ಗಣಪತಿ ವಿಸರ್ಜನೆ ವೇಳೆ ಇಬ್ಬರ ಸಾವು, ಸಹೋದರನನ್ನು ನೋಡಲು ಬಂದ ಮತ್ತೊಬ್ಬ ವ್ಯಕ್ತಿಗೆ ಹೃದಯಾಘಾತ
ಹಾಸನ, ಅಕ್ಟೋಬರ್ 08: ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ದುರುಂತ ಒಂದು ನಡೆದುಹೋಗಿದೆ. ವಿಸರ್ಜಣೆ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಸಹೋದರರನ್ನು ನೋಡಲು ಆಸ್ಪತ್ರೆಗೆ ಬಂದ ಮತ್ತೊಬ್ಬ ಸಹೋದರ ಸ್ಥಳದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂತಹದ್ದೊಂದು ಕರುಣಾಜನಕ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ವಡಗೇರಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗಣೇಶ ವಿಸರ್ಜನ ವೇಳೆ ಮೃತಪಟ್ಟ ಒಬ್ಬ ಮಗನನ್ನು ನೋಡಲು ಬಂದ ಮತ್ತೊಬ್ಬ ಮಗನ ಸಾವು ಕಂಡು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಪ್ರವೀಣ್ (28), ಆಟೋ ಚಾಲಕನಾಗಿದ್ದ ನಾಗರಾಜು(32) ಮೃತದುರ್ದೈವಿಗಳು. ಮಧು ಹೃದಯಾಘಾತದಿಂದ ಮೃತಪಟ್ಟ ನಾಗರಾಜುವಿನ ಸಹೋದರ. ಹಲವು ವರ್ಷಗಳ ನಂತರ ತುಂಬಿದ್ದ ಗ್ರಾಮದ ಕೆರೆಯಲ್ಲಿಯೇ ಗಣಪತಿ ವಿಸರ್ಜನೆ ಮಾಡಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಕೂರಿಸಿದ್ದ ಸಾರ್ವಜನಿಕ ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿದೆ.
ಮೃತಪಟ್ಟಿ ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ವಿಜರ್ಸನೆ ಮಾಡುವ ಸಂದರ್ಭದಲ್ಲಿ ಜಾರಿ ನೀರಿಗೆ ಬಿದ್ದು ಈಜು ಬಾರದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಹೋದರನ ಸಾವಿನ ಸುದ್ದಿ ತಿಳಿದು ಹಾಸನದ ಜಿಲ್ಲಾಸ್ಪತ್ರೆಯ ಮಧು ಓಡೋಡಿ ಬಂದಿದ್ದ. ಆಸ್ಪತ್ರೆಯ ಶವಾಗಾರದ ಬಳಿ ಮೃತ ನಾಗಾರಾಜುನನ್ನು ನೋಡಿ ಒತ್ತಡಕ್ಕೊಳಗಾಗಿದ್ದ. ಸಹೋದರನ ಮೃತದೇಹವನ್ನು ನೋಡಿಕೊಂಡು ಹೊರಕ್ಕೆ ಬರುತ್ತಿದ್ದಂತೆ ಮಧು ಇದ್ದಕ್ಕಿದ್ದಂತೆ ಕೆಳಕ್ಕೆ ಕುಸಿದು ಬಿದ್ದಿದ್ದ. ತಕ್ಷಣವೇ ಐಸಿಯೂ ನಲ್ಲಿ ಚಿಕಿತ್ಸೆ ಕೊಡಿಸಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮಧು ಅಂಗವಿಕಲನಾಗಿದ್ದರೂ ಶ್ರಮಪಟ್ಟು ದುಡಿಯುತ್ತಿದ್ದರು. ಬೆಂಗಳೂರಿನಲ್ಲಿ ಚಿಪ್ಸ್, ನೀರು ಬಾಟಲ್, ಹೋಲ್ ಸೇಲ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ನಡುವೆ ವಿಜಯದಶಮಿ ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಈ ವೇಳೆ ಇಂತಹದ್ದೊಂದು ದುರ್ಘಟನೆ ನಡೆದಿದೆ. ಸಂಬಂಧಿಕರು ಹಾಗೂ ಗ್ರಾಮಸ್ಥರು ಸಹೋದರರ ಸಾವಿಗೆ ಕಣ್ಣೀರಿಟ್ಟಿದ್ದಾರೆ. ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲಾಡಳಿತವು ಮಾನವೀಯತೆಯ ಆಧಾರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.












Click it and Unblock the Notifications