುವತಿಯರು ತಮ್ಮ ದಾಖಲಾತಿಯ ಜೆರಾಕ್ಸ್ ಪ್ರತಿ ಮತ್ತು ಬಯೋಡಾಟ ರೆಸ್ಯೂಮ್ ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಐ.ಟಿ.ಐ ಆವರಣ, ಬಿ.ಎಂ. ರಸ್ತೆ, ಹಾಸನ ಇಲ್ಲಿಗೆ ಖುದ್ದು ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಯಾದ ಜೆ.ಬಿ. ವಿಜಯಲಕ್ಷ್ಮಿ ಇವರನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ.












Click it and Unblock the Notifications