just in: ಗುರ್‌ಗಾಂವ್‌ನಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಆರೋಪಿ ಬಂಧನ
ಗುರ್‌ಗಾಂವ್, ಜುಲೈ 25: ಗುರ್‌ಗಾಂವ್‌ನಲ್ಲಿ ಮದುವೆಯ ನೆಪದಲ್ಲಿ 53 ವರ್ಷದ ತೈವಾನ್ ಪ್ರಜೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಮಹಿಳೆ 2017 ರಿಂದ ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಬಂಧಿತ ಆರೋಪಿ ರವೀಂದ್ರ ವಿಶ್ವಕರ್ಮ ಖಾಸಗಿ ಕ್ಲಿನಿಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆರು ತಿಂಗಳ ಹಿಂದೆ ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತನ್ನ ದೂರಿನಲ್ಲಿ, 'ತಾನು ಸೆಕ್ಟರ್ 52 ರಲ್ಲಿರುವ ಪೇಯಿಂಗ್ ಗೆಸ್ಟ್ ಒಂದರಲ್ಲಿ ಉಳಿದುಕೊಂಡಿದ್ದೇನೆ. ಆರೋಪಿ ವಿಶ್ವಕರ್ಮ ಹತ್ತಿರದಲ್ಲಿಯೇ ವಾಸವಿದ್ದಾನೆ ಎಂದು ಹೇಳಿದ್ದಾರೆ.

"ನಾವು ಫೆಬ್ರವರಿಯಲ್ಲಿ ಮೊದಲು ಭೇಟಿಯಾದೆವು. ಅವರು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಪ್ರತಿದಿನ ನನಗೆ ಶುಭೋದಯ ಹೇಳುತ್ತಿದ್ದರು. ಒಂದು ದಿನ, ಅವರು ನನಗೆ ಕಾಫಿ ನೀಡಿದರು. ಹೀಗೆ ಪರಸ್ಪರ ಚೆನ್ನಾಗಿ ಪರಿಚಯ ಮಾಡಿಕೊಂಡೆವು. ನಂತರ ಅವರು ನನಗೆ ಮದುವೆ ಪ್ರಸ್ತಾಪವಿರಿಸಿದರು. ನಾನು ಅವರನ್ನು ಪ್ರೀತಿಸುತ್ತಿದ್ದೆ, ಹೀಗಾಗಿ ಅವರ ಪ್ರಸ್ತಾಪವನ್ನು ಒಪ್ಪಿಕೊಂಡೆ" ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
'ಮದುವೆಯ ಸುಳ್ಳು ಭರವಸೆ ನೀಡಿ ನನ್ನ ಒಪ್ಪಿಗೆಯಿಲ್ಲದೆ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದನು. ಮದುವೆ ವಿಷಯ ಬಂದಾಗ ಮದುವೆಯಾಗಲು ನಿರಾಕರಿಸಿ, ನನ್ನ ದೂರವಾಣಿ ಕರೆಯನ್ನು ಬ್ಲಾಕ್ ಮಾಡಿದ್ದಾರೆ' ಎಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿ ರವೀಂದ್ರ ವಿಶ್ವಕರ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಸೆಕ್ಟರ್ 53ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಂದ್ರಕಾಂತ್ ತಿಳಿಸಿದ್ದಾರೆ.
"ಆರೋಪಿಯನ್ನು ಬಂಧಿಸಲಾಗಿದ್ದು, ಆತ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ. ಅವನನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಅಧಿಕಾರಿ ಹೇಳಿದ್ದಾರೆ.












Click it and Unblock the Notifications