Basangouda Yatnal: ಗದಗ ಬಿಜೆಪಿ ಅಭ್ಯರ್ಥಿ ಪರ ನಾನು ರೋಡ್ ಶೋ ಮಾಡ್ತೇನೆ, ಕಡೆಗಣಿಸುವ ಮಾತೇ ಇಲ್ಲ: ಯತ್ನಾಳ್
ಗದಗ, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ನಾಕಯರು ತಮ್ಮ ತಮ್ಮ ಕ್ಷೆತ್ರಗಳಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಗದಗ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಯನ್ನು ಕಡೆಗಣನೆ ಮಾಡುತ್ತಿದ್ದಾರೆ ಎನ್ನುವ ಗಾಳಿಸುದ್ದಿಯೊಂದು ಹರಡಿತ್ತು. ಇದಕ್ಕೆ ಇದೀಗ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳು ನಮಗೆ ಮಹತ್ವದ್ದಾಗಿದೆ. ನಮ್ಮ ಅಭ್ಯರ್ಥಿಯನ್ನು ಕಡೆಗಣಿಸುವ ಮಾತೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗದಗದಲ್ಲಿ ಹೇಳಿದರು. ಅಲ್ಲದೆ ಇಲ್ಲಿನ ಬಿಜೆಪಿ ಅಭ್ಯರ್ಥಿ ಪರವಾಗಿ ನಾನು ನಾಳೆ ಸಂಜೆ ರೋಡ್ ಮಾಡುತ್ತೇನೆ ಎಂದರು.

ಗದಗ ಮತಕ್ಷೇತ್ರದಲ್ಲಿ ಸ್ಟಾರ್ ಕ್ಯಾಂಪೇನರ್ ಬರುತ್ತಿಲ್ಲ, ಬಿಜೆಪಿ ಅಬ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಯಾರು ಅಷ್ಟು ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಮಂಗಳವಾರ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಆ ರೀತಿ ಆಗಲ್ಲ. ನಾನು ಮತ್ತೆ ನಾಳೆ ವಾಪಸ್ ಗದಗ ನಗರಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದರು.
ಗದಗ ಎ ಪ್ಲಸ್ ಇರುವಂತಹ ವಿಧಾನಸಭಾ ಕ್ಷೇತ್ರ ಆಗಿದೆ. ನಾಳೆ ಸಂಜೆ 7 ಗಂಟೆಗೆ ಬಂದು ರೋಡ್ ಶೋ ಮಾಡುತ್ತೇನೆ. ಕಾರ್ಯಕರ್ತರನ್ನು ಕೂಡಿಸಿ ಸಭೆ ಕೂಡ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಒನ್ನು ಬಿಜೆಪಿ ಪ್ರಣಾಳಿಕೆ ಕಟ್ & ಪೇಸ್ಟ್ ಎಂಬ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಕಟ್ & ಪೇಸ್ಟ್ ಮಾಡುತ್ತಾ ಬಂದಿದ್ದಾರೆ. ನಮ್ಮ ಪ್ರಣಾಳಿಕೆ ಅವರಿಗೆ ಸಂಬಂಧವಿಲ್ಲ. ಗಣೇಶ ಚತುರ್ಥಿ, ವಿಜಯದಶಮಿ, ದೀಪಾವಳಿಗೆ ಮೂರು ಗ್ಯಾಸ್ ಸಿಲಿಂಡರ್ ನೀಡುತ್ತಿರುವುದು ಕಟ್ & ಪೇಸ್ಟ್ ಅಲ್ಲ ಎಂದರು.
ಅರೋಗ್ಯ ದೃಷ್ಟಿಯಿಂದ 5 ಕೆ.ಜಿ. ಅಕ್ಕಿ, 5 ಕೆ.ಜಿ. ಸಿರಿಧಾನ್ಯ ಘೋಷಣೆ ಮಾಡಿದ್ದೇವೆ. ನಮ್ಮ ಸಿದ್ದರಾಮಯ್ಯ 10 ಕೆ.ಜಿ. ಅಂತಾ ಹೇಳುತ್ತಾರೆ. ಆರೋಪ ಮಾಡುವುದೇ ಅವರ ಕೆಲಸ ಆಗಿದೆ. ಆದರೆ ಪ್ರಧಾನ ಮಂತ್ರಿಗಳು 2 ವರ್ಷದಿಂದ 80 ಕೋಟಿ ಜನರಿಗೆ ಉಚಿತ ಅಕ್ಕಿ ಕೊಡುತ್ತಿದ್ದಾರೆ ಎಂದರು.
ಅತಿಶಯೋಕ್ತಿ ಆಗುವ ಯಾವುದೇ ಪ್ರಣಾಳಿಕೆಯನ್ನು ನಾವು ನೀಡಿಲ್ಲ. ಬೆಂಗಳೂರು ಮಹಾನಗರ ಬಿಟ್ಟು ಉಳಿದ ಕಡೆ ನಾವು ಉದ್ಯೋಗ ಸೃಷ್ಠಿ ಮಾಡುವ ಆಲೋಚನೆ ಇದೆ. ಸುಮ್ಮನೆ ವಿದ್ಯುತ್ ಉಚಿತ, ಮಹಿಳೆಯರಿಗೆ ಬಸ್ ಉಚಿತ ಅಂತೆಲ್ಲ ಹೇಳಿಲ್ಲ. ಈ ರೀತಿಯ ಜನಪ್ರಿಯ ಕಾರ್ಯಕ್ರಮದಿಂದ ರಾಜ್ಯ ಸರ್ಕಾರ ದಿವಾಳಿ ಆಗುತ್ತದೆ. ಜನರಿಗೆ ಬೇಕಾಗಿರುವುದು ಉದ್ಯೋಗ, ನೀರಾವರಿ ಸೌಕಾರ್ಯ ಹಾಗೂ ಇತರೆ ಮೂಲಭೂತ ಬೇಡಿಕೆಗಳು ಎಂದರು.
24 ಗಂಟೆ ವಿದ್ಯುತ್ ಕೊಡಬೇಕು. ನಮ್ಮ ನಿರುದ್ಯೋಗಿ ಯುವಕರಿಗೆ ಕೈಗಾರಿಕೆಗಳು, ಉದ್ಯೋಗಾವಕಾಶ ಸೃಷ್ಠಿ ಮಾಡಬೇಕು. ಯಾವುದೇ ಜನಪ್ರಿಯ ಕಾರ್ಯಕ್ರಮಗಳಿಗೆ ನಾವು ಹೆಚ್ಚು ಒತ್ತು ಕೊಟ್ಟಿಲ್ಲ. ಹಸಿವಿನಿಂದ ಯಾರಿಗೂ ತೊಂದರೆ ಆಗಬಾರದು ಅಂತಾ 10 ಕೆ.ಜಿ. ಅಕ್ಕಿಯನ್ನು ನಾವು ಘೋಷಣೆ ಮಾಡಿದ್ದೇವೆ. ಇದನ್ನು ಬಿಟ್ಟರೆ ಯಾವುದೇ ರೀತಿ ಜನರಿಗೆ ಮೋಸ ಮಾಡುವಂತಹ, ಟೋಪಿ ಹಾಕುವಂತಹ ಒಂದೂ ಕೂಡ ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದರು.
ರಾಜ್ಯದಲ್ಲಿ ಒಬ್ಬೇ ಒಬ್ಬ ಕ್ರಿಶ್ಚಿಯನ್ ಮತ್ತು ಮುಸ್ಲಿಂಗೆ ಟಿಕೆಟ್ ಕೊಟ್ಟಿಲ್ಲ. ಶೂ ಭಾಗ್ಯ, ಶಾದಿ ಭಾಗ್ಯ ಬಿಜೆಪಿ ತೆಗೆದು ಹಾಕಿದೆ. ಇನ್ನು ಸ್ವಾಭಿಮಾನ ಇದ್ದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕಬಾರದು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರನ್ನು ಕೇಳಿದವರಾರು? ನಾನಂತೂ ಕೇಳಲ್ಲ. ನಮ್ಮವರು ಯಾರಾದರು ಕೆಳುತ್ತಿದ್ದರೆ ಕೇಳಲಿ. ಅದು ಅವರಿಗೆ ಬಿಟ್ಟಿರುವ ವಿಚಾರ ಎಂದು ಪರೋಕ್ಷವಾಗಿ ಅಲ್ಪಸಂಖ್ಯಾತರ ಮತದ ಅವಶ್ಯಕತೆ ನಮಗೆ ಇಲ್ಲ ಎಂದರು.
ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗಿದೆ. ವಿಜಯಪುರ ಕಾರ್ಪೊರೇಷನ್ ಚುನಾವಣೆಯಲ್ಲಿಯೂ ಕೂಡ ಒಬ್ಬ ಮುಸ್ಲಿಮನಿಗೂ ಟಿಕೆಟ್ ಕೊಟ್ಟಿಲ್ಲ. ಅಭ್ಯರ್ಥಿಗಳಾದವರು ಒಳಗಿಂದೊಳಗೆ ಕಾಂಪ್ರೊಮೈಸ್ ಆಗಿ ಒಂದಾಗುತ್ತಾರೆ. ನಾವು ಹಿಂದೂಗಳಿಗೇ ಟಿಕೆಟ್ ಕೊಡುವುದು ಎಂದು ಹೇಳಿದರು.












Click it and Unblock the Notifications