ಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟ

ದುಬೈ, ಜೂನ್ 20; ಭಾರತ ಸೇರಿದಂತೆ ಮೂರು ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಆರಂಭಿಸುವುದಾಗಿ ದುಬೈ ಎಮಿರೇಟ್ಸ್ ಹೇಳಿದೆ. ಕೋವಿಡ್ ಹಿನ್ನಲೆಯಲ್ಲಿ ಹಾಕಿದ್ದ ವಿಮಾನ ಸಂಚಾರ ನಿರ್ಬಂಧವನ್ನು ದುಬೈ ರದ್ದುಗೊಳಿಸಿದೆ.

ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಜೂನ್ 23ರಿಂದ ವಿಮಾನ ಹಾರಾಟ ನಡೆಸುವುದಾಗಿ ಘೋಷಣೆ ಮಾಡಲಾಗಿದೆ. ವಿಮಾನದಲ್ಲಿ ಸಂಚಾರ ನಡೆಸಬೇಕಾದರೆ ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.

ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Dubai Emirates

ಭಾರತದಿಂದ ಸಂಚಾರ ನಡೆಸುವ ಪ್ರಯಾಣಿಕರು 4 ಗಂಟೆ ಮೊದಲು ಆರ್‌ಟಿಪಿಆರ್ ಪರೀಕ್ಷೆಗೆ ಒಳಪಡಬೇಕು. ದುಬೈನಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಭಾರತದಿಂದ ದುಬೈಗೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಬರುವ ತನಕ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. 24 ಗಂಟೆಯಲ್ಲಿ ವರದಿ ಕೈ ಸೇರಲಿದೆ.

ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರು ಕೋವಿಡ್ ಲಸಿಕೆ ಪಡೆದಿರಬೇಕು. ಸಂಚಾರ ಆರಂಭಿಸುವ 48 ಗಂಟೆಗಳ ಮೊದಲ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.

ಏಪ್ರಿಲ್‌ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾದಾಗ ದುಬೈ ಭಾರತ ಸೇರಿದಂತೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದು ಮಾಡಿತ್ತು. ಈಗ ಭಾರತದಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಮಾನ ಹಾರಾಟ ಪುನಃ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+