ಕಾಂಗ್ರೆಸ್ ಮೊದಲು ಗ್ಯಾರಂಟಿಗಳನ್ನು ಈಡೇರಿಸಲಿ: ಎಚ್.ಡಿ.ರೇವಣ್ಣ ಸವಾಲು
ಹಾಸನ, ಮೇ, 16: ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿಯ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಗದ್ದುಗೆ ಏರಲಿದ್ದು, ಅವರು ನೀಡಿರುವ ಭರವಸೆಗಳನ್ನು ಈಡೇರಿಸಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಸವಾಲು ಹಾಕಿದರು.
ಅಲ್ಲದೆ ಕೋಮುವಾದಿಗಳನ್ನು ದೂರವಿಟ್ಟು ಜನ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಒಳ್ಳೆಯ ಆಡಳಿತ ನೀಡಿ, ಗ್ಯಾರಂಟಿಗಳನ್ನು ಈಡೇರಿಸಲಿ. ನಮ್ಮ ಪಕ್ಷದ ಸೋಲನ್ನು ನಾನು ಸ್ವೀಕರಿಸುತ್ತೇವೆ. 2 ರಾಷ್ಟ್ರೀಯ ಪಕ್ಷಗಳನ್ನು ಜೆಡಿಎಸ್ ಮುಗಿಸಲು ಪ್ರಯತ್ನಿಸಿದವು. ಆದರೆ ಜನರು ನಮ್ಮ ಪಕ್ಷವನ್ನು ಉಳಿಸಿಕೊಂಡಿದ್ದಾರೆ ಎಂದರು.

ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದ ನಾಲ್ವರು ಗೆಲುವು ಸಾಧಿಸಿದ್ದು, ಮೂವರು ಸೋತಿದ್ದಾರೆ. ನಮಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರೀಯ ಪಕ್ಷಗಳ ಮುಖಂಡರೇ ಸೋತಿರುವಾಗ ನಮ್ಮದು ಏನಿದೆ. ಹಲವರು ನಮ್ಮನ್ನು ಮುಗಿಸಬೇಕೆಂದು ನಾಲ್ಕು ವರ್ಷದಿಂದ ಹೋರಾಟ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನರು ನಮ್ಮನ್ನ ಉಳಿಸಿಕೊಂಡಿದ್ದಾರೆ. ನಾವು ಸೋಲು ಗೆಲುವು ಎರಡನ್ನು ನೋಡಿದ್ದೇವೆ. ಒಂದು ಕ್ಷೇತ್ರದಲ್ಲಿ ನಾವು ಅಲ್ಪ ಮತಗಳಿಂದ ಸೋಲನುಭವಿಸಿದ್ದೇವೆ. ಮಂಡ್ಯದಲ್ಲಿ ಕೂಡ ಜೆಡಿಎಸ್ ಮುಗಿಸಲು ಪ್ರಯತ್ನ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರೇ ಹಾಸನ ಮತ್ತು ಮಂಡ್ಯಕ್ಕೆ ಬಂದು ಹೋದರು.
ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬಂದು ಹೋಗಿದ್ದರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಗೆದ್ದರು. ನಮಗೆ ಇನ್ನೂ ಐದು ವರ್ಷ ಸಮಯಯಿದೆ. ಈ ಸಮಯಲದಲಿ ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಜಿಲ್ಲೆಯನ್ನು ನಂಬರ್ ಒನ್ ಮಾಡುತ್ತೇನೆ
ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನು ಮಾಡಬೇಕು ಎನ್ನುವುದು ನನ್ನ ಆಸೆ. ನಾನು ಬದುಕಿರುವುದರೊಳಗೆ ಅದನ್ನು ಮಾಡಿ ತೋರಿಸುತ್ತೇನೆ. ಐದು ವರ್ಷಕ್ಕೆ ಮಾಡುತ್ತೇನೋ, ಹತ್ತು ವರ್ಷಕ್ಕೆ ಮಾಡುತ್ತೇನೋ ಆದರೆ ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ಸಾರಿ ರಾಜಕೀಯಕ್ಕೆ ಬರಲ್ಲ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ
ಕಾಂಗ್ರೆಸ್‌ನವರು ಅಭಿವೃದ್ಧಿ ಮಾಡಿ ಕೊಟ್ಟರೆ ಸಂತೋಷ. ಇಲ್ಲವಾದರೆ ನಮಗೂ ಸಮಯ ಬರುತ್ತದೆ. ನನ್ನ ಗ್ರಹಗತಿಗಳು ಇನ್ನೂ ಚೆನ್ನಾಗಿವೆ. ದೇವೇಗೌಡರು ಇನ್ನೂ ಏಳೆಂಟು ವರ್ಷ ಬದುಕಿರುತ್ತಾರೆ. ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‌ಗೆ ಕರ್ಕಂಡು ಹೋಗೇ ಹೋಗುತ್ತೇವೆ. ದೇವೇಗೌಡರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವ ಕ್ಷೇತ್ರ ಅಂತ ಮುಂದೆ ನೋಡೋಣ ಎಂದರು.
ದೇವೇಗೌಡರಿಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಅವರು ಲೋಕಸಭೆಗೆ ನಿಲ್ಲಲ್ಲ ಅಂದರೂ ನಾವು ಬಿಡಲ್ಲ ಲೋಕಸಭೆ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಲೋಕಸಭೆಗೆ ಕಳುಹಿಸುತ್ತೇವೆ. ಹಾಸನ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣನೇ ಸ್ಪರ್ಧೆ ಮಾಡುತ್ತಾನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಜನ ಗೆದ್ದು, ಮೂವರು ಸೋತಿದ್ದೇವೆ. ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಜನ ಮತ ಹಾಕಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲವೊಮ್ಮೆ ರಾಜಕೀಯದಲ್ಲಿ ಹೀಗೆಲ್ಲಾ ಆಗುತ್ತದೆ. ಅದನ್ನೆಲ್ಲಾ ಆಗಿ ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳಬೇಕು. ನಮ್ಮನ್ನು ಮುಗಿಸಲು ಎರಡೂ ಪಕ್ಷಗಳು ಕೆಲಸ ಮಾಡಿವೆ ಎಂದರು.












Click it and Unblock the Notifications