ನೈಋತ್ಯ ರೈಲ್ವೆ: ಜನದಟ್ಟಣೆ ನಿವಾರಣೆಗಾಗಿ ದಸರಾ ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ಸಂಪೂರ್ಣ ವಿವರ
ಹುಬ್ಬಳ್ಳಿ, ಅಕ್ಟೋಬರ್ 19: ದಸರಾ ರಜೆ ಹಾಗೂ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬದ ಪ್ರಯುಕ್ತ ಜನರ ಓಡಾಟ ದಿನೇ ದಿನೇ ಹೆಚ್ಚುತ್ತಿದ್ದು, ಬಹಳಷ್ಟು ಜನದಟ್ಟಣೆಯ ನಿಯಂತ್ರಣಕ್ಕಾಗಿ ದಸರಾ ವಿಶೇಷ ರೈಲುಗಳು ಸಂಚಾರ ಆರಂಭಿಸಿದೆ.
ದಸರಾ ಹಬ್ಬದ ಕಾರಣಕ್ಕಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಮೈಸೂರು ಮತ್ತು ಧಾರವಾಡ ನಡುವೆ ಹಾಗೂ ಮೈಸೂರು ಮತ್ತು ಬಿಜಾಪುರ ನಡುವೆ ದಸರಾ ವಿಶೇಷ ರೈಲು ಸೇವೆ ಒದಗಿಸಲು ನಿರ್ಧರಿಸಿದೆ. ಈ ಮೂಲಕ ರೈಲ್ವೆ ನಿಲ್ದಾಣಲ್ಲಿ ಹಾಗೂ ರೈಲು ಸಂಚಾರದ ವೇಳೆ ವಾಹನ ದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

ದಸರಾ ವಿಶೇಷ ರೈಲುಗಳು ಸಂಚಾರದ ವಿವರ
1. ರೈಲು ಸಂಖ್ಯೆ 06205 ಮೈಸೂರಿನಿಂದ ಧಾರವಾಡಕ್ಕೆ ಅಕ್ಟೋಬರ್ 22 ಮತ್ತು 24 ರಂದು ಎರಡು ಸಲ ಪ್ರಯಾಣವನ್ನು ಪ್ರಾರಂಭಿಸುತ್ತದೆ. ರೈಲು ಮೈಸೂರಿನಿಂದ 22:35 ಗಂಟೆಗೆ ಹೊರಡುತ್ತದೆ. ಮತ್ತು ಮರುದಿನ 08:00ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ ನಿಲುಗಡೆ ನೀಡಲಾಗಿದೆ.
2. ರೈಲು ನಂ.06206 ಧಾರವಾಡದಿಂದ ಮೈಸೂರಿಗೆ ಪ್ರಯಾಣವನ್ನು ಎರಡು ಸಲ, ಅಂದರೆ, ಅಕ್ಟೋಬರ್ 23 ಮತ್ತು 25 ರಂದು ಪ್ರಾರಂಭಿಸುತ್ತದೆ. ರೈಲು ಧಾರವಾಡದಿಂದ 11:15 ಗಂಟೆಗೆ ಹೊರಡುತ್ತದೆ ಮತ್ತು ಅದೇ ದಿನ 21:30 ಗಂಟೆಗೆ ಮೈಸೂರು ತಲುಪುತ್ತದೆ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
3. ರೈಲು ಸಂಖ್ಯೆ.06205 ಮತ್ತು 06206 ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
4.. ರೈಲು ನಂ.06203 ಅಕ್ಟೋಬರ್ 20 ರಂದು ಮೈಸೂರಿನಿಂದ ಬಿಜಾಪುರಕ್ಕೆ ಒಂದು ಬಾರಿಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತದೆ. ರೈಲು ಮೈಸೂರಿನಿಂದ 17:30 ಗಂಟೆಗೆ ಹೊರಟು ಮರುದಿನ 10:00 ಗಂಟೆಗೆ ಬಿಜಾಪುರ ತಲುಪಲಿದೆ. ರೈಲಿಗೆ ಮಾರ್ಗ ಮದ್ಯದಲ್ಲಿ ಮಂಡ್ಯ, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರಜಗಿ, ಹುಬ್ಬಳ್ಳಿ, ಹೊಳೆ ಆಲೂರು, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
5. ರೈಲು ನಂ.06204 ಬಿಜಾಪುರದಿಂದ ಮೈಸೂರಿಗೆ ಹಾಸನ ಮಾರ್ಗವಾಗಿ 21 ನೇ ಅಕ್ಟೋಬರ್ ರಂದು ದಸರಾ ವಿಶೇಷ ಪ್ರಯಾಣವನ್ನು ನಡೆಸಲಿದೆ. ರೈಲು ಬಿಜಾಪುರದಿಂದ 11:45 ಗಂಟೆಗೆ ಹೊರಟು ಮರುದಿನ 03:00 ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ ರೈಲಿಗೆ ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಹುಬ್ಬಳ್ಳಿ, ಕಾರಜಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆನರಸೀಪುರ ಮತ್ತು ಕೃಷ್ಣರಾಜನಗರದಲ್ಲಿ ವಾಣಿಜ್ಯ ನಿಲುಗಡೆ ಇರುತ್ತದೆ.
6. ರೈಲು ಸಂಖ್ಯೆ. 06203 ಮತ್ತು 06204 ಒಂದು ಎರಡನೆಯ ದರ್ಜೆ ಎಸಿ, ಮೂರು ಮೂರನೆಯ ದರ್ಜೆ ಎಸಿ, ಎಂಟು ಸ್ಲೀಪರ್ ದರ್ಜೆ ಮತ್ತು ನಾಲ್ಕು ದ್ವಿತೀಯ ದರ್ಜೆ ಆಸನದ ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
ಮೈಸೂರಿನಿಂದ ಚಾಮರಾಜನಗರ ಮತ್ತು ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ದಸರಾ ವಿಶೇಷ ರೈಲುಗಳ ಸಮಯ ಪರಿಷ್ಕರಣೆ
1. ರೈಲು ಸಂಖ್ಯೆ.06597 ಈಗ ಕೆಎಸ್‌ಆರ್ ಬೆಂಗಳೂರಿನಿಂದ 17:00 ಗಂಟೆಗೆ ಹೊರಟು 20:15 ಗಂಟೆಗೆ ಮೈಸೂರು ತಲುಪಲಿದೆ ಮತ್ತು ಪ್ರತಿಯಾಗಿ ರೈಲು ನಂ.06598 ಮೈಸೂರಿನಿಂದ 20:30 ಗಂಟೆಗೆ ಹೊರಟು 23:30 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ವಿಶೇಷ ರೈಲುಗಳು ಹೆಚ್ಚುವರಿ ಜನದಟ್ಟಣೆ ತೆರವುಗೊಳಿಸಲು ಅಕ್ಟೋಬರ್ 20 ರಿಂದ ಅಕ್ಟೋಬರ್ 24 ರವರೆಗೆ ಸೇವೆಗಳನ್ನು ಹೊಂದಿರುತ್ತವೆ.
2. ರೈಲು ನಂ.06283 ಮೈಸೂರಿನಿಂದ ಚಾಮರಾಜನಗರಕ್ಕೆ ಅಕ್ಟೋಬರ್ 24 ರಂದು 20:45 ಗಂಟೆಗೆ ಮೈಸೂರಿನಿಂದ ಹೊರಟು 22:40 ಗಂಟೆಗೆ ಚಾಮರಾಜನಗರ ತಲುಪಲಿದೆ. ಮತ್ತು ಹಿಂದಿರುಗುವ ದಿಕ್ಕಿನಲ್ಲಿ ರೈಲು ನಂ.06284 ಅಕ್ಟೋಬರ್ 24 ರಂದು 23:00 ಗಂಟೆಗೆ ಚಾಮರಾಜನಗರದಿಂದ ಹೊರಟು ಮರುದಿನ 01:00 ಗಂಟೆಗೆ ಮೈಸೂರಿಗೆ ತಲುಪುತ್ತದೆ.
ಪ್ರಯಾಣಿಸುವ ಸಾರ್ವಜನಿಕರು ಈ ದಸರಾ ಹಬ್ಬದ ಋತುವಿನಲ್ಲಿ ತೊಂದರೆ ರಹಿತ ಪ್ರಯಾಣಕ್ಕಾಗಿ ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳಬಹುದು ಮತ್ತು ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್‌ಗಳನ್ನು ತೊಂದರೆ ಮುಕ್ತವಾಗಿ ಖರೀದಿಸಲು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ನೈಋತ್ಯ ರೈಲ್ವೆ ಇಲಾಖೆ ಮನವಿ ಮಾಡಿಕೊಂಡಿದೆ.
-
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ?












Click it and Unblock the Notifications