ಧಾರವಾಡದಲ್ಲಿನ ಗಣೇಶ ಮಂಡಳಿಗಳಿಗೆ ಭೇಟಿ ನೀಡಿ ಮುತಾಲಿಕ್‌ ಹೇಳಿದ್ದೇನು?

ಧಾರವಾಡ, ಆಗಸ್ಟ್ 24: ಧಾರವಾಡದಲ್ಲಿ 25 ಗಣೇಶ ಮಂಡಳಿಗಳಿಗೆ ಸಾವರ್ಕರ್ ಭಾವಚಿತ್ರ ಕೊಟ್ಟಿದ್ದೇವೆ. ಮೊದಲನೇ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಕೂಡ ಸಾವರ್ಕರ್ ಭಾವಚಿತ್ರವನ್ನು ಕೊಟ್ಟಿದ್ದೇವೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ಗಣೇಶೋತ್ಸವ ಹಿನ್ನೆಲೆ ಧಾರವಾಡದಲ್ಲಿ ಪೆಂಡಾಲ್‌ಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತೆ ಮನವಿ ಮಾಡುತ್ತಿದ್ದಾರೆ. ಗಣೇಶ ಮಂಡಳಿಗಳಿಗೆ ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಭೇಟಿ ನೀಡಿ ಈ ವರ್ಷ ಅದ್ಧೂರಿಯಾಗಿ ಗಣೇಶ ಆಚರಣೆ ಮಾಡುವಂತೆ ಸಲಹೆ ನೀಡಿದರು. ಪ್ರಮೋದ್ ಮುತಾಲಿಕ್ ಅವರು ಇಂದು ಧಾರವಾಡ ನಗರದ ಶಿವಾಜಿ ವೃತ್ತದಲ್ಲಿ ಗಣೇಶ ಮಂಡಳಿಗೆ ಸಾವರ್ಕರ್‌ ಭಾವಚಿತ್ರ ಕೊಟ್ಟು ಸಾಂಕೇತಿಕವಾಗಿ ಚಾಲನೆ ನೀಡಿದರು. ಗಣೇಶ ಹಬ್ಬದಲ್ಲಿ ಸಾವರ್ಕರ್ ಅವರಿಗೆ ಹೆಚ್ಚಿನ ಮಹತ್ವ ನೀಡಲು ಮನವಿ ಮಾಡಿದರು.

ಸರ್ಕಾರ ಮದರಸಾಗಳ ಬಗ್ಗೆ ಕೆಲ‌ ನಿರ್ಣಯ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ನಾನು ಸ್ವಾಗತ ಮಾಡುತ್ತೇನೆ. ಮತ್ತೊಂದು ದೃಷ್ಟಿಯಿಂದ ಮದರಸಾ ಬ್ಯಾನ್ ಮಾಡಬೇಕು ಎಂದರು. ಮದರಸಾ‌ ಮೂಲಕವೇ ಕಟ್ಟರ ಇಸ್ಲಾಮಿಕ್ ಶಕ್ತಿ ನಿರ್ಮಾಣ ಮಾಡುವ ಕೇಂದ್ರ ಆಗುತ್ತಿದೆ. ಭಯೋತ್ಪಾದಕರನ್ನು ತಯಾರು ಮಾಡುವ ಕೇಂದ್ರ ಇವೆ ಆಗಿವೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದರು.

 ಮುತಾಲಿಕ್‌ ಪ್ರಕಾರ ಸಿದ್ದರಾಮಯ್ಯ ಅನುದಾನ?

ಮುತಾಲಿಕ್‌ ಪ್ರಕಾರ ಸಿದ್ದರಾಮಯ್ಯ ಅನುದಾನ?

ಪಾಕಿಸ್ತಾನದಲ್ಲಿ ಮದರಸಾ ಬ್ಯಾನ್ ಮಾಡಿದ್ದಾರೆ. ಕಾರಣ ಇಲ್ಲಿಯೂ ಅಂಥ ಮದರಸಾಗಳಿಗೆ ಪ್ರೋತ್ಸಾಹ ಕೊಡುವಂತದ್ದು ಸರಿಯಲ್ಲ. ಮಂಡಳಿ ತಯಾರಿಸಿ ಅವರಲ್ಲಿ ದೇಶ ಭಕ್ತಿ ಮೂಡಿಸುವದು, ರಾಷ್ಟ್ರ ಗೀತೆ ಹಾಡಿಸುವದು, ರಾಷ್ಟ್ರೀಯ ಹಬ್ಬ ಆಚರಣೆ ಮಾಡುವಂತದ್ದು ಸರಿ ಇದೆ. ಆದ್ದರಿಂದ ಹಿಂದೆ ಸಿದ್ದರಾಮಯ್ಯ ಅವುಗಳಿಗೆ 50 ಕೋಟಿ ಅನುದಾನ ಕೊಟ್ಟಿದ್ದರು ಎಂದರು.

 ಮತ್ತೆ ಮುತಾಲಿಕ್‌ರಿಂದ ಸಂಘರ್ಷದ ಹೇಳಿಕೆ

ಮತ್ತೆ ಮುತಾಲಿಕ್‌ರಿಂದ ಸಂಘರ್ಷದ ಹೇಳಿಕೆ

"ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಹಲಾಲ್ ಮುಕ್ತ ಗಣೇಶ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಮುಸ್ಲಿಮರ ಜೊತೆ ವ್ಯಾಪಾರ ಮಾಡಬಾರದು. ಹೂವು. ಹಣ್ಣು ಅಥವಾ ಲೈಟಿಂಗ್, ಸೌಂಡ್ ಸಿಸ್ಟಂ ಎಲ್ಲ ಹಿಂದೂಗಳ ಬಳಿ ತರಬೇಕು ಎಂದು ಆಗ್ರಹ ಮಾಡುತ್ತೇನೆ," ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಸಾವರ್ಕರ್ ವಿವಾದ ಜೋರಾಗಿದ್ದು, ದೇಶಾದ್ಯಂತ ರಾಜಕೀಯ ಸಂಚಲನ ಮೂಡಿಸಿದೆ. ಸಾವರ್ಕರ್ ಅವರನ್ನು ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ‌ಮಾಡುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ವಾದ ಮಾಡುತ್ತಿದೆ.

 ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆತ

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆತ

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಡುವೆ ವೀರ ಸಾವರ್ಕರ್ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಇದು ಎರಡು ಪಕ್ಷಗಳ ನಡುವೆ ದೊಡ್ಡ ಸಮರವನ್ನೇ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಿಕೊಂಡು ರಾಜ್ಯಭಾರ ಮಾಡುತ್ತಿವೆ. ಸಾವರ್ಕರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಅವರ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆಯಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಕಿಚ್ಚು ಹೊತ್ತಿಸಿತ್ತು.

 101 ಪೂರ್ಣಕುಂಭ ಹೊತ್ತ ಮಹಿಳೆಯರು

101 ಪೂರ್ಣಕುಂಭ ಹೊತ್ತ ಮಹಿಳೆಯರು

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದರೆ, ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದರು. ಸಾವರ್ಕರ್ ಅವರ ಭಾವಚಿತ್ರ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ವಿವಾದ ಇನ್ನೂ ಹಸಿರಿರುವಾಗಲೇ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಸಾವರ್ಕರ್ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. 101 ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದ್ದು, ಈ ಮೆರವಣಿಗೆಗೆ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರು ಚಾಲನೆ ನೀಡಿದರು.

ಚಕ್ಕಡಿ ಬಂಡಿಯಲ್ಲಿ ಸಾವರ್ಕರ್ ಭಾವಚಿತ್ರವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅಲ್ಲದೇ ಸಾವರ್ಕರ್ ಪರ ಘೋಷಣೆಗಳನ್ನು ಕೂಗಿ ಅವರ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲಾಯಿತು. ವೀರ ಸಾವರ್ಕರ್ ಈಗ ರಾಜಕೀಯದ ಗಾಳವಾಗಿದ್ದು,‌ ಅವರನ್ನು ಒಬ್ಬ ಸ್ವಾತಂತ್ರ್ಯ ಯೋಧ ಅಂತನೂ ನೋಡದೇ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+