ಹಾಸನದಲ್ಲಿ ಭೀಕರ ಅಪಘಾತ: ನಾಲ್ವರ ದಾರುಣ ಸಾವು

ಹಾಸನ, ಜುಲೈ 21: ಟಿಪ್ಪರ್ ವಾಹನ ಡಿಕ್ಕಿಯಾಗಿ ಇನೋವಾ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ. ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್, ಗುಡ್ಡೇನಹಳ್ಳಿ ಗ್ರಾಮದ ಅಶೋಕ್, ತಟ್ಟೆಕೆರೆ ಪುರುಷೋತ್ತಮ ಹಾಗೂ ಆಲೂರು ತಾಲೂಕಿನ ಚಿಗಳೂರು ಗ್ರಾಮದ ದಿನೇಶ್ ಮೃತ ದುರ್ದೈವಿಗಳು.

ಇನೋವಾ ಕಾರಿನಲ್ಲಿ ಸಕಲೇಶಪುರದಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಹಾಸನ ಕಡೆಯಿಂದ ಆಗಮಿಸುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಮೃತದೇಹಗಳನ್ನು ಆಲೂರಿನ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಪಟ್ಟವರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

accident-at-hassan

ಧಾರಾಕಾರ ಮಳೆಯಿಂದ ಕುಸಿದು ಬಿದ್ದ ಮನೆ

ಚಿಕ್ಕಮಗಳೂರು : ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿರಂತರ ಮಳೆಯಿಂದಾಗಿ ತೀವ್ರ ಶೀತಗೊಂಡಿದ್ದ ಮನೆಯ ಗೋಡೆ ಕುಸಿದು ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಡೆದಿದೆ.

ಸೀತಾಪುರ ಗ್ರಾಮದ ನಟೇಶ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮಧ್ಯಾಹ್ನದ ವೇಳೆ ಅಡುಗೆ ಮಾಡುತ್ತಿದ್ದಾಗಲೇ ಏಕಾಏಕಿ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದು, ಮನೆ ಭಾಗಶಃ ಸಂಪೂರ್ಣ ನಾಶವಾಗಿದೆ. ಮನೆಯಲ್ಲಿ ಇಟ್ಟಿದ್ದ ಪಾತ್ರೆ ದವಸ ಧಾನ್ಯಗಳು ನಾಶವಾಗಿವೆ.

ಕಳೆದ ಎರಡು ದಿನಗಳಿಂದ ತರೀಕೆರೆ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು ಮಳೆ ಪರಿಣಾಮ ಮನೆಯ ಅಡಿಪಾಯ ಸಂಪೂರ್ಣ ಶೀತವಾದ ಪರಿಣಾಮ ಗೋಡೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

accident-at-hassan

ಕೊಟ್ಟಿಗೆಯಲ್ಲಿದ್ದ 9 ಕುರಿಗಳ ಕತ್ತು ಕೊಯ್ದ ಕಿಡಿಕೇಡಿಗಳು

ಚಿಕ್ಕಮಗಳೂರು: ಕೊಟ್ಟಿಗೆಯಲ್ಲಿದ್ದ 9 ಕುರಿಗಳ ಕತ್ತು ಕೊಯ್ದು ಅಮಾನುಷವಾಗಿ ಕೊಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚಂದ್ರಶೇಖರ ಪುರ ಗ್ರಾಮದಲ್ಲಿ ನಡೆದಿದೆ. ಹಗಲು ಹೊತ್ತಿನಲ್ಲೇ 39 ಕುರಿಗಳ ಪೈಕಿ 9 ಕುರಿಗಳ ಕತ್ತನ್ನು ಕೊಯ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗ್ರಾಮದ ದಿನಕರ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದು ಕೊಟ್ಟಿಗೆಯ ತುಂಬ ರಕ್ತಸಿಕ್ತ ಕುರಿಗಳನ್ನು ಕಂಡು ಕುರಿಗಾಹಿ ದಿನಾಕರ್ ಕಂಗಾಲಾಗಿದ್ದಾರೆ. ಇನ್ನಷ್ಟು ಕುರಿಗಳನ್ನು ಕೊಲ್ಲಲು ಮುಂದಾಗಿದ್ದ ದುಷ್ಕರ್ಮಿಗಳು ಮನೆಯ ಸುತ್ತಮುತ್ತ ಇದ್ದ ನಾಯಿಗಳ ಚಿರಾಟದಿಂದ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆಸಿದ ಕಿಡಿಗೇಡಿಗಳ ಬಳಗೆ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+