ಹಾಸನದಲ್ಲಿ 2 ಸಾವಿರ ಸಾಲ ನೀಡದ್ದಕ್ಕೆ ಮಾಲೀಕನನ್ನೇ ಕೊಂದ ಚಾಲಕ

ಹಾಸನ, ಜನವರಿ.13: ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ಚಾಲಕನೇ ಮಾಲೀಕನನ್ನು ಕೊಂದು ಹಾಕಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಬಳಿ ನಡೆದಿದೆ. ಕೇವಲ ಎರಡು ಸಾವಿರ ರುಪಾಯಿ ಹಣ ನೀಡಿಲಿಲ್ಲ ಎಂದ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ವಡ್ಡರಹಟ್ಟಿಯ ನಾಗೇಶ್ ಸಿದ್ದಬೋವಿ ಎಂಬಾತನ ಬಳಿ ಆರೋಪಿ ರಂಗಸ್ವಾಮಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಟ್ರ್ಯಾಕ್ಟರ್ ಚಾಲಕನಾಗಿದ್ದ ರಂಗಸ್ವಾಮಿ ತನ್ನ ವೈಯಕ್ತಿಕ ಖರ್ಚಿಗಾಗಿ 2 ಸಾವಿರ ರುಪಾಯಿ ಹಣವನ್ನು ಸಾಲವಾಗಿ ನೀಡಲು ಕೇಳಿದ್ದಾನೆ.

ಸಾಲ ನೀಡಲು ನಾಗೇಶ್ ನಿರಾಕರಿಸಿದ್ದು ಇಬ್ಬರ ನಡುವೆ ಮಾತಿನ ಸಮರ ನಡೆದಿದೆ. ಕೋಪದಲ್ಲಿ ಮಾಲೀಕ ನಾಗೇಶ್ ಸಿದ್ದಬೋವಿ, ಚಾಲಕ ರಂಗಸ್ವಾಮಿ ಮೇಲೆ ಕೈ ಮಾಡಿದ್ದಾರೆ. ಇದರಿಂದ ಕೆರಳಿದ ಆರೋಪಿ ತನ್ನ ಮಾಲೀಕನನ್ನು ಹಾರೆಯಿಂದ ಚುಚ್ಚಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

 Driver Kill The Owner For Not Give Loan In Hassan

ಸ್ಥಳದಲ್ಲೇ ಪ್ರಾಣಬಿಟ್ಟ ಮಾಲೀಕ:

ಆರೋಪಿ ರಂಗಸ್ವಾಮಿ ಚೂಪಾದ ಹಾರೆಯಿಂದ ಚುಚ್ಚುತ್ತಿದ್ದಂತೆ ನಾಗೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾನೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದು, ಅರಸೀಕೆರೆಯ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+