ದೇವೇಗೌಡರು ಹಳಗನ್ನಡ ಇದ್ದಂತೆ: ಮನು ಬಳಿಗಾರ್
ಹಾಸನ, ಜೂನ್ 25: ದೇವೇಗೌಡರ ಅನುಭವ, ಮುತ್ಸದ್ಧಿತನವನ್ನು ಕಸಾಪ ಅಧ್ಯಕ್ಷ ಮನುಬಳಿಗಾರ್ ಅವರು ಹಳಗನ್ನಡಕ್ಕೆ ಹೋಲಿಸಿದರು. ಮನು ಬಳಿಗಾರ್ ಅವರ ಈ ಮಾತಿಗೆ ಸಭಿಕರು ಜೋರು ಕರತಾಡನದ ಮೂಲಕ ಸಮ್ಮತಿ ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರವಣಬೆಳಗೊಳದಲ್ಲಿ ಆಯೋಜಿಸಿರುವ ಮೊದಲ ಹಳಗನ್ನಡ ಸಾಹಿತ್ಯ ಪರಿಷತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಹಳಗನ್ನಡ ಕಾವ್ಯ ಸಮೃದ್ಧವಾದುದು, ಅದು ನೆಲದಿಂದ ಬಂದಿದ್ದು ಹಾಗೆಯೇ ಅಪಾರ ಅನುಭವವುಳ್ಳ ದೇವೇಗೌಡರು ಪ್ರಬುಧ್ಧತೆಯುಳ್ಳ ದೇವೇಗೌಡರು ಹಳಗನ್ನಡವಿದ್ದಂತೆ ಎಂದು ಹೇಳಿದರು.

ಕಸಾಪ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಕರೆಸುವ ಉದ್ದೇಶ ಕನ್ನಡದ ಕೆಲಸಗಳನ್ನು ಅವರಿಗೆ ವಹಿಸಲೆಂದು. ಹಾಗೆಯೇ ಈ ಬಾರಿ ದೇವೇಗೌಡರನ್ನು ಆಹ್ವಾನಿಸಿರುವ ಉದ್ದೇಶವೂ ಅದೆ. ಕನ್ನಡದ ಕಾರ್ಯವನ್ನು ಅವರು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ಸಮಾಜದ ಅವಶ್ಯಕತೆಗಳ ಬಗ್ಗೆಯೂ ಗಮನ ಹರಿಸಿದ ಅವರು, ಪ್ರಸ್ತುತಕ್ಕೆ ಸಲ್ಲಲೇಬೇಕಾಗಿರುವ, ಸಹಿಷ್ಣುತೆ, ಮಾನವೀಯತೆ, ಪ್ರೀತಿ ವಾತ್ಸಲ್ಯಗಳ ಗುಣಪಾಠಗಳು ಹಳಗನ್ನಡದಲ್ಲಿ ಆಗಲೇ ದಾಖಲಾಗಿವೆ ಎಂದರು.












Click it and Unblock the Notifications