ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನದ ವಿವರ

|
Google Oneindia Kannada News

ಹಾಸನ, ಅಕ್ಟೋಬರ್ 13 : ಪುರಾಣ ಪ್ರಸಿದ್ಧ ಹಾಸನಾಂಬೆಯ ದರ್ಶನವನ್ನು ಪಡೆಯಲು ಈಗಾಗಲೇ ಅಕ್ಟೋಬರ್ 12ರಂದು ಬಾಗಿಲು ತೆರೆಯಲಾಗಿದ್ದು, ಅ. 21ರ ದೇವಿಯ ಬಾಗಿಲು ತೆರೆದಿರಲಿದೆ.

ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ಪಡೆಯಿರಿಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ಪಡೆಯಿರಿ

ಹಿನ್ನಲೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಹಾಸನ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಅಕ್ಟೋಬರ್ 21ರವರೆಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ. ಹಾಗೂ ಹಾಸನಾಂಬೆ ದೇವಿಯ ದರ್ಶನ ವಿವರ ಈ ಕೆಳಗಿನಂತಿದೆ.

Hasanamba Devi' s darshan timings details for Devotees from Oct 13 to Oct 21

* ಅಕ್ಟೋಬರ್ 13: ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ರವರೆಗೆ ದರ್ಶನವಿರುತ್ತದೆ. ಸಂಜೆ 5 ರಿಂದ ರಾತ್ರಿ 9 ಗಂಟೆಯವರೆಗೆ ದೇವಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ರಾತ್ರಿ 9 ರಿಂದ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುತ್ತದೆ,

* ಅಕ್ಟೋಬರ್ 14: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ರವರೆಗೆ ಅಮ್ಮನಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ಮಧ್ಯಾಹ್ನ 3.30 ರಿಂದ ದರ್ಶನವಿರುತ್ತದೆ. ಅಂದು ರಾತ್ರಿ 2 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಅಮ್ಮನವರಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ.

* ಅಕ್ಟೋಬರ್ 15: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ಗಂಟೆ ವರೆಗೆ ದೇವಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ಮಧ್ಯಾಹ್ನ 3.30 ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Hasanamba Devi' s darshan timings details for Devotees from Oct 13 to Oct 21

* ಅಕ್ಟೋಬರ್ 16: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ಗಂಟೆ ವರೆಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ಮಧ್ಯಾಹ್ನ 3.30 ರಿಂದ ದರ್ಶನಕ್ಕೆ ಅವಕಾಶ.

* ಅಕ್ಟೋಬರ್ 17: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ಗಂಟೆ ವರೆಗೆ ಹಾಗೂ ರಾತ್ರಿ 2 ರಿಂದ ಬೆಳಗಿನ 5 ಗಂಟೆಯವರೆಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ.

* ಅಕ್ಟೋಬರ್ 18 ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ಗಂಟೆ ವರೆಗೆ ದೇವಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ಮಧ್ಯಾಹ್ನ 3.30 ರಿಂದ ದರ್ಶನ.

* ಅಕ್ಟೋಬರ್ 19: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ದರ್ಶನವಿರುತ್ತದೆ. ಮಧ್ಯಾಹ್ನ 1.30 ರಿಂದ 3.30 ಗಂಟೆ ವರೆಗೆ ಹಾಗೂ ರಾತ್ರಿ 2 ರಿಂದ ಬೆಳಗಿನ 5 ಗಂಟೆಯವರೆಗೆ ಅಮ್ಮನವರಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ದರ್ಶನಕ್ಕೆ ಅವಕಾಶವಿರುತ್ತದೆ.

* ಅಕ್ಟೋಬರ್ 20: ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಸಂಜೆ 5 ಗಂಟೆಯಿಂದ ರಾತ್ರಿ 9ರವರೆಗೆ ಅಮ್ಮನವರಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ. ರಾತ್ರಿ 10.30 ಕ್ಕೆ ಶ್ರೀ ಸಿದ್ದೇಶ್ವರಸ್ವಾಮಿಯ ಚಂದ್ರಮಂಡಲ ರಥೋತ್ಸವವಿರುತ್ತದೆ. ಇದೇ ವೇಳೆ ರಾತ್ರಿ 9 ಗಂಟೆಯಿಂದ ಅ.21 ರ ಬೆಳಿಗ್ಗೆ 6 ಗಂಟೆಯವರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.

* ಅಕ್ಟೋಬರ್ 21: ದೇವಿ ದರ್ಶನಕ್ಕೆ ಸಾರ್ವಜನಿಕ ದರ್ಶನ ಇರುವುದಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಅಮ್ಮನವರಿಗೆ ನೈವೇದ್ಯ/ಅಭಿಷೇಕ ನಡೆಯುತ್ತದೆ.

English summary
The historic Hasanamba temple will be opened for 9 days (October 12 to 21, 2017) this year. Temple which attracts devotees from across the state. here is the Hasanamba Devi' s darshan timings details for Devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X