ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗದಗ: ಹೈಟೆಕ್ ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಬಡವರ ಕೆಂಗಣ್ಣಿಗೆ ಗುರಿಯಾದ ಶಾಸಕರು

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಸೆಪ್ಟೆಂಬರ್‌, 27: ಬೆಟಗೇರಿ ನಗರಸಭೆ ವ್ಯಾಪ್ತಿಯ ಗಂಗಿಮಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮೋದಿತ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆಗಳನ್ನು ನಿರ್ಮಿಸಲು 2018ರಲ್ಲಿಯೇ ಆದೇಶ ನೀಡಿದೆ. ಇದರಲ್ಲಿ 1ನೇ ಹಂತದ 1,008 ಮನೆಗಳ ಪೈಕಿ 256 ಮನೆಗಳು ಪೂರ್ಣಗೊಂಡಿವೆ. ಆದರೆ ಗುಂಪು ಮನೆಗಳಿಗೆ ಸಂಬಂಧಿಸಿದಂತೆ ಇನ್ನು ಇದುವರೆಗೂ ಯಾವ ಮನೆಗಳನ್ನು ನಗರಸಭೆಗೆ ಹಸ್ತಾಂತರಿಸಿಕೊಂಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಬಡವರಿಗೆ ನೀಡಬೇಕಾಗಿದ್ದ ಮನೆಗಳು ಕೂಡ ಶಾಸಕರ ಬೆಂಬಲಿಗರ ಪಾಲಾಗಿವೆ ಎಂದು ಆಕ್ರೋಶಗಳು ಭುಗಿಲೆದ್ದಿವೆ.

ಬಸವರಾಜ ಬೊಮ್ಮಾಯಿ ಕಠಿಣ ಕ್ರಮ ಎಂಬ ಮಾತು ಬಿಟ್ಟು ಬುಲ್ಡೋಜರ್ ಮಾದರಿ ತರಲಿ: ಯತ್ನಾಳ್ಬಸವರಾಜ ಬೊಮ್ಮಾಯಿ ಕಠಿಣ ಕ್ರಮ ಎಂಬ ಮಾತು ಬಿಟ್ಟು ಬುಲ್ಡೋಜರ್ ಮಾದರಿ ತರಲಿ: ಯತ್ನಾಳ್

ಜೊತೆಗೆ ಪೂರ್ಣಗೊಂಡ ಮನೆಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಆದರೆ, ಗದಗ ವಿಧಾನಸಭೆ ಕ್ಷೇತ್ರದ ಶಾಸಕ ಹೆಚ್.ಕೆ.ಪಾಟೀಲ್ ತರಾತುರಿಯಲ್ಲಿ ಫಲಾನುಭವಿಗಳನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿ ಮನೆಗಳ ಕೀ ಕೊಟ್ಟಿದ್ದಾರೆ. ಇದು ಇದೀಗ ನಗರದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಬೆಟಗೇರಿ ನಗರಸಭೆ ಆಧ್ಯಕ್ಷೆ ಮತ್ತು ಸದಸ್ಯರ ಗಮನಕ್ಕೆ ತರದೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಆಶ್ರಯ‌ ಸಮಿತಿಯ ನೂತನ ಸದಸ್ಯರ ಗಮನಕ್ಕೆ ತರದೇ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಶಾಸಕರು ಕೇವಲ ತಮ್ಮ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಮಾತ್ರ ಮನೆಗಳನ್ನು ಹಂಚಿಕೆ ಮಾಡಿ ಕೀ ಕೊಟ್ಟಿದ್ದಾರೆ. ನಿಜವಾದ ಬಡವರಿಗೆ ಮನೆ ಸಿಕ್ಕಿಲ್ಲ. ಹೀಗಾಗಿ ಇದರಲ್ಲಿ ಪಾರದರ್ಶಕತೆ ನಡೆದಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Gadag; Discrimination in Hightech houses allotment, poor people anger aginest MLA

ಹೈಟೆಕ್‌ ಮನೆಗಳ ಹಂಚಿಕೆಯಲ್ಲಿ ತಾರತಮ್ಯ
ಸುಮಾರು 7.83 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ವರ್ಗದ ಪ್ರತಿ ಫಲಾನುಭವಿಗೆ 3.30 ಲಕ್ಷ ರೂಪಾಯಿ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಪ್ರತಿ ಫಲಾನುಭವಿಗೆ 2.70 ಲಕ್ಷ ರೂಪಾಯಿ ಸಹಾಯಧನವನ್ನು ಒದಗಿಸಿದೆ. ಇನ್ನುಳಿದ ನಿರ್ಮಾಣದ ಬಾಕಿ ವೆಚ್ಚವನ್ನು ಫಲಾನುಭವಿಗಳು ವಂತಿಕೆ ರೂಪದಲ್ಲಿ ಸ್ವಂತ ಅಥವಾ ಬ್ಯಾಂಕ್ ಲೋನ್ ಮೂಲಕ ಭರಿಸಬೇಕೆಂಬ ಷರುತ್ತು ಇದೆ. ಆದರೆ ಶಾಸಕರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

Gadag; Discrimination in Hightech houses allotment, poor people anger aginest MLA

ನಿಯಮಗಳ ಬಗ್ಗೆ ಗೊತ್ತಿದ್ದರೂ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರ‌‌ 3,630 ಗುಂಪು ಮನೆಗಳ ನಿರ್ಮಾಣಕ್ಕೆ ನೀಡಿರುವ ಸುಮಾರು 243.98 ಕೋಟಿ ರೂಪಾಯಿ ಸಹಾಯಧನವನ್ನು 256 ಮನೆಗಳಿಗೆ ವಿನಿಯೋಗಿಸಲಾಗಿದೆ. ಇನ್ನುಳಿದ ಮನೆಗಳ ನಿರ್ಮಾಣಕ್ಕೆ ಅನುದಾನ ಇಲ್ಲದಂತಾಗಿದೆ. ಇದು ಅಲ್ಲಿ ಸ್ಥಳೀಯರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಂತಿದೆ.

English summary
houses supposed given to poor people in Gangimadi near Betageri Municipal Council gone to MLA's supporters. Outrages broke out against HK Patil Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X