ಹಾಸನಾಂಬೆ ದರ್ಶನದಲ್ಲಿ ಅವ್ಯವಸ್ಥೆ: ಜಿಲ್ಲಾಡಳಿತಕ್ಕೆ ಭಕ್ತಾಧಿಗಳ ನೇರ ಪ್ರಶ್ನೆ

ಹಾಸನ, ನವೆಂಬರ್‌ 01: ಹಾಸನಾಂಬೆಯ ಖ್ಯಾತಿ ಎಲ್ಲೆಡೆ ಹರಡಿ, ಮಹಿಮೆ ಪಸರಿಸಿರುವುದರಿಂದ. ಅದರಲ್ಲೂ ಈಗಿನ ಸೋಷಿಯಲ್ ಮೀಡಿಯಾಗಳಿಂದಾಗಿ ಎಲ್ಲರೂ ದೇವಿಯ ದರ್ಶನಕ್ಕೆ ಹಾತೊರೆಯುತ್ತಿರುತ್ತಾರೆ. ಅದಕ್ಕೆ ಪೂರಕವೆಂಬಂತೆ ವಿ.ವಿ.ಐ.ಪಿ ಪಾಸ್ ಗಳು ಹಾಗೂ ಆನ್ಲೈನ್ ಟಿಕೆಟ್ ಗಳು ಲಭ್ಯವಿದ್ದು ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡುವಂತಹಾ ವ್ಯವಸ್ಥೆ ಮಾಡಿದ್ದಾರೆ.

ಆದರೆ, ಇದರ ನಡುವಲ್ಲಿ ಧರ್ಮ ದರ್ಶನ ಪಡೆಯುವವರ ಪಾಡು ಹೇಳತೀರದಾಗಿದೆ. ಹಣ ಪಾವತಿಸಿ ಪಡೆಯುವ ಟಿಕೆಟ್ ಹಾಗೂ ಪಾಸ್ ಗಳಿಗೆ ಹೆಚ್ಚು ಮನ್ನಣೆ ನೀಡುವುದಾದರೆ ಧರ್ಮದರ್ಶನದ ಸರತಿಯ ಅಗತ್ಯವಾದರೂ ಏನಿದೆ..? ಹಾಸನಾಂಬೆ ನೆಪದಲ್ಲಿ ಹಣ ಕೇಂದ್ರಿತ ಯೋಚನೆಯೇ ಈ ಅಧ್ವಾನಕ್ಕೆ ಮೂಲವೆಂಬುದನ್ನು ಬೆರಳು ಮಾಡಿ ತೋರಿಸುತ್ತಿದೆ ಈ ಬಾರಿಯ (ಅ)ವ್ಯವಸ್ಥೆ.

Hasanamba 2024 Chaos Happening In Hasanamba Temple

ದೇವರ ದರ್ಶನದ ವಿಚಾರದಲ್ಲಿಯೂ ರಾಜಕೀಯ ತರುವುದು ಅನವಶ್ಯಕ. ಹಣದ ಟಿಕೆಟ್ ಹಾಗೂ ಉಚಿತ ದರ್ಶನದ ಸರತಿಯಲ್ಲಿ ಕಾಯುವವರು. ಕೊಂಚ ತಡವಾದರೂ ದೇವರ ದರ್ಶನ ಮಾಡಿಕೊಂಡೇ ಹೋಗಬೇಕೆಂದು ಕಾಯುವಾಗ ಜಿಲ್ಲೆಯ ಜನರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುವುದು ಪಾಸ್ ಹೆಸರಲ್ಲಿ ಹೆಚ್ಚೆಚ್ಚು ಜನರನ್ನು ಸಾಲಿಗೆ ಸೇರಿಸುವುದು, ಅಲ್ಲಿನ ಕರ್ತವ್ಯನಿರತರು ತಮಗೆ ಬೇಕಾದವರನ್ನು ಸರತಿಗೆ ಸೇರಿಸುವುದು ಹೀಗೆ.

ಜಿಲ್ಲೆಯ ಜನರಿಗಿಂತ ಹೆಚ್ಚು ಹೊರಜಿಲ್ಲೆಯವರು ಬಂದಿರುವುದು ಸಂತಸವೇ ಆದರೂ.. ಮೊದಲ ಆದ್ಯತೆ ನಮ್ಮ ಹಾಸನ ಜಿಲ್ಲೆಯವರಿಗೆ ಇರಬೇಕಲ್ಲವೇ..? ತುಮಕೂರಿನ ಜನರನ್ನು ಬಸ್ಸುಗಳಲ್ಲಿ ತುಂಬಿ ಕರೆತಂದು ಭಕ್ತಿಯ ಹೆಸರಲ್ಲಿ ಮಾಡುತ್ತಿರುವ ರಾಜಕಾರಣವನ್ನು ನೋಡಿಯೂ ನೋಡದಂತಿರಲು ಸಾಧ್ಯವೇ..?

Hasanamba 2024 Chaos Happening In Hasanamba Temple

ಅತ್ಯುತ್ಸಾಹ-ಸೂಕ್ಷ್ಮತೆಯ ಕೊರತೆಯ ಡಿ ಸಿ - ಎ ಸಿ

ಇನ್ನು ಜಿಲ್ಲಾಧಿಕಾರಿ ಹಾಗೂ ಸಿಬ್ಬಂದಿಗಳ ನಡುವಿನ ಹೊಂದಾಣಿಕೆಯ ಕೊರತೆಯಾ ಎಂದು ನೋಡಲು ಹೊರಟರೆ ಡಿ ಸಿ - ಎಸಿಯ ಅತ್ಯುತ್ಸಾಹ - ಸೂಕ್ಷ್ಮತೆಯ ಕೊರತೆ ನಿಚ್ಚಳವಾಗಿ ಕಂಡುಬರುತ್ತದೆ. ಸುತ್ತಮುತ್ತಲಿನ ಪರಿವೇ ಇಲ್ಲದೆ ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ಜನಸಾಮಾನ್ಯರ ಮೇಲೆ ಬೀರುವ ಪರಿಣಾಮದ ಕುರಿತು ಅಧಿಕಾರಿಗಳು ಎಚ್ಚರದಿಂದಿರುವುದು ಒಳಿತಾಗಿದೆ.

ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಗೆ ಸಿದ್ದವಿರಲಿಲ್ಲವೆ...?

ಸಾಮಾನ್ಯ ಜನರು ದರ್ಶನದ ಬಗ್ಗೆ ಮಾತ್ರವಲ್ಲ.. ತಮ್ಮ ಮೇಲಾದ ಲಾಠಿ ಚಾರ್ಜ್ ಗೆ ದನಿ ಎತ್ತಿದರೆ ಉತ್ತರಿಸುವವರಾರು..? ಲಕ್ಷಾಂತರ ಜನರು ದರ್ಶನಕ್ಕೆ ಬರುವ ನಿರೀಕ್ಷೆ ಇದ್ದಾಗ ಅದಕ್ಕೆ ತಕ್ಕ ವ್ಯವಸ್ಥೆ ಮೊದಲೇ ಆಗಿರಬೇಕು. ಸಣ್ಣ-ಪುಟ್ಟ ಲೋಪದೋಷಗಳಾದರೆ ಸರಿಪಡಿಸಿಕೊಳ್ಳಬಹುದು. ಆದರೆ, ಈ ನೂಕುನುಗ್ಗಲು, ಸರತಿ ವ್ಯವಸ್ಥೆಯಲ್ಲಿ ಉಂಟಾದ ಲೋಪದೋಷಗಳಿಗೆ, ಮೂತ್ರ ವಿಸರ್ಜನೆಯ ವಾಸನೆಗೆ ಸ್ಪಂದಿಸಿಯೂ ಸ್ಪಂದಿಸಂತೆ ಮಾಡಿರುವ ಅವ್ಯವಸ್ಥೆಗೆ ಹೊಣೆ ಹೊರಲು ಜಿಲ್ಲಾಡಳಿತ ಸಿದ್ಧವಾಗಿದೆಯೇ..? ಇದು ಪ್ರತಿ ವರ್ಷ ಜರುಗುವ ನಿರೀಕ್ಷಿತ ಕಾರ್ಯಕ್ರಮ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ದವಿರಲಿಲ್ಲವೇ..? ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+