ಮೆದುಳಿನ ರಕ್ತಸ್ರಾವದಿಂದ ಹಾಸನದ ವೈದ್ಯ ಸಾವು; ಪರಿಹಾರಕ್ಕೆ ಒತ್ತಾಯ

ಹಾಸನ, ಜೂನ್ 10: ಮೆದುಳಿನ ರಕ್ತಸ್ರಾವದಿಂದಾಗಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ವೈದ್ಯ ಶಿವಕಿರಣ್ ಅವರು ಇಂದು ಮೃತಪಟ್ಟಿದ್ದಾರೆ.

Recommended Video

      Sriramulu taking a break at a small shop video goes viral | Oneindia Kannada

      ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ದಶಕಗಳಿಂದ ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

      ಶಿವಕಿರಣ್ ಅವರ ಸಾವಿಗೆ ಸರ್ಕಾರ ಪರಿಹಾರ ಧನವನ್ನು ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಾಂ ಒತ್ತಾಯಿಸಿದ್ದಾರೆ. ಸತತ ಮೂರು ತಿಂಗಳುಗಳಿಂದ ನಿರಂತರ ಒತ್ತಡದಿಂದಾಗಿ ಮಾನಸಿಕವಾಗಿ ಜರ್ಝರಿತಗೊಂಡಿದ್ದ ಹಾಸನ ಜಿಲ್ಲೆಯ ವೈದ್ಯ ಶಿವಕಿರಣ್ ಅವರು ಇಂದು ಸಾವನ್ನಪ್ಪಿರುವುದು ದುರ್ದೈವದ ಸಂಗತಿ. ಕೊರೊನಾ ವಾರಿಯರ್ಸ್ ಗಳ ಸಾವಿಗೆ ದೆಹಲಿ ಸರ್ಕಾರದ ಮಾದರಿಯಲ್ಲಿ ಒಂದು ಕೋಟಿ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಬೇಕೆಂದು ಸರ್ಕಾರವನ್ನು ಪಕ್ಷ ಒತ್ತಾಯಿಸಿದೆ.

      Aam Admi Party Demands Compensation For Hassan Doctor Death

      ಸರ್ಕಾರ ಘೋಷಿಸಿರುವ ಪರಿಹಾರ ಅತ್ಯಂತ ಕನಿಷ್ಠವಾಗಿದೆ. ಅವರ ಕುಟುಂಬ ವರ್ಗಗಳಿಗೆ ಮುಂದಿನ ಭವಿಷ್ಯದಲ್ಲಿ ಯಾವುದಕ್ಕೂ ಈ ಹಣ ಸಾಲುವುದಿಲ್ಲ. ತಮ್ಮ ಜೀವನವನ್ನೇ, ಜೀವದ ಹಂಗನ್ನೇ ತೊರೆದು ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ಮಾಡುವ ವೈದ್ಯ ವರ್ಗ ಬೀದಿಗೆ ಇಳಿಯುವ ಮೊದಲೇ ಸರ್ಕಾರವು ಸಮಂಜಸವಾದ ಪರಿಹಾರವನ್ನು ಘೋಷಿಸಬೇಕೆಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+