ಎಚ್‌.ಡಿ. ಕುಮಾರಸ್ವಾಮಿ ಬರೀ ಕನಸು ಕಾಣುತ್ತಿದ್ದಾರೆ ಅಷ್ಟೇ: ಸಿ.ಸಿ. ಪಾಟೀಲ್‌ ವ್ಯಂಗ್ಯ

ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಅಷ್ಟು ಬೆಲೆ ಕೊಡಬೇಕಿಲ್ಲ ಎಂದು ಸಿ.ಸಿ. ಪಾಟೀಲ್‌ ಗುಡುಗಿದ್ದೇಕೆ ಎನ್ನುವ ವಿವರ ಇಲ್ಲಿದೆ ಗಮನಿಸಿ.

ಗದಗ, ಫೆಬ್ರವರಿ, 13: ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಗದಗದಲ್ಲಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸುವಂತೆ ಸಂದೇಶ ನೀಡಿ ಹೋಗಿದ್ದಾರೆ. ಇದರ ಅರ್ಥ ಮುಂದಿನ ಬಾರಿಯೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಅಗಲಿದ್ದಾರೆ ಎಂದರು.

ಇತ್ತೀಚಿಗೆ ಸಿಂಧನೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಪಂಚರತ್ನ ಯಾತ್ರೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಅಷ್ಟು ಬೆಲೆ ಕೊಡಬೇಕಿಲ್ಲ ಎಂದು ಗುಡುಗಿದರು.

HDKಗೆ ಯಾವ್ಯಾವೋ ಕನಸು ಬೀಳುತ್ತಿರುತ್ತವೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಯಾವ್ಯಾವುದೋ ಕನಸು ಬೀಳುತ್ತಿರುತ್ತವೆ. ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗಿದ್ದವರಾಗಿದ್ದಾರೆ. ಅವರಲ್ಲಿ ಆಗಾದ ಮಾಹಿತಿ ಸಂಗ್ರಹ ಇರುತ್ತದೆ. ಆದರೆ, ಬಾಯಿ ಚಪಲಕ್ಕೆ ಜನರ ದಾರಿ ತಪ್ಪಿಸುವಂತಹ ಮಾತುಗಳನ್ನು ಆಡಬಾರದು. ಲಿಂಗಾಯತ ಮತಗಳನ್ನು ಅಭದ್ರ ಮಾಡಬೇಕು ಎಂಬ ಉದ್ದೇಶದಿಂದಲೇ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹರಿಹಾಯ್ದರು.

HD Kumaraswamy is just dreaming: C. C. Patil outrage

ಎಚ್‌.ಡಿ.ಕೆ ವಿರುದ್ಧ ಸಿ.ಸಿ. ಪಾಟೀಲ್‌ ಆಕ್ರೋಶ

ಲಿಂಗಾಯತ ಮತದಾರರು ಬಿಜೆಪಿ ಪಕ್ಷದ ಬ್ಯಾಕ್ ಬೋನ್ ಆಗಿದ್ದಾರೆ. ಅವರನ್ನು ವಿಚಲಿತರನ್ನಾಗಿ ಮಾಡಬೇಕು. ಬಿಜೆಪಿಯಿಂದ ಅವರು ಕೊಂಚ ಹಿಂದೆ ಸರಿಯಬೇಕು ಅನ್ನುವುದು ಅವರ ಹೇಳಿಕೆಯ ಉದ್ದೇಶವಾಗಿದೆ. ಹಾಗಾಗಿ ಅವರ ಮಾತಿಗೆ ಯಾರೂ ಅಷ್ಟು ಮಹತ್ವ ಕೊಡಬೇಕಿಲ್ಲ. ಎಲ್ಲವನ್ನು ನಮ್ಮ ಹೈಕಮಾಂಡ್ ನಿರ್ಧಾರ ಮಾಡಲಿದೆ. ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ತಲೆ ಬಿಸಿ ಮಾಡಕೊಳ್ಳಬಾರದು ಎಂದರು.

ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅದರಂತೆಯೇ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಕುಮಾರಸ್ವಾಮಿ ಹೇಳಿಕೆಗೆ ರಾಜ್ಯದ ಜನ ತಲೆಬಿಸಿ ಮಾಡಿಕೊಳ್ಳಬಾರದು ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ನಾವು ನಮ್ಮ ಹೈಕಮಾಂಡ್ ಮಾತುಗಳನ್ನು ಕೇಳುವವರು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳುವವರಲ್ಲ ಎಂದು ಗರಂ ಆದರು.

ನಾವು 130-140 ಸ್ಥಾನ ಗೆಲ್ಲುತ್ತೇವೆ

ಬಸವರಾಜ ಬೊಮ್ಮಾಯಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅವರ ಕೈಯನ್ನ ಎಲ್ಲರೂ ಬಲಪಡಿಸಬೇಕು ಎಂಬುದನ್ನು ನೇರವಾಗಿ ಹೇಳಿದ್ದಾರೆ. ಇದರ ಅರ್ಥ ಮುಂಬರುವ ಚುನಾವಣೆಯಲ್ಲಿ ನಾವು 130-140 ಸ್ಥಾನ ಗೆಲ್ಲುತ್ತೇವೆ. ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್ನುವ ಪರೋಕ್ಷವಾದ ಸಂದೇಶ ನೀಡಿ ತೆರಳಿದ್ದಾರೆ. ಹೀಗಾಗಿ ಅಮಿತ್ ಶಾ ಅವರನ್ನು ನಾನು ಅಭಿನಂದಿಸುವೆ ಎಂದರು.

ಬೊಮ್ಮಾಯಿಯವರು ಮತ್ತೆ ಸಿಎಂ ಆಗ್ತಾರೆ

ಸರ್ಕಾರ ಪಿಡಬ್ಲ್ಯೂಡಿ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಿದೆ. ಮುಂದಿನ ಬಾರಿ 130-140 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಸಚಿವರು ಭವಿಷ್ಯ ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+