ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದಾಗ ವಿದ್ಯುತ್ ತಗುಲಿ ಮೂವರ ಸಾವು
ಹಾಸನ, ಮೇ 24 : ಹಾಸನ ತಾಲೂಕು ಶಂಕರನಹಳ್ಳಿ ಬಳಿ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದಾರೆ.
ಗೋಪನಹಳ್ಳಿ ಗ್ರಾಮದ ರವಿ(56), ಪ್ರಸಾದ್(23) ಮತ್ತು ಕಿಟ್ಟಿ (59)ಮೃತ ದುರ್ದೈವಿಗಳು. ಮಳೆ, ಗಾಳಿಗೆ ತುಂಡಾಗಿ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಯ ಸಮೀಪ ಬೈಕ್ ಹಾದು ಹೋಗುವಾಗ ವಿದ್ಯುತ್ ಹರಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಳೆ, ಗಾಳಿ ಹಿನ್ನಲೆಯಲ್ಲಿ ವಿದ್ಯುತ್ ವೈರ್ ತುಂಡಾಗಿ ರಸ್ತೆಗೆ ಬಿದ್ದಿದೆ. ಬಳಿಕ ವೈರ್ ಪಕ್ಕದಲ್ಲಿ ಬೈಕ್ ಹೋಗುತ್ತಿದ್ದಂತಯೇ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದ
ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಹಿನ್ನೆಲೆಯಲ್ಲಿ ಸೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರ ಪಟ್ಟು ಹಿಡಿದಿದ್ದಾರೆ.
ಅಧಿಕಾರಿಗಳು ಬರುವವರೆಗೂ ಮೃತರ ಶವಗಳನ್ನ ಸ್ಥಳದಿಂದ ಎತ್ತದಿರಲು ನಿರ್ಧಾರ ಮಾಡಿದ್ದು, ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications