ಬಾಲ್ಯದ ಬಡ ಗೆಳೆಯನನ್ನು ಅಕ್ಕರೆಯಿಂದ ಮಾತನಾಡಿಸಿದ ದೇವೇಗೌಡ
ಹಾಸನ, ಆಗಸ್ಟ್ 28: ಮುಖ್ಯಮಂತ್ರಿ, ಪ್ರಧಾನಿ ಮಂತ್ರಿಗಳಾಗಿ ಸೇವೆ ಸಲ್ಲಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತು ಮೂಡಿಸಿದ್ದರೂ ದೇವೇಗೌಡ ಅವರು ಇಂದಿಗೂ ತಮ್ಮ ಬಾಲ್ಯದ ಗೆಳೆಯರನ್ನು ಮರೆತಿಲ್ಲ.
ದೇವೇಗೌಡರಿಗೆ ಇಂದು ಅಕಸ್ಮಾತ್ ಆಗಿ ತಮ್ಮ ಬಾಲ್ಯದ ಗೆಳೆಯನೊಬ್ಬ ಎದುರಿಗೆ ಸಿಕ್ಕಿದ್ದಾರೆ. ಅವರನ್ನು ಕಂಡೊಡನೆ ಅಲ್ಲಿಯೇ ನಿಂತ ದೇವೇಗೌಡರು ಆತನ ಹೆಗಲ ಮೇಲೆ ಸಲುಗೆಯಿಂದ ಕೈ ಹಾಕಿ ಕೆಲ ಕಾಲ ಆತನ ಮಾತು ಕೇಳಿಸಿಕೊಂಡು, ಆರೋಗ್ಯ ಜಾಗೃತೆಯಾಗಿ ನೋಡಿಕೊಳ್ಳುವಂತೆ ಹೇಳಿ ತೆರಳಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದಿದ್ದು ಹಾಸನದಲ್ಲಿ.
ಇತ್ತೀಚೆಗಷ್ಟೆ ದೇವೇಗೌಡರು ತಮ್ಮ ಕುಲದೇವರಾದ ಹಾಸನ, ಹೊಳೆಸರಸೀಪುರ ತಾಲ್ಲೂಕಿನ ರಂಗನಾಥ ಸ್ವಾಮಿ ದೇವೇಲಾಯಕ್ಕೆ ಭೇಟಿ ನೀಡಿದ್ದರು. ಈ ಸಮಯ ದೇವೇಗೌಡರ ಬಾಲ್ಯದ ಗೆಳೆಯನೊಬ್ಬ ಅವರಿಗಾಗಿ ದೇವಸ್ಥಾನದಲ್ಲಿ ಕಾದು ನಿಂತಿದ್ದ.

ಹಳೆಯ ಅಂಗಿ, ಚಡ್ಡಿ ತೊಟ್ಟಿದ್ದ ದೇವೇಗೌಡ ಗೆಳೆಯ
ಹಳೆಯ ಅಂಗಿ, ಚಡ್ಡಿಯೊಂದನ್ನು ಧರಿಸಿ ದೇವೇಗೌಡರ ಬರುವಿಕೆಗಾಗಿ ಕಾದು ನಿಂತಿದ್ದ ಆತ ದೇವೇಗೌಡರು ಬಂದೊಡನೆ 'ಪಾಪಣ್ಣ, ಪಾಪಣ್ಣ ಎನ್ನುತ್ತಾ ದೇವೇಗೌಡರನ್ನು ಮಾತನಾಡಿದ, ದೇವೇಗೌಡರೂ ಸಹ ಗೆಳೆಯನನ್ನು ನೋಡಿದೊಡನೆ ಗುರುತು ಹಿಡಿದು ಆತನ ಹೆಗಲ ಮೇಲೆ ಕೈ ಹಾಕಿ ಅಲ್ಲಿಯೇ ನಿಂತರು.

ದೇವೇಗೌಡರನ್ನು ಪಾಪಣ್ಣ ಎಂದು ಕರೆದ ಹಳೆಯ ಗೆಳೆಯ
ದೇವೇಗೌಡರನ್ನು ಪಾಪಣ್ಣ ಎಂದು ಸಂಭೋದಿಸುತ್ತಲೇ ಮಾತನಾಡಿದ ಆ ಬಾಲ್ಯದ ಗೆಳೆಯ, 'ಚೆನ್ನಾಗಿದ್ದೀಯಾ ಪಾಪಣ್ಣ, ನನಗೆ ಆರೋಗ್ಯ ಸರಿಯಿಲ್ಲ, ಕಣ್ಣು ಮಂಜಾಗಿದೆ ಎಂದು ಇನ್ನೂ ಕೆಲ ಮಾತುಗಳನ್ನು ಆಡಿದರು. ಗೆಳೆಯನ ಹೆಗಲ ಮೇಲೆ ಕೈ ಹಾಕಿ ನಿಂತಿದ್ದ ದೇವೇಗೌಡರು ಗೆಳೆಯನ ಮಾತು ಕೇಳಿಸಿಕೊಂಡು, ಆರೋಗ್ಯ ಜಾಗೃತೆಯಿಂದ ನೋಡಿಕೊಳ್ಳುವಂತೆ ಹೇಳಿ ಅಲ್ಲಿಂದ ಮುಂದೆ ನಡೆದರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಷ್ಟೆಲ್ಲಾ ಸಕ್ರಿಯ ರಾಜಕಾರಣದ ನಡುವೆಯೂ , ವಯಸ್ಸು 86 ಆದರೂ ಸಹ ತಮ್ಮ ಬಾಲ್ಯದ ಗೆಳೆಯನನ್ನು ಮರೆತಿರದ ದೇವೇಗೌಡರ ನೆನಪಿನ ಶಕ್ತಿಯ ಬಗ್ಗೆ, ಗೆಳೆಯನೊಂದಿಗೆ ಸಲುಗೆಯಿಂದ ಮಾತನಾಡಿದ ಸರಳತೆಗೆ ನೆಟ್ಟಿಗರು ನಮಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ
ದೇವೇಗೌಡ ಅವರು ಮೊನ್ನೆಯಷ್ಟೆ ಸಿದ್ದರಾಮಯ್ಯ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದರು. ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ಸಹ ಪ್ರತ್ಯುತ್ತರ ನೀಡಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications