ಬಿಜೆಪಿ ಹಣ ದುರುಪಯೋಗ ಆರೋಪ ನಿಜವಾಯ್ತೆ!: ಗೃಹ ಸಚಿವರ ರಾಜೀನಾಮೆ ಹೇಳಿಕೆ: ಸಂತೋಷ್ ಲಾಡ್
ಧಾರವಾಡ, ಫೆಬ್ರವರಿ 24: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಗೃಹ ಸಚಿವರು ಜಿ.ಪರಮೇಶ್ವರ ಅವರು ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಆರೋಪಗಳು ಮಾಡಿತ್ತು. ಇದನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಒಪ್ಪಿಕೊಂಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಕಾರ್ಮಿಕ ಸಚಿವರು, 'ಪರಿಶಿಷ್ಟ ಜಾತಿ ಪಂಗಡದವರ ಅಭವೃದ್ಧಿಗಾಗಿ ಇರುವ ವಿಶೇಷ ಘಟಕ ಯೋಜನೆ ಅನುದಾನದ (SCSP-TSP)' ಹಣವನ್ನು ಬೇರೆ ಯೋಜನೆಗೆ ಬಳಕೆ ಆಗಿರುವುದು ನಿಜವೆಂದು ಹೇಳಿದ್ದಾರೆ. ಇದು ನೋಡಿದರೆ, ಪರಿಶಿಷ್ಠರ ಅಭಿವೃದ್ಧಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗಿದೆ ಎನ್ನುತ್ತಿದ್ದ ಬಿಜೆಪಿಯವರ ಆರೋಪ ನಿಜವೆಂದು ಅನ್ನಿಸುತ್ತಿದೆ. ಆದರೆ ಕಾರ್ಮಿಕ ಸಚಿವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಪರಿಶಿಷ್ಟ ಜಾತಿ ಪಂಗಡದವರ ಅಭವೃದ್ಧಿಗಾಗಿ ಇರುವ ವಿಶೇಷ ಘಟಕ ಯೋಜನೆ ಅನುದಾನದ (SCSP-TSP)' ಹಣವು ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಬಳಸಿಕೊಂಡಿದೆ. ಮುಖ್ಯಮಂತ್ರಿಗಳಿಗೆ ಕೆಲವು ಸಚಿವರು ಈ ಬಗ್ಗೆ ಒತ್ತಡ ಹೇರಿದ್ದರು. ಹೀಗಾಗಿ ಬಳಕೆ ಆಗಿರುವುದು ನಿಜ ಎಂದರು.
ಈ ಬಗ್ಗೆ ಮುಖ್ಯಮಂತ್ರಿಗಳು ತಿರ್ಮಾನ ಕೈಗೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಪರಿಶಿಷ್ಠರ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಹಣವು ಬಳಕೆ ಆಗಿದೆ ಎಂದರ್ಥವಲ್ಲ. ಸ್ವಲ್ಪವೇ ಹಣ ಮಾತ್ರ ಬಳಕೆ ಆಗಿದೆ. ಇದರಿಂದ ಅವರ ಅಭಿವೃದ್ಧಿಗೆ ತೊಂದರೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅವರು ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಎಸ್ ಸಿ ಪಿ , ಟಿ ಎಸ್ ಪಿ ಹಣ ದುರ್ಬಳಕೆ ಎಂದು ಆರಂಭಿಸಿದ್ದೇ ಇದೇ ಬಿಜೆಪಿಯವರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಈಗ ಮಾಧ್ಯಮಗಳು ನಮ್ಮನ್ನು ಮಾತ್ರವೇ ಪ್ರಶ್ನೆ ಮಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪರಿಶಿಷ್ಠರ ಅಭಿವೃದ್ಧಿಗೆ ಎಷ್ಟು ಕೊಟ್ಟಿದ್ದಾರೆ ಹೇಳಿ?. 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಎಲ್ಲಾದ್ದರೂ ಎಸ್ ಸಿ ಪಿ , ಟಿ ಎಸ್ ಪಿ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದಾರಾ?. ಕಾಂಗ್ರೆಸ್ ನಾವು ಜಾರಿ ಮಾಡಿದ ಮೇಲೆ ಅವರು ಏನಾದರೂ ಮಾಡುತ್ತಾರೆ.
ಬಿಜೆಪಿ ನಾಯಕರು 2018 ರಿಂದ 2023 ರವೆಗೆ ಎಷ್ಟು ಖರ್ಚು ಮಾಡಿದೆ. ಈ ಬಗ್ಗೆ ಚರ್ಚೆ ಮಾಡಿ ಜನಸಾಮಾನ್ಯರಿಗೆ ಹೇಳಿ ನೋಡೋಣ. ರಾಜಸ್ತಾನದಲ್ಲಿ 40 ವರ್ಷ ಬಿಜೆಪಿ ಅವರು ಆಳಿದ್ದಾರೆ. ಆದರೆ ಅಲ್ಲಿ ಎಸ್ ಸಿ ಪಿ , ಟಿ ಎಸ್ ಪಿ ಕಾಮಾಗಾರಿಯನ್ನು ಜಾರಿ ಮಾಡಿದ್ದಾರೆ. ಸಿಎಂ ಅವರಿಗೆ ಶಾಸಕರುಗಳು ಬಳಕೆ ಮಾಡಿಕ್ಕೊಳ್ಳಲು ಹೇಳಿದ್ದಾರೆ. ಶೇಕಡಾ 24 ರಷ್ಟು ಎಸ್ ಸಿ ಪಿ, ಟಿ ಎಸ್ ಪಿ, ಕಾಮಗಾರಿಗಳಿಗೆ ಬಜೆಟ್ ಇರುತ್ತದೆ.
ಬಿಜೆಪಿಯು ಯಾವುದೇ ಒಂದು ರಾಜ್ಯದಲ್ಲಿ ಎಸ್ ಸಿ ಪಿ, ಟಿ ಎಸ್ ಪಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿದ್ದಾರಾ? ಎಂದು ಬಿಜೆಪಿ ಹಾಗೂ ಮಾಧ್ಯಮಗಳನ್ನು ಪ್ರಶ್ನೆ ಮಾಡಿದರು.
ಗೃಹ ಸಚಿವರ ರಾಜೀನಾಮೆ: ಸಂತೋಷ್ ಲಾಡ್ ರಿಯಾಕ್ಷನ್
ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜಿನಾಮೆ ವಿಚಾರ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಸಚಿವ ಸ್ಥಾನದ ರಾಜೀನಾಮೆ ಬಗ್ಗೆ ಮಾತನಾಡಿದ್ದು ಅವರು (ಜಿ.ಪರಮೇಶ್ವರ). ಅವರು ಯಾವ ಕಾರಣಕ್ಕೆ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈಬಗ್ಗೆ ಅವರನ್ನೇ ಕೇಳಬೇಕು ಎಂದು ತಿಳಿಸಿರು.
ಜಿ.ಪರಮೇಶ್ವರರು ಹೇಳಿದ್ದೇನು?
ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು ಕೊರಟಗೆರೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಅವರ ಅನಿಸಿಕೆ ಆಧಾರದ ಮೇಲೆ ಹೇಳಿದ್ದೇನೆ. ನನ್ನ ಈ ಹೇಳಿಕೆಗೆ ಇನ್ನಿಲ್ಲದ ಮಹತ್ವ ಕೊಡುವುದು ಅನವಶ್ಯಕ. ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ನನ್ನ ರಾಜಕೀಯ ನನ್ನ ಕ್ಷೇತ್ರದ ಜನರಿಗೆ ಬಿಟ್ಟಿದ್ದು. ಅವರು ನನಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಆಪೇಕ್ಷೆಯಂತೆ ನಾನು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications