ಅಸ್ಸಾಂ: ಮಾರ್ಕೆಟ್‌ನಲ್ಲಿ ಗ್ರೆನೇಡ್ ಸ್ಫೋಟದಿಂದ ಇಬ್ಬರ ಸಾವು
ಗುವಾಹಟಿ, ನವೆಂಬರ್ 22: ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಗುರುವಾರ ಸಂಜೆ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಗ್ರೆನೇಡ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಸರ್ಕಾರ ಮತ್ತು ಉಲ್ಫಾ ಉಗ್ರರ ಮಾತುಕತೆಯ ವಿರುದ್ಧ ಇರುವ ಗುಂಪು ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದ್ದು, ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾವಿಗೀಡಾದವರಲ್ಲಿ ಒಬ್ಬ ವ್ಯಕ್ತಿ ಸ್ಫೋಟ ಸಂಭವಿಸಿದ ಹಾರ್ಡ್ ವೇರ್ ಅಂಗಡಿಗೆ ಬಂದಿದ್ದ ಗ್ರಾಹಕ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ವ್ಯಕ್ತಿಯನ್ನು ಸ್ಥಳೀಯ ವ್ಯಾಪಾರಿ ಕಮಲ್ ಅಗರವಾಲ್ ಎಂದು ಗುರುತಿಸಲಾಗಿದೆ.

ಡೆಮೊವ್ ಚರಿಲಾಲ್‌ನಲ್ಲಿನ ನಿತಾಯಿ ರಸ್ತೆಯಲ್ಲಿ ಸಂಜೆ 5.30ರ ವೇಳೆಗೆ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಅಸ್ಸಾಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ತಿನ್ಸುಕಿಯಾ ಜಿಲ್ಲೆಯಲ್ಲಿ ಧೋಲಾದಲ್ಲಿ ಬಂಗಾಳಿ ಮಾತನಾಡುವ ಐವರನ್ನು ನ.1ರಂದು ಉಗ್ರರ ಸಂಘಟನೆ ಹತ್ಯೆ ಮಾಡಿತ್ತು.
ಕಳೆದ ಎರಡು ವಾರಗಳಲ್ಲಿ ಇಬ್ಬರು ಟೀ ಉದ್ಯಾನದ ಉದ್ಯೋಗಿಗಳನ್ನು ಸೇರಿದಂತೆ ಮೂವರು ವ್ಯಕ್ತಿಗಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇರಿಸಿದ್ದರು.












Click it and Unblock the Notifications