ಲೈಂಗಿಕ ಕಿರುಕುಳ ಆರೋಪ, ಗಾಯಕ ಮಿಕಾ ಸಿಂಗ್ ಬಂಧನ
ನವದೆಹಲಿ, ಡಿಸೆಂಬರ್ 07: ಬಾಲಿವುಡ್ ನ ಜನಪ್ರಿಯ ಪಾಪ್ ತಾರೆ ಮಿಕಾ ಸಿಂಗ್ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಮಿಕಾ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಯುನೈಟೆಡ್ ಅರಬ್ ಇಮಿರೇಟ್ಸ್ (ಯುಎಇ)ನಲ್ಲಿ ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.
ಈ ಹಿಂದೆ ಕೂಡಾ ಮುಂಬೈ ಮೂಲದ ರೂಪದರ್ಶಿಯೊಬ್ಬರು ಮಿಕಾ ವಿರುದ್ಧ ದೂರು ಸಲ್ಲಿಸಿದ್ದರು.ದುಬೈಗೆ ಸಂಗೀತ ಸಂಜೆ ಕಾರ್ಯಕ್ರಮಕ್ಕೆಂದು ತೆರಳಿದ್ದ ಮಿಕಾ ಅವರು 17 ವರ್ಷ ವಯಸ್ಸಿನ ಬ್ರೆಜಿಲ್ಲಿನ ಯುವತಿಗೆ ಅಶ್ಲೀಲವಾಗಿ ಸಂದೇಶ ಕಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.
ದುಬೈನ ಬಾರ್ ನಲ್ಲಿದ್ದ ಮಿಕಾ ಅವರನ್ನು ಬಂಧಿಸಲಾಗಿದ್ದ್, ಅಬು ಧಾಬಿಯ ಜೈಲಿಗೆ ಕರೆದೊಯ್ಯಲಾಗಿದೆ ಎಂಬ ಸುದ್ದಿ ಬಂದಿದೆ. ಮುರಕ್ಕಾಬಾತ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು.

2006ರಲ್ಲಿ ನಟಿ, ಗಾಯಕಿ ರಾಖಿ ಸಾವಂತ್ ಅವರು ಮಿಕಾ ವಿರುದ್ಧ ಬಲವಂತವಾಗಿ ಮುತ್ತಿಡಲು ಯತ್ನಿಸಿದ ಆರೋಪ ಮಾಡಿದ್ದರು. 2014ರಲ್ಲಿ ಹಿಟ್ ಅಂಡ್ ರನ್ ಕೇಸಿನಲ್ಲಿ ಮಿಕಾ ಸಿಲುಕಿದ್ದರು. 2015ರಲ್ಲಿ ವೈದ್ಯರೊಬ್ಬರಿಗೆ ಗೂಸಾ ಕೊಟ್ಟಿದ್ದಕ್ಕಾಗಿ ಬಂಧಿಸಲಾಗಿತ್ತು.












Click it and Unblock the Notifications