Get Updates
Get notified of breaking news, exclusive insights, and must-see stories!

ಅರಸೀಕೆರೆಯಲ್ಲಿ ಪಕ್ಷಾಂತರಿಗಳ ಪೈಪೋಟಿ, ಯಾರಿಗೆ ಗೆಲುವು?

ಹಾಸನ, ಮೇ 03; ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರದಲ್ಲಿ ಅರಸೀಕೆರೆಯೂ ಒಂದು. ಜೆಡಿಎಸ್‌ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಚುನಾವಣೆ ಪಕ್ಷಾಂತರಿಗಳ ಪೈಪೋಟಿ ಎಂದರೆ ತಪ್ಪಿಲ್ಲ. ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಜಿ. ವಿ. ಬಸವರಾಜು, ಕಾಂಗ್ರೆಸ್‌ನಿಂದ ಕೆ. ಎಂ. ಶಿವಲಿಂಗೇಗೌಡ ಮತ್ತು ಜೆಡಿಎಸ್‌ನಿಂದ ಎನ್. ಆರ್. ಸಂತೋಷ್ ಅಭ್ಯರ್ಥಿಗಳು. ಜೆಡಿಎಸ್‌ ಶಾಸಕ ಕೆ. ಎಂ. ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದರೆ, ಬಿಜೆಪಿ ಟಿಕೆಟ್ ಸಿಗದ ಎನ್. ಆರ್. ಸಂತೋಷ್ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.

Arasikere Fight Between Congress And JDS

ಕೆ. ಎಂ. ಶಿವಲಿಂಗೇಗೌಡ 2008, 2023 ಮತ್ತು 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಆದರೆ ಪಕ್ಷದ ವರಿಷ್ಠರ ಮೇಲೆ ಅಸಮಾಧಾನಗೊಂಡು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಸಿದ್ದರಾಮಯ್ಯ ಆಪ್ತರಾದ ಅವರು ವಿಧಾನಸಭೆ ಕಲಾಪಪದಲ್ಲಿ ತಮ್ಮ ಭಾಷಣದ ಮೂಲಕ ಗಮನ ಸೆಳೆದವರು. ಯಾವುದೇ ಸರ್ಕಾರವಿದ್ದರೂ ಅನುದಾನ ತರುವಷ್ಟು ಎಲ್ಲಾ ಪಕ್ಷಗಳಲ್ಲೂ ಸ್ನೇಹ ಹೊಂದಿದ್ದಾರೆ.

ಜೆಡಿಎಸ್‌ಗೆ ಸವಾಲು ಹಾಕಿ ನಿಂತಿದ್ದಾರೆ; ಮೂರು ಬಾರಿ ಜೆಡಿಎಸ್‌ನಿಂದ ಗೆದ್ದಿರುವ ಶಿವಲಿಂಗೇಗೌಡ ಮೊದಲ ಬಾರಿಗೆ ಜೆಡಿಎಸ್ ನಾಯಕರಿಗೆ ಸವಾಲು ಹಾಕಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಅವರನ್ನೂ ಸೋಲಿಸಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ಪಕ್ಷ ಎನ್. ಆರ್. ಸಂತೋಷ್ ಕಣಕ್ಕಿಳಿಸಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್. ಡಿ. ರೇವಣ್ಣ ಕೆ. ಎಂ. ಶಿವಲಿಂಗೇಗೌಡ ಸೋಲಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

Arasikere Fight Between Congress And JDS

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಬಂಧಿಯೂ ಆಗಿರುವ ಎನ್. ಆರ್.‌ ಸಂತೋಷ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಆದರೆ ಬಿಜೆಪಿ ಜಿ. ವಿ. ಬಸವರಾಜು ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಅಸಮಾಧಾನಗೊಂಡ ಅವರು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಭೇಟಿಯಾದರು. ಬಳಿಕ ಪಕ್ಷ ಸೇರಿದರು. ಎಚ್. ಡಿ. ಕುಮಾರಸ್ವಾಮಿ ಅರಸೀಕೆರೆಗೆ ಎನ್. ಆರ್. ಸಂತೋಷ್ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ 2018ರಲ್ಲಿ ಪಡೆದ ಮತಗಳು 50,297, ಬಿಜೆಪಿ 25,258. ಜೆಡಿಎಸ್‌ನ ಶಿವಲಿಂಗೇಗೌಡ 93,986 ಮತಗಳನ್ನು ಪಡೆದು ಜಯಗಳಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರಾಳಿಗಳಾಗಿದ್ದವು.

2013ರ ಚುನಾವಣೆಯಲ್ಲಿ ಕೆ. ಎಂ. ಶಿವಲಿಂಗೇಗೌಡ 76,579 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಪಡೆದ ಮತಗಳು ಕೇವಲ 2,464. ಕಾಂಗ್ರೆಸ್‌ 46,948. ಕೆಜೆಪಿ ಅಭ್ಯರ್ಥಿ 26,312 ಮತ ಪಡೆದಿದ್ದರು. ಬಿಜೆಪಿ, ಕೆಜೆಪಿ ಗೊಂದಲದ ಕಾರಣ ಬಿಜೆಪಿಗೆ ತೀವ್ರವಾದ ಹಿನ್ನಡೆ ಉಂಟಾಗಿತ್ತು.

2008ರಲ್ಲಿ ಕೆ. ಎಂ. ಶಿವಲಿಂಗೇಗೌಡ 74,025 ಮತಗಳನ್ನು ಪಡೆದು ಗೆದ್ದರು. ಬಿಜೆಪಿ 19,824 ಮತಗಳನ್ನು ಪಡೆದರು. ಕಾಂಗ್ರೆಸ್ 39,799 ಮತಗಳನ್ನು ಪಡೆದಿತ್ತು. ಕ್ಷೇತ್ರದಲ್ಲಿ ಶಿವಲಿಂಗೇಗೌಡರು ಪಕ್ಷವನ್ನೂ ಮೀರಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಆದ್ದರಿಂದ ಅವರನ್ನು ಕಟ್ಟಿ ಹಾಕುವುದು ಸುಲಭದ ಮಾತಲ್ಲ ಎಂಬ ಮಾತುಗಳಿವೆ.

ಬಿಜೆಪಿ ಜಿ. ವಿ. ಬಸವರಾಜು ಪಕ್ಷಕ್ಕೆ ನಿಷ್ಠರು. ಪಕ್ಷದ ಬಲ ಅವರಗೆ ಇದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವವಿಲ್ಲ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಪ್ರಚಾರ ಮಾಡುವಾಗ ಜೆಡಿಎಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದ ಸಂತೋಷ್ ಅದೇ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ. ಆದ್ದರಿಂದ ಕೆಲವು ನಾಯಕರು ಚುನಾವಣೆಯಲ್ಲಿ ತಟಸ್ಥವಾಗಿ ಉಳಿದರೆ ಸಂತೋಷ್ ಗೆಲುವು ಕಷ್ಟವಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+