Swaroop Prakash Road Show: ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ರೋಡ್‌ ಶೋ: ಸಾಥ್ ನೀಡಿದ ರೇವಣ್ಣನ ಕುಟುಂಬ

ಹಾಸನ, ಏಪ್ರಿಲ್‌, 20: ಹಾಸನ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಕೈ ತಪ್ಪಿದ ಕಾರಣ ಎಚ್‌.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಇಷ್ಟು ದಿನ ಮುನಿಸಿಕೊಂಡಿದ್ದರು. ಇದೀಗ ಜೆಡಿಎಸ್‌ ಸ್ವರೂಪ್‌ಗೆ ಟಿಕೆಟ್‌ ನೀಡಿದ್ದು, ಮುನಿಸನ್ನು ಮರೆತು ಸ್ವರೂಪ್‌ ಜೊತೆ ಕ್ಷೇತ್ರದಲ್ಲಿ ಭವಾನಿ ರೇವಣ್ಣ ರ‍್ಯಾಲಿ ಮಾಡಿ ಗಮನ ಸೆಳೆದಿದ್ದಾರೆ.

ಹೀಗೆ ಭವಾನಿ ರೆವಣ್ಣ ಅವರು ಸ್ವರೂಪ್‌ ಜೊತೆ ರ‍್ಯಾಲಿ ಮಾಡುವ ಮೂಲಕ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ ಗೆಲ್ಲಿಸಲೇಬೇಕು ಅನ್ನುವ ಪಣ ತೊಟ್ಟಿದ್ದಾರೆ. ಹಾಸನದ ಅಭ್ಯರ್ಥಿ ಸೂರಜ್ ನೇತೃತ್ವದಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಪ್ರಜ್ವಲ್ ರೇವಣ್ಣ ಕೂಡ ಭಾಗಿಯಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೀಗೆ ಟಿಕೆಟ್ ಗೊಂದಲದ ಸಿಟ್ಟು ಮರೆತು ಸ್ವರೂಪ್ ಮತ್ತು ರೇವಣ್ಣನವರ ಕುಟುಂಬ
ಒಂದಾಗಿದೆ.

JDS candidate Swaroop, Bhavani Revanna road show in Hassan

ಇನ್ನು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದ ಭವಾನಿ ರೇವಣ್ಣ ಅವರು ತಾನೇ ಅಭ್ಯರ್ಥಿ ಎಂಬಂತೆ ಉತ್ಸಾಹ ತೋರಿದ್ದಾರೆ. ಹಾಗೆಯೆ ರ‍್ಯಾಲಿಯ ಸಂಪೂರ್ಣ ಸಾರಥ್ಯವನ್ನು ಕೂಡ ಅರವೇ ವಹಿಸಿರುವುದು ಇನ್ನೂ ವಿಶೇಷವಾಗಿದೆ. ಹೀಗೆ ಸ್ವರೂಪ್‌ ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ತಾವು ಕೂಡ ಜನರತ್ತ ಕೈಬೀಸಿ ಮಿಂಚಿದ್ದಾರೆ.

ಎಲ್ಲಾರೂ ಒಟ್ಟಿಗೆ ಸೇರಿ ಹಾಸನದಲ್ಲಿ ಭರ್ಜರಿ ರೋಡ್ ಶೋ ಮಾಡುವ ಮೂಲಕ ಇನ್ನಿತರ ಪಕ್ಷಗಳ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ. ಅಲ್ಲದೆ ಇದನ್ನೆಲ್ಲ ಗಮನಿಸಿದರೆ ಈ ಬಾರಿ ಶತಾಯಗತಾಯ ಬಿಜೆಪಿ ತೆಕ್ಕೆಯಿಂದ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ದೇವೇಗೌಡರ ಕುಟುಂಬ ಪಣತೊಟ್ಟು ನಿಂತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+