ಇ-ವೇ ಬಿಲ್ ರದ್ದತಿಗೆ 6 ಅಗತ್ಯ ಸಲಹೆಗಳು

ಭಾರತದಲ್ಲಿ ಸರಕುಗಳನ್ನು ಸಾಗಿಸುವಾಗ ಆ ಸರಕುಗಳ ವಿವರಗಳನ್ನು ಹೊಂದಿರುವ ಕಾಗದಪತ್ರವನ್ನು ಇ-ವೇ ಬಿಲ್‌ಗಳು ಎಂದು ಕರೆಯಲಾಗುತ್ತದೆ. ಇವು ಡಿಜಿಟಲ್ ರೂಪದಲ್ಲಿ ಇರಲಿದ್ದು, 2018 ಏಪ್ರಿಲ್‌ನಲ್ಲಿ ಇದನ್ನು ಪರಿಚಯಿಸಲಾಯಿತು. ಇದಕ್ಕೂ ಮೊದಲು ಟ್ರಾನ್ಸಿಟ್ ಪಾಸ್ ಸಿಸ್ಟಮ್‌ ಬದಲಿಗೆ ಈ ಡಿಜಿಟಲ್ ರೂಪದ ಇ-ವೇ ಬಿಲ್‌ಗಳನ್ನು ಪರಿಚಯಿಸಲಾಯಿತು. ಇದರಿಂದಾಗಿ ಕ್ರೋಢೀಕೃತ ಪ್ರಕ್ರಿಯೆ ಮತ್ತು ಕಾಗದರಹಿತ ವಿಧಾನದ ಅಡಿಯಲ್ಲಿ ದೇಶದಲ್ಲಿ ಸರಕು ಮತ್ತು ಸಾರಿಗೆ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಇದು ಪೂರಕವಾಯಿತು.

ರೂ. 50,000 ಕ್ಕೂ ಹೆಚ್ಚು ಮೌಲ್ಯದ ಸರಕುಗಳನ್ನು ಸಾಗಿಸಲು ಇ-ವೇ ಬಿಲ್‌ಗಳು ಕಡ್ಡಾಯವಾಗಿದೆ. ಸರಕುಗಳ ಸಾರಿಗೆ ಅಥವಾ ಮಾರಾಟದ ವಹಿವಾಟನ್ನು ನಡೆಸುತ್ತಿದ್ದರೆ ಅಥವಾ ಆನ್ ಲೈನ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಕೆಲಸದಲ್ಲಿದ್ದರೆ, ಈ ಕಾಗದಪತ್ರಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಇ-ವೇ ಬಿಲ್‌ಗಳ ರದ್ದತಿ ಕುರಿತ ಪ್ರಮುಖ ಅಂಶಗಳನ್ನು ನೀವು ತಿಳಿದುಕೊಳ್ಳಬೇಕಿರುವುದು ಇದರಲ್ಲಿ ಅತ್ಯಂತ ಪ್ರಮುಖವಾಗಿರುತ್ತದೆ. ಇ-ವೇ ಬಿಲ್‌ಗಳನ್ನು ರದ್ದು ಮಾಡುವಾಗ ಈ ಕೆಳಗಿನ ಪ್ರಮುಖ ಸಲಹೆಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

Essential Tips for Cancelling E-Way Bills Effectively

1. ರದ್ದತಿಗೆ ಇರುವ ಕಾಲಾವಧಿಯನ್ನು ಅರ್ಥಮಾಡಿಕೊಳ್ಳುವುದು

ಇ-ವೇ ಬಿಲ್‌ಗಳನ್ನು ರದ್ದು ಮಾಡುವ ವಿಷಯಕ್ಕೆ ಬಂದಾಗ ಗಮನದಲ್ಲಿ ಇಟ್ಟುಕೊಳ್ಳಬೇಕಿರುವ ಅತ್ಯಂತ ಪ್ರಮುಖ ಪರಿಗಣನೆಗಳಲ್ಲಿ ಒಂದಾಗಿರುವುದೇನೆಂದರೆ, ಇ-ವೇ ಬಿಲ್ ರದ್ದು ಮಾಡಲು ನಮಗೆ 24 ಗಂಟೆಗಳ ಕಾಲಾವಧಿ ಇರುತ್ತದೆ. ಆ ಕಾಲಾವಧಿಯಲ್ಲಿ ನೀವು ರದ್ದು ಮಾಡಲು ಸಾಧ್ಯವಾಗದಿದ್ದರೆ, ಇ-ವೇ ಬಿಲ್‌ ಮುಂದುವರಿಯುತ್ತದೆ. ಆಡಿಟ್ ಮಾಡುವಾಗ ಅಥವಾ ತಪಾಸಣೆ ಮಾಡುವಾಗ ತೊಂದರೆ ಕಂಡುಬಂದು, ದಂಡ ಬೀಳುವ ಸಾಧ್ಯತೆ ಇರುತ್ತದೆ. ಇ-ವೇ ಬಿಲ್ ಅನ್ನು ಕೊನೆಯ ಘಳಿಗೆಯವರೆಗೂ ಇಟ್ಟುಕೊಂಡು, ತಾಂತ್ರಿಕ ಸಮಸ್ಯೆಗಳು ಮತ್ತು/ಅಥವಾ ಪೋರ್ಟಲ್ ಡೌನ್ ಆದಾಗ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದರಿಂದ ಸಮಯಕ್ಕೆ ಸರಿಯಾಗಿ ರದ್ದು ಮಾಡಲು ಸಾಧ್ಯವಾಗದೇ ಇರಬಹುದು.

2. ರದ್ದು ಮಾಡುವುದಕ್ಕೂ ಮೊದಲು ವಿವರಗಳನ್ನು ಪರಿಶೀಲಿಸಿ

ರದ್ದು ಮಾಡುವುದಕ್ಕೂ ಮೊದಲು ಇ-ವೇ ಬಿಲ್‌ನ ವಿವರಗಳನ್ನು ಎರಡು ಬಾರಿ ಪರಿಶೀಲನೆ ಮಾಡಿದ್ದೀರಿ ಎಂದು ಖಾತ್ರಿಪಡಿಸಿಕೊಳ್ಳಿ. ಇದರಿಂದ ನೀವು ತಪ್ಪಾಗಿ ಇ-ವೇ ಬಿಲ್ ಅನ್ನು ರದ್ದು ಮಾಡುವ ಸನ್ನಿವೇಶ ಉಂಟಾಗುವುದಿಲ್ಲ.
ನೀವು ತಪ್ಪಾದ ಇ-ವೇ ಬಿಲ್ ಅನ್ನು ರದ್ದು ಮಾಡಿದರೆ, ಕಾಗದಪತ್ರ ಮತ್ತು ಅಸಲಿ ಸಾರಿಗೆ ವಿವರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇದರಿಂದ ನಿಮ್ಮ ಬ್ಯುಸಿನೆಸ್ ಬಗ್ಗೆ ಅನಗತ್ಯ ತಪಾಸಣೆಯನ್ನು ನಡೆಸುವ ಅನಿವಾರ್ಯ
ಎದುರಾಗಬಹುದು. ಒಮ್ಮೆ ಇ-ವೇ ಬಿಲ್ ಅನ್ನು ರದ್ದು ಮಾಡಿದರೆ, ಇದನ್ನು ಪುನಃ ಪರಿಶೀಲನೆ ಮಾಡಲು ಸಾಧ್ಯವಾಗದಿರಬಹುದು. ಈ ಸನ್ನಿವೇಶ ಪುನಃ ಉಂಟಾದರೆ ನೀವು ಹೊಸ ಇ-ವೇ ಬಿಲ್‌ ಅನ್ನು ಜನರೇಟ್ ಮಾಡುವ
ಅಗತ್ಯ ಉಂಟಾಗಬಹುದು.

3. ಎಲ್ಲ ಪಾಲುದಾರರ ಜೊತೆಗೆ ಸಹಕಾರ ಸಾಧಿಸಿ

ನೀವು ಇ-ವೇ ಬಿಲ್ ಅನ್ನು ರದ್ದು ಮಾಡಿದಾಗ, ಎಲ್ಲ ಪಾಲುದಾರರಿಗೂ ತಿಳಿಸಬೇಕು. ಅದರಲ್ಲೂ ವಿಶೇಷವಾಗಿ ಸಾಗಣೆದಾರರಿಗೆ ರದ್ದತಿಯ ಬಗ್ಗೆ ಮಾಹಿತಿ ನೀಡಬೇಕಿರುತ್ತದೆ. ಒಂದು ವೇಳೆ ನೀವು ಮಾಹಿತಿ ನೀಡದೇ ಇದ್ದರೆ, ಯಾವುದೇ ಮಾನ್ಯವಾದ ಕಾಗದಪತ್ರ ಇಲ್ಲದೇ ಸರಕುಗಳನ್ನು ಶಿಪ್ ಮಾಡುವ ಅನಿವಾರ್ಯ ಉಂಟಾಗುತ್ತದೆ. ಇದರಿಂದ, ಸಾಗಾಟ ಸ್ಥಗಿತವಾಗಬಹುದು ಮತ್ತು ದಂಡ ವಿಧಿಸುವ ಸನ್ನಿವೇಶ ಎದುರಾಗಬಹುದು.

4. ರದ್ದತಿಗೆ ಸರಿಯಾದ ಕಾರಣವನ್ನು ನಮೂದಿಸಿ

ಜಿಎಸ್‌ಟಿ ಪೋರ್ಟಲ್‌ನಲ್ಲಿ ಒಂದು ಇ-ವೇ ಬಿಲ್ ರದ್ದು ಮಾಡುವಾಗ ರದ್ದತಿಗೆ ಕಾರಣವನ್ನು ನೀವು ಒದಗಿಸಬೇಕು. ಪಾರದರ್ಶಕವಾಗಿ ದಾಖಲೆಗಳನ್ನು ಇಟ್ಟುಕೊಳ್ಳಲು ಮತ್ತು ಆಡಿಟ್ ಸಮಯದಲ್ಲಿ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಸರಿಯಾದ ಕಾರಣ ಆಯ್ಕೆ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಆರ್ಡರ್ ರದ್ದತಿ, ತಪ್ಪಾದ ಡೇಟಾ ಎಂಟ್ರಿ ಅಥವಾ ಶಿಪ್‌ಮೆಂಟ್ ಪ್ಲಾನ್‌ಗಳಲ್ಲಿ ಬದಲಾವಣೆ ಆಗಿರಬಹುದು. ಈ ಕಾರಣವನ್ನು ಸರಿಯಾಗಿ ದಾಖಲಿಸಿದರೆ, ಮುಂದೆ ತಪಾಸಣೆಗೆ ಒಳಪಡುವುದನ್ನು ತಪ್ಪಿಸಬಹುದು.

5. ಪೋರ್ಟಲ್‌ನಲ್ಲಿ ರದ್ದತಿಯನ್ನು ದೃಢೀಕರಿಸುವುದು

ರದ್ದತಿಯನ್ನು ಸಲ್ಲಿಸಿದ ನಂತರ, ಪ್ರಕ್ರಿಯೆ ಮುಗಿಯಿತು ಎಂದು ಭಾವಿಸಬೇಡಿ. ಇ-ವೇ ಬಿಲ್ ಸ್ಟೇಟಸ್ ಅನ್ನು 'ರದ್ದು ಮಾಡಲಾಗಿದೆ' ಎಂದು ಬದಲಿಸಲಾಗಿದೆ ಎಂಬುದನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳಿ. ಯಾವುದೇ ಇ-ವೇ ಬಿಲ್‌ಗಳು ಸಕ್ರಿಯವಾಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ತಪಾಸಣೆ ಮಾಡುವಾಗ ಅಥವಾ ಆಡಿಟ್ ಮಾಡುವಾಗ ಸಕ್ರಿಯ ಇ-ವೇ ಬಿಲ್‌ಗಳು ಸಮಸ್ಯೆಯನ್ನು ತಂದೊಡ್ಡಬಹುದು. ಈ ಪ್ರಕ್ರಿಯೆಯನ್ನು ನಡೆಸುವುದರಿಂದ ನಿಮಗೆ ದಂಡ ವಿಧಿಸುವ ಸನ್ನಿವೇಶ ಎದುರಾಗುವುದಿಲ್ಲ ಮತ್ತು ಸ್ಪಷ್ಟ ಅನುಸರಣೆ ದಾಖಲೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

6. ಇ-ವೇ ಬಿಲ್ ರದ್ದತಿಯ ದಾಖಲೆಯನ್ನು ಇಟ್ಟುಕೊಳ್ಳಿ

ಎಲ್ಲ ರದ್ದತಿಗಳ ಕಾಗದಪತ್ರವನ್ನು ಇಟ್ಟುಕೊಳ್ಳಿ. ರದ್ದತಿಗೆ ಕಾರಣ ಮತ್ತು ಜಿಎಸ್‌ಟಿ ಪೋರ್ಟಲ್‌ನಿಂದ ದೃಢೀಕರಣ ಕೂಡ ಇದರಲ್ಲಿ ಇರಲಿ. ಆಡಿಟ್ ಸಮಯದಲ್ಲಿ ಈ ದಾಖಲೆಗಳು ಅತ್ಯಂತ ಅಮೂಲ್ಯವಾಗಿರುತ್ತವೆ ಮತ್ತು ಅನುಸರಣೆಯ ಸಾಕ್ಷ್ಯವಾಗಿ ಕೆಲಸ ಮಾಡಬಹುದು ಮತ್ತು ಇ-ವೇ ಬಿಲ್‌ಗಳ ನಿರ್ವಹಣೆಯನ್ನು ಪರಿಶೀಲನೆ ಮಾಡುವಾಗ ಸಹಾಯಕ್ಕೆ ಬರಬಹುದು. ಉತ್ತಮವಾಗಿ ನಿರ್ವಹಣೆ ಮಾಡಿದ ಕಾಗದಪತ್ರಗಳು ಆಡಿಟ್ ಪ್ರಕ್ರಿಯೆಯನ್ನು ಸರಳವಾಗಿಸುತ್ತವೆ ಮತ್ತು ತೆರಿಗೆ ಅಧಿಕಾರಿಗಳು ಪ್ರಶ್ನೆ ಮಾಡಿದ ಎಲ್ಲ ಅಗತ್ಯ ದಾಖಲೆಗಳು ಸಿದ್ಧವಿವೆ ಎಂಬ ಕಾರಣಕ್ಕೆ ಮನಃಶಾಂತಿಯನ್ನು ನೀಡುತ್ತದೆ.

ಉಪಸಂಹಾರ

ಇ-ವೇ ಬಿಲ್‌ಗಳನ್ನು ರದ್ದು ಮಾಡುವುದು ಹೇಗೆ ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ ಜಿಎಸ್‌ಟಿ ಅನುಸರಣೆಯ ಜೊತೆಗೆ ಸಾಗಣೆಯನ್ನು ಸರಿಯಾಗಿ ನಿರ್ವಹಿಸಲು ಸಹಾಯವಾಗುತ್ತದೆ. ಈ ಆರು ಸಲಹೆಗಳನ್ನು ಅನುಸರಿಸಿದರೆ, ಇ-ವೇ ಬಿಲ್‌ಗಳನ್ನು ರದ್ದು ಮಾಡುವ ವಿಷಯದಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಪರಿಹರಿಸಲು ಸಹಾಯವಾಗುತ್ತದೆ. ತಪಾಸಣೆ ಮತ್ತು ದಂಡಗಳಿಂದ ನಿಮ್ಮ ಬ್ಯುಸಿನೆಸ್ ಮುಕ್ತವಾಗಿದೆ ಎಂಬುದನ್ನು ಕೂಡಾ ಈ ಹಂತವು ಖಾತರಿಪಡಿಸುತ್ತದೆ. ಈ ಮೂಲಕ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ಸಂಸ್ಥೆಗಳಿಂದ ಹಣಕಾಸನ್ನು ಪಡೆಯುವುದು ಕೂಡಾ ಸುಲಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+