• search
  • Live TV
ಗುವಾಹಾಟಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಟ್ಟುಹಬ್ಬ ಆಚರಿಸಿ ಅಜ್ಜನಿಗೆ ಅಚ್ಚರಿ ನೀಡಿದ ಪೊಲೀಸರು

|

ನಾಗಾನ್, ಮೇ 5: ಲಾಕ್‌ಡೌನ್ ನಿಯಂತ್ರಣಕ್ಕೆ ತರಲು ಪೊಲೀಸರು ರಸ್ತೆ ಮೇಲೆ ಬಂದ ಜನರಿಗೆ ಲಾಠಿ ಏಟು ನೀಡಿದ್ದ ದೃಶ್ಯಗಳನ್ನು ಎಲ್ಲರೂ ನೋಡಿದ್ದಾರೆ. ಆ ಸಮಯದಲ್ಲಿ ಆ ರೀತಿ ಮಾಡುವುದು ಅನಿವಾರ್ಯವಾಗಿತ್ತು ಕೂಡ. ಆದರೆ, ಆ ರೀತಿಯ ಘಟನೆ ಒಂದು ಕಡೆಯಾಗಿದ್ದರೆ, ಈಗ ಅಸ್ಸಾಂನಲ್ಲಿ ಪೊಲೀಸರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ವೃದ್ಧರೊಬ್ಬರ ಹುಟ್ಟುಹಬ್ಬವನ್ನು ಅಲ್ಲಿನ ಪೊಲೀಸರು ಸೇರಿ ಆಚರಣೆ ಮಾಡಿದ್ದಾರೆ. ಕೆಪಿ ಅಗರ್ವಾಲ್ ಎಂಬ ಅಜ್ಜನ ಬರ್ತ್‌ಡೇಯನ್ನು ಪೊಲೀಸರು ಆಚಸಿದ್ದಾರೆ. ತಾತನ 78 ವರ್ಷದ ಹುಟ್ಟುಹಬ್ಬಕ್ಕೆ ಪೊಲೀಸರು ಸಿಹಿ ತಿನ್ನಿಸಿದ್ದಾರೆ.

Fact Check: ಅಸ್ಸಾಂ ಸಮುದಾಯದವರಿಗೆ ಕೊರೊನಾ ವೈರಸ್ ಬರಲ್ವಾ?

ಲಾಕ್‌ಡೌನ್ ಘೋಷಣೆಯಾದ ಸಮಯದಲ್ಲಿ ಹಲವು ಕಡೆ, ಕುಟುಂಬದ ಸದಸ್ಯರು ಬೇರೆ ಬೇರೆ ಊರುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದೇ ರೀತಿ ಅಸ್ಸಾಂನ ನಾಗಾನ್ ಜಿಲ್ಲೆಯ ಕೆಪಿ ಅಗರ್ವಾಲ್ ಎಂಬ ವೃದ್ಧರೊಬ್ಬರ ಕುಟುಂಬ ಸದಸ್ಯರು ಕೂಡ ಬೇರೆ ಕಡೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಮಾಸ್ಕ್‌ ಧರಿಸಿ, ಸಿಹಿ ಹಿಡಿದು ಬಂದ ಪೊಲೀಸರು ಕೆಪಿ ಅಗರ್ವಾಲ್ ಮನೆಯ ಗೇಟ್‌ ತಟ್ಟಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಯಾರು ಬಂದರು ಎಂದು ಮನೆಯಿಂದ ಹೊರ ಬಂದ ಅಜ್ಜನಿಗೆ ಪೊಲೀಸರು ಶುಭಾಶಯ ಕಂಡಿದೆ. ನಾಮ ಫಲಕಗಳನ್ನು ಹಿಡಿದು ಕೆಪಿ ಅಗರ್ವಾಲ್‌ರಿಗೆ ಶುಭಾಶಯ ತಿಳಿಸಿದ್ದಾರೆ.

ಈ ವಿಡಿಯೋವನ್ನು ಅಸ್ಸಾಂ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರ ಹೃದಯವಂತಿಕೆಗೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿದೆ.

English summary
Assam police celebrated 78 years old man's birthday with sweets has been going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X