ದುಬೈಯಲ್ಲಿ ಭೀಕರ ಅಪಘಾತ, 12 ಭಾರತೀಯರು ಸೇರಿದಂತೆ 17 ಮಂದಿ ಸಾವು

ದುಬೈ, ಜೂನ್ 07: ದುಬೈಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಮೃತರಾಗಿದ್ದು, ಅವರಲ್ಲಿ 12 ಜನ ಭಾರತೀಯರು ಎಂಬುದು ತಿಳಿದುಬಂದಿದೆ.

ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈದ್ ಆಚರಣೆಯನ್ನು ಮುಗಿಸಿ ಒಮಾನ್ ಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Dubai Bus accident: 8 Indians among 17 killed

ಈ ಕುರಿತು ಟ್ವೀಟ್ ಮಾಡಿರುವ (ಇಂಡಿಯಾ ಇನ್ ದುಬೈ) ದುಬೈನ ಭಾರತೀಯ ರಾಯಭಾರ ಕಚೇರಿ, ಮೃತ ಎಂಟು ಜನರ ಹೆಸರನ್ನು ತಿಳಿಸಿದ್ದು, ಸಂಬಂಧಿಗಳು ಯಾವುದೇ ರೀತಿಯ ನೆರವಿವಾಗಿ ಸಹಾಯವಾಣಿಗೆ ಕರೆ ಮಾಡಲು ಕೋರಿದೆ.

ಮೃತ ದುರ್ದೈವಿಗಳ ಪಟ್ಟಿ ಇಲ್ಲಿದೆ: ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೇಶ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದಿನ್ ಅರ್ಕ್ಕಾವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್, ತಿಲಕರಾಮ್ ಜವಾಹರ್ ಠಾಕೂರ್

ಈ ಕುರಿತು ಯಾವುದೇ ಮಾಹಿತಿಗೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ದುಬೈಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದ್ದು. ಸಹಾಯವಾಣಿ ಸಂಖ್ಯೆಗಳು ಹೀಗಿವೆ: +971-565463903, +971-504565441(ಸಂಜೀವ್ ಕುಮಾರ್, ರಾಯಭಾರ ಕಚೇರಿಯ ಅಧಿಕಾರಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+