ಧಾರವಾಡ: ವಿಕಲ ಚೇತನ ಯುವತಿಗೆ ಬಾಳ ಸಂಗಾತಿಯಾದ ವಿನಾಯಕ ಶಿಂಧೆ
ಧಾರವಾಡ, ಡಿಸೆಂಬರ್ 10: ಧಾರವಾಡದ ನಿವಾಸಿಗಳಾದ ವಿನಾಯಕ ಶಿಂಧೆ ಮತ್ತು ಮೀನಾಕ್ಷಿ ಕ್ಷೀರಸಾಗರ ಎಂಬ ಈ ಜೋಡಿ ಬುಧವಾರದಂದು ವಿಶೇಷ ವಿವಾಹವಾಗಿದ್ದಾರೆ.
ವಧು ಮೀನಾಕ್ಷಿ ಹುಟ್ಟಿದಾಗಿನಿಂದ ವಿಶೇಷ ಚೇತನಳಾಗಿದ್ದು, ಇನ್ನು ಈ ವಿಷಯ ಗೊತ್ತಿದ್ದರೂ ಸಹ ಇವಳನ್ನು ಮದುವೆಯಾಗಲು ಒಪ್ಪಿದ್ದು ಇದೇ ಧಾರವಾಡದ ವರ ವಿನಾಯಕ ಶಿಂಧೆ.
ಧಾರವಾಡ ನಗರದ ಸೈದಾಪೂರದ ನಿವಾಸಿಯಾದ ವಧು ಮೀನಾಕ್ಷಿಯನ್ನು ಮದುವೆ ಮಾಡಿಕೊಂಡಿದ್ದು ವಿನಾಯಕ ಎಂಬ ಕಮಲಾಪುರ ನಿವಾಸಿಯಾಗಿದ್ದಾನೆ. ವಿನಾಯಕನಿಗೆ ಮೊದಲಿನಿಂದಲೂ ವಿಶೇಷ ಚೇತನಳೊಬ್ಬಳನ್ನು ಮದುವೆ ಮಾಡಿಕೊಳ್ಳಬೇಕು ಎಂದೇ ಆಸೆ ಇತ್ತು.

ಈ ವೇಳೆ ಮೀನಾಕ್ಷಿ ಎಂಬ ಯುವತಿ ವಿಶೇಷ ಚೇತನಳಾಗಿದ್ದಾಳೆ ಎಂದು ತಿಳಿದ ವಿನಾಯಕ, ತನ್ನ ಪೋಷಕರ ಸಮ್ಮುಖದಲ್ಲಿ ಮೀನಾಕ್ಷಿಯನ್ನು ನೋಡಿ ಬಂದಿದ್ದ. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಡಿ.9 ರಂದು ಧಾರವಾಡ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಿತು.

ಇನ್ನು ಈ ಮದುವೆಯಿಂದ ಮದುಮಗ ಎಷ್ಟು ಸಂತೋಷವಾಗಿದೆಯೋ ಅಷ್ಟೇ ಮದುಮಗಳು ಕೂಡಾ ಸಂತೋಷವಾಗಿದ್ದಾಳೆ. ತನಗೆ ಇರುವ ಈ ಸಮಸ್ಯೆಯಿಂದ ಯಾರಾದರೂ ಬಾಳ ಸಂಗಾತಿ ಸಿಗುತ್ತಾನೋ, ಇಲ್ಲವೋ ಅಂದುಕೊಂಡಿದ್ದ ವಿಶೇಷ ಚೇತನ ಯುವತಿ ಮೀನಾಕ್ಷಿಗೆ ಬುಧವಾರ ಅದ್ಧೂರಿ ಮದುವೆಯಾಗಿದ್ದು, ಜೀವನದ ಅತಿ ಸುಂದರ ಕ್ಷಣವಾಗಿತ್ತು. ಇನ್ನು ಈ ಶುಭ ಸಮಾರಂಭಕ್ಕೆ ಎರಡೂ ಕುಟುಂಬದ ಸದಸ್ಯರು ಸಾಕ್ಷಿಯಾದರು.












Click it and Unblock the Notifications