ಹರ್ಯಾಣದಲ್ಲಿ ಹಾಸನದ ಯೋಧ ಆತ್ಮಹತ್ಯೆಗೆ ಶರಣು

ಹಾಸನ, ಜೂನ್ 09 : ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಾಸನ ಮೂಲದ ಯೋಧರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಮೋಹನ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡವರು. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾದಾಳು ಗ್ರಾಮದ ಮೋಹನ್ ಕುಮಾರ್ ಹರಿಯಾಣ ರಾಜ್ಯದ ಶಿರಾಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಎಂಟು ವರ್ಷಗಳಿಂದ ಶಿರಾಸಾದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಮೋಹನ್ ಕುಮಾರ್, ಶುಕ್ರವಾರ ಡೆತ್‌ ನೋಟ್ ಬರೆದಿಟ್ಟು ಕಚೇರಿಯ ಶೌಚಾಲಾಯದಲ್ಲಿ ತನ್ನ ರೈಫಲ್‌ನಿಂದ ಗುಂಡು ಹಾರಿಸಿಕೊಂಡು
ಆತ್ಮಹತ್ಯೆಗೆ ಶರಣಾಗಿದ್ದಾರೆ.

Hassan based soldier commits suicide in Haryana

ಶನಿವಾರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಭಾನುವಾರ ಸಂಜೆ ವೇಳೆಗೆ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗುತ್ತದೆ. ಮೂರು ತಿಂಗಳ ಹಿಂದಷ್ಟೇ ಮೋಹನ್ ಕುಮಾರ್ ವಿವಾಹವಾಗಿದ್ದರು.

ಡೆತ್‌ ನೋಟ್‌ನಲ್ಲಿ 'ಅಮ್ಮಾ, ಚಿನ್ನೂ ನಾನು ನಿಮಗೇನಾದರೂ ನೋವು ಮಾಡಿದ್ದರೆ ದಯವಿಟ್ಟು ಕ್ಷಮಿಸಿ, ಲವ್‌ ಯೂ ಅಮ್ಮಾ, ಲವ್‌ ಯೂ ಚಿನ್ನೂ ಟೇಕ್ ಕೇರ್' ಎಂದು ಬರೆದಿದ್ದಾರೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಯೋಧನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+