'ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು': ಬಿಜೆಪಿ

ಬೆಂಗಳೂರು, ಜನವರಿ 29: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಯ ಕಾರು ಬಳಕೆ ಮಾಡಿರುವ ಘಟನೆ ನಡೆದಿದೆ. ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ದನಿಯೆತ್ತಿರುವ ಕರ್ನಾಟಕದ ಬಿಜೆಪಿ ಘಟಕವು, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ವಿಡಿಯೋ ಟ್ವೀಟ್ ಮಾಡಿ ಛೀಮಾರಿ ಹಾಕಿದೆ.

"ಯಾರದೋ ಟ್ಯಾಕ್ಸ್​ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು," ಎಂದು ಕನ್ನಡದಲ್ಲಿ ಶೀರ್ಷಿಕೆ ನೀಡಿ, ಪ್ರಜ್ವಲ್ ಅವರು ತಮ್ಮ ತಂದೆ ರೇವಣ್ಣ ಅವರ ಸರ್ಕಾರಿ ವಾಹನ ಬಳಸುತ್ತಿರುವ ವಿಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದೆ.

BJP tweets and blasts H D Revanna’s son for using govt cars for personal use

"ಕುಟುಂಬ ರಾಜಕಾರಣದಿಂದ ಯಾವುದೇ ರಾಜ್ಯದಲ್ಲಿ ಏನೆಲ್ಲ ಆಗಲಿದೆ ಎಂಬುದಕ್ಕೆ ಪ್ರಜ್ವಲ್​ ಅವರ ಈ ವರ್ತನೆ ಒಂದು ಉತ್ತಮ ಉದಾಹರಣೆ. ದೇವೇಗೌಡರ ಕುಟುಂಬ ಸದಸ್ಯರು ತೆರಿಗೆ ಪಾವತಿಸುವ ನಾಗರಿಕರಿಗೆ ಮಾಡಿದ ಅಪಮಾನ,"ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ.

ದೇವೇಗೌಡರಿಂದ‌ ಗ್ರೀನ್ ಸಿಗ್ನಲ್‌ ಸಿಕ್ಕ ಬಳಿಕ ಚುನಾವಣಾ ಪ್ರಚಾರ ಪೂರ್ವ ಸಿದ್ಧತೆ ಆರಂಭಿಸಿರುವ ಪ್ರಜ್ವಲ್ ರೇವಣ್ಣ ಅವರು ಇಂದು ಹಾಸನ‌ ನಗರದ ‌ವಿವಿಧೆಡೆ‌ ಪಕ್ಷದ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳ‌ ಸಭೆ ನಡೆಸಿದರು. ನಿನ್ನೆ ನಗರಸಭೆ ವಾರ್ಡ್ ವಾರ್ ಸಭೆಗಳನ್ನು ಯಶಸ್ವಿಯಾಗಿ ಪೂರೈಸಿದ್ದರು.

BJP tweets and blasts H D Revanna’s son for using govt cars for personal use

ಹಾಸನ‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಹೆಸರಿನಲ್ಲಿ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದ ತಂತ್ರವನ್ನು ಪ್ರಜ್ವಲ್ ಬೋಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+