ಹಾಸನ: ಕಾಡುಹಂದಿ ದಾಳಿಯಿಂದ ರೈತ ಸಾವು, ಹಂದಿಯನ್ನೇ ಅಟ್ಟಾಡಿಸಿ ಕೊಂದ ಗ್ರಾಮಸ್ಥರು

ಹಾಸನ, ಡಿಸೆಂಬರ್‌ 18: ಹಂದಿ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ಆರಗೋಡನಹಳ್ಳಿಯಲ್ಲಿ ನಡೆದಿದೆ. ರಾಜೇಗೌಡರು (63) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗೊಂಡಿದ್ದಾರೆ.

ಹಾಸನ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಆರಗೌಡನಹಳ್ಳಿ ಗ್ರಾಮದ ರೈತ ರಾಜೇಗೌಡ ಕಾಂತಮ್ಮ ವೃದ್ಧ ದಂಪತಿಗಳು ಜಮೀನಿಗೆ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಕಾಡುಹಂದಿ ರಾಜೇಗೌಡರನ್ನು ತಿವಿದು ಸಾಯಿಸಿದ್ದು ಶಾಂತಮ್ಮ ಅವರು ಗಂಭೀರವಾಗಿ ಗಾಯಗೊಳಿಸಿದೆ.

Farmer Died Due To Wild Pig Attack At Hassan

ಶಾಂತಮ್ಮನವರ ಕೈ ಹಾಗೂ ಕಾಲಿನ ಮೂಳೆಗಳು ತುಂಡಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಬಿಡಿಸಲು ಹೋದ ನಂಜಮ್ಮ ಎಂಬ ಮಹಿಳೆಯ ಮೇಲು ಕಾಡು ಹಂದಿ ದಾಳಿ ನಡೆಸಿದೆ. ನಂಜಮ್ಮ ಕೂಡ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕಾಡಾನೆ, ಚಿರತೆ ದಾಳಿ ಬಳಿಕ ಕಾಡು ಹಂದಿಗಳ ದಾಳಿ ಆರಂಭವಾಗಿದ್ದು, ಹಾಸನ ತಾಲೂಕಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಹಂದಿ ದಾಳಿಯಿಂದ ರೈತ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಕಾಡುಹಂದಿ ಹೊಡೆದು ಸಾಯಿಸಿದ್ದಾರೆ. ದಾಳಿ ಮಾಡಿದ ಹಂದಿಯನ್ನು ಅಟ್ಟಾಡಿಸಿದ ಆರಗೋಡನಹಳ್ಳಿ ರೈತರು, ಕೋಲಿನಿಂದ ಹೊಡೆದು ಹಂದಿಯನ್ನು ಸಾಯಿಸಿದ್ದಾರೆ.

ಇನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ತನಕ ಮೃತ ರೈನ ಮೃತದೇಹ ಸ್ಥಳದಿಂದ ಸಾಗಿಸಲು ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಪರಿಹಾರ ನೀಡುವುದಾಗಿ ಭರವಸೆ ನೀಡಿದ ಬಳಿಕ ಮೃತದೇಹ ಆಸ್ಪತ್ರೆಗೆ ಸಾಗಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+